ಆತನು ಶಾಂತ ಮಾಡಿದರೆ ಯಾವನು ಕೇಡು ಮಾಡುವನು? ಆತನು ಮುಖವನ್ನು ಮರೆಮಾಡಿದರೆ ಆತನನ್ನು ದೃಷ್ಟಿಸುವವನು ಯಾರು? ಜನಾಂಗಕ್ಕೆ ವಿರೋಧವಾಗಿ ಮಾಡಿದರೂ ಸರಿ, ಮನುಷ್ಯ ಮಾತ್ರದ ವರಿಗಾದರೂ ಸರಿಯೇ.
Cross references
ಆಗ ಆತನು--ನನ್ನ ಸನ್ನಿಧಾನವು ನಿನ್ನ ಸಂಗಡ ಹೋಗುವದು; ನಾನು ನಿನಗೆ ವಿಶ್ರಾಂತಿಯನ್ನು ಕೊಡುವೆನು ಅಂದನು.
ಕರ್ತನು ಅರಸನಿಗೆ ಅವನ ಸುತ್ತಲಿದ್ದ ಎಲ್ಲಾ ಶತ್ರುಗಳಿಂದ ತಪ್ಪಿಸಿ ವಿಶ್ರಾಂತಿ ಯನ್ನು ಕೊಟ್ಟ ತರುವಾಯ ಅರಸನು ತನ್ನ ಮನೆ ಯಲ್ಲಿ ಕುಳಿತುಕೊಂಡಿದ್ದಾಗ ಏನಾಯಿತಂದರೆ,
ನಿನ್ನನ್ನು ನಿನ್ನ ಎಲ್ಲಾ ಶತ್ರುಗಳಿಗೆ ತಪ್ಪಿಸಿ ನಿನಗೆ ವಿಶ್ರಾಂತಿಯನ್ನು ಉಂಟುಮಾಡಿದೆನು.
ಇಸ್ರಾಯೇಲಿನ ಅರಸನಾಗಿರುವ ಏಲನ ಮಗ ನಾದ ಹೋಶೇಯನ ಆಳ್ವಿಕೆಯ ಏಳನೇ ವರುಷದಲ್ಲಿ, ಅರಸನಾಗಿರುವ ಹಿಜ್ಕೀಯನ ನಾಲ್ಕನೇ ವರುಷದಲ್ಲಿ ಏನಾಯಿತಂದರೆ, ಅಶ್ಶೂರಿನ ಅರಸನಾದ ಶಲ್ಮನೆಸೆರನು ಸಮಾರ್ಯದ ಮೇಲೆ ಬಂದು ಅದನ್ನು ಮುತ್ತಿಗೆ ಹಾಕಿದನು.
ಆದದರಿಂದ ಯೆಹೋಷಾಫಾಟನ ರಾಜ್ಯವು ಶಾಂತವಾಗಿತ್ತು; ಅವನ ದೇವರು ಸುತ್ತಲೂ ಅವನಿಗೆ ವಿಶ್ರಾಂತಿ ಕೊಟ್ಟನು.
ಇದಲ್ಲದೆ ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ ಜನರೂ ಜನಾಂಗಗಳ ಅಸಹ್ಯ ಗಳನ್ನು ಹಿಂಬಾಲಿಸಿ ಬಹಳವಾಗಿ ಅಪರಾಧ ಮಾಡಿ ಕರ್ತನು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು.
ಇಗೋ, ಆತನು ಕೆಡವುತ್ತಾನೆ; ಅದು ತಿರುಗಿ ಕಟ್ಟಲ್ಪಡುವದಿಲ್ಲ. ಆತನು ಮನುಷ್ಯನಿಂದ ಮುಚ್ಚಿಬಿಡುತ್ತಾನೆ; ಅದು ತೆರೆ ಯಲ್ಪಡುವದಿಲ್ಲ.
ಇಗೋ, ನಾನು ಮುಂದೆ ನಡೆದರೆ ಆತನು ಅಲ್ಲಿ ಇರುವದಿಲ್ಲ; ಹಿಂತಿರುಗಿದರೆ ಆತನನ್ನು ಗ್ರಹಿಸುವದಿಲ್ಲ.
ಎಡಗಡೆಯಲ್ಲಿ, ಆತನು ಕೆಲಸ ಮಾಡು ವಲ್ಲಿ ಆತನನ್ನು ನೋಡುವದಿಲ್ಲ; ಬಲಗಡೆಯಲ್ಲಿ ಆತನು ಅಡಗಿಸಿಕೊಳ್ಳುತ್ತಾನೆ, ನಾನು ಕಾಣುವದಿಲ್ಲ.
ಆದರೆ ಆತನು ಒಂದೇ ಮನಸ್ಸುಳ್ಳವನು, ಆತ ನನ್ನು ತಿರುಗಿಸುವವನ್ಯಾರು? ತನ್ನ ಪ್ರಾಣವು ಅಪೇ ಕ್ಷಿಸುವ ಪ್ರಕಾರವೇ ಮಾಡುತ್ತಾನೆ.
ಯೋಬನು ಮತ್ತೆ ತನ್ನ ಪ್ರಸ್ತಾಪವನ್ನೆತ್ತಿ ಹೇಳಿದ್ದೇನಂದರೆ--
ಓ ಕರ್ತನೇ, ಎಷ್ಟರ ವರೆಗೆ ನನ್ನನ್ನು ಮರೆಯುವಿ? ಎಂದೆಂದಿಗೂ ಮರೆಯು ವಿಯೋ? ಎಷ್ಟರ ವರೆಗೆ ನಿನ್ನ ಮುಖವನ್ನು ನನ್ನಿಂದ ಮರೆಮಾಡುವಿ?
ನಿನ್ನ ಮುಖವನ್ನು ನನಗೆ ಮರೆಮಾಡಬೇಡ; ನಿನ್ನ ಸೇವಕನನ್ನು ಕೋಪದಿಂದ ತಳ್ಳಬೇಡ; ನೀನು ನನಗೆ ಸಹಾಯಕನಾಗಿದ್ದೀ; ನನ್ನನ್ನು ವಿಸರ್ಜಿಸಬೇಡ; ನನ್ನ ರಕ್ಷಣೆಯ ಓ ದೇವರೇ, ನನ್ನನ್ನು ಬಿಟ್ಟುಬಿಡಬೇಡ.
ಕರ್ತನೇ, ನಿನ್ನ ಕಟಾ ಕ್ಷದಿಂದ ನನ್ನ ಬೆಟ್ಟವು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದೀ, ನಿನ್ನ ಮುಖವನ್ನು ಮರೆಮಾಡಲು ಕಳವಳಗೊಂಡೆನು.
ಜನಾಂಗಗಳನ್ನು ಶಿಕ್ಷಿಸುವ ವನೂ ಮನುಷ್ಯನಿಗೆ ತಿಳುವಳಿಕೆಯನ್ನು ಕಲಿಸುವವನೂ ಗದರಿಸನೋ?
ಓ ಕರ್ತನೇ, ನನಗೆ ಬೇಗನೆ ಉತ್ತರಕೊಡು; ನನ್ನ ಪ್ರಾಣವು ಕುಂದಿಹೋಗಿದೆ; ನಾನು ಕುಣಿಯಲ್ಲಿ ಇಳಿಯುವವರಿಗೆ ಸಮಾನವಾಗದ ಹಾಗೆ ನಿನ್ನ ಮುಖ ವನ್ನು ನನಗೆ ಮರೆಮಾಡಬೇಡ.
ಕರ್ತನು ನಿಮ್ಮ ಸಂಕಟದಿಂದಲೂ ಕಳವಳದಿಂದ ಲೂ ಕಠಿಣವಾದ ಬಿಟ್ಟಿಯ ಸೇವೆಯಿಂದಲೂ ನಿಮ್ಮನ್ನು ವಿಶ್ರಾಂತಿಗೊಳಿಸುವ ದಿನದಲ್ಲಿ ಬಾಬೆಲಿನ ರಾಜನಿಗೆ ವಿರುದ್ಧವಾದ ಈ ಸಾಮತಿಯನ್ನು (ಪದ್ಯವನ್ನು) ನೀವು ಹೀಗೆ ಎತ್ತಿ ಹೇಳಬೇಕು.
ದೃಢಮನಸ್ಸುಳ್ಳವನನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವಿ. ಅವನಿಗೆ ನಿನ್ನಲ್ಲಿ ಭರವಸವಿದೆ.
ನೀತಿಯ ಕೆಲಸವು ಸಮಾಧಾನವೂ ನೀತಿಯ ಫಲವು ನಿತ್ಯವಾದ ಶಾಂತಿಯೂ ಭರವಸವೂ ಆಗಿರುವದು.
ಮುಂಚೆ ಇದ್ದ ಹಿಂದಿನ ಪ್ರವಾದಿಗಳು ಅನೇಕ ದೇಶಗಳಿಗೂ ದೊಡ್ಡ ರಾಜ್ಯ ಗಳಿಗೂ ವಿರೋಧವಾಗಿ ಯುದ್ಧವನ್ನೂ ಕೇಡನ್ನೂ ಜಾಡ್ಯವನ್ನೂ ಕುರಿತು ಪ್ರವಾದಿಸಿದರು.
ನಾನೇ ನನ್ನ ಮಂದೆಯನ್ನು ಮೇಯಿಸಿ, ನಾನೇ ಅವುಗಳನ್ನು ಮಲಗಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
ನಾನು ನಿಮಗೆ ಸಮಾಧಾನವನ್ನು ಬಿಟ್ಟು ಹೋಗುತ್ತೇನೆ, ನನ್ನ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಲ್ಲಿ ನಾನು ನಿಮಗೆ ಕೊಡುವದಿಲ್ಲ, ನಿಮ್ಮ ಹೃದಯವು ಕಳವಳಗೊಳ್ಳ ದಿರಲಿ ಇಲ್ಲವೆ ಅಂಜದಿರಲಿ.
ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?
ಆಗ ಎಲ್ಲಾ ಗ್ರಹಿಕೆಯನ್ನೂ ವಿಾರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನೂ ಮನಸ್ಸು ಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವದು.