Home Bibles ☰ Books ಯೋಬ 33:28 · ಕನ್ನಡ ಬೈಬಲ್
ಯೋಬ 33:28 · ಕನ್ನಡ ಬೈಬಲ್

ಆತನು ಅವನ ಪ್ರಾಣವು ಕುಣಿಗೆ ಹೋಗದಂತೆ ಕಾಪಾಡುವನು. ಅವನ ಪ್ರಾಣವು ಬೆಳಕನ್ನು ನೋಡುವದು.

Cross references

ಯೋಬ 3:9

ಅದರ ಸಂಧ್ಯಾರುಣದ ನಕ್ಷತ್ರಗಳು ಕಪ್ಪಾಗಲಿ; ಅದು ಬೆಳಕಿಗೋಸ್ಕರ ಕಾದು ಕೊಳ್ಳಲೂ ಬಾರದಿರಲಿ; ಅದು ದಿನದ ಉದಯವನ್ನು ನೋಡದಿರಲಿ.

ಯೋಬ 3:16

ಇಲ್ಲವೆ ಮರೆಯಾದ ಗರ್ಭ ಪತನದ ಹಾಗೆಯೂ ಬೆಳಕನ್ನು ನೋಡದ ಕೂಸುಗಳ ಹಾಗೆಯೂ ಇಲ್ಲದೆ ಇರುವೆನು.

ಯೋಬ 3:20

ಕಷ್ಟದಲ್ಲಿರುವವನಿಗೆ ಬೆಳಕೂ ಕಹಿಯಾದ ಪ್ರಾಣ ವುಳ್ಳವರಿಗೆ ಜೀವವೂ ಯಾಕೆ ಕೊಡಲ್ಪಟ್ಟಿವೆ?

ಯೋಬ 17:16

ನಮ್ಮ ಸಂಗಡ ಧೂಳಿನಲ್ಲಿ ವಿಶ್ರಾಂತಿಯಲ್ಲಿರುವಾಗ ಅವರು ಪಾತಾಳದ ಅಗುಳಿಗಳಿಗೆ ಇಳಿದು ಹೋಗುವರು.

ಯೋಬ 22:28

ನೀನು ಏನಾದರೂ ನಿರ್ಣಯಿಸಿದರೆ ಅದು ನಿನಗೆ ಸ್ಥಿರವಾಗುವದು ಮತ್ತು ನಿನ್ನ ಮಾರ್ಗಗಳಲ್ಲಿ ಬೆಳಕು ಮೂಡುವದು.

ಯೋಬ 33:18

ಅವನ ಪ್ರಾಣವನ್ನು ಕುಣಿಯಿಂದ ಲೂ ಅವನ ಜೀವವನ್ನು ಕತ್ತಿಯಿಂದ ನಾಶವಾಗದ ಹಾಗೆಯೂ ಕಾಪಾಡುತ್ತಾನೆ.

ಯೋಬ 33:20

ಅವನ ಜೀವಕ್ಕೆ ರೊಟ್ಟಿಯೂ ಅವನ ಪ್ರಾಣಕ್ಕೆ ಸವಿ ಊಟವೂ ಅಸಹ್ಯವಾಗಿವೆ.

ಯೋಬ 33:22

ಹೌದು, ಅವನ ಆತ್ಮವು ಸಮಾಧಿಗೂ ಅವನ ಪ್ರಾಣವು ನಾಶಮಾಡುವವರ ಸವಿಾಪಕ್ಕೂ ಎಳೆಯಲ್ಪ ಡುತ್ತದೆ.

ಯೋಬ 33:24

ಆಗ ಆತನು ಅವನಿಗೆ ಕೃಪಾಳುವಾಗಿದ್ದು ಕುಣಿಗೆ ಇಳಿಯು ವದರಿಂದ ಅವನನ್ನು ಬಿಡಿಸುತ್ತಾನೆ; ನಾನು ವಿಮೋ ಚನೆಯ ಕ್ರಯವನ್ನು ಕಂಡುಕೊಂಡೆನು.

ಕೀರ್ತನೆಗಳು 49:19

ಅವನು ತನ್ನ ತಂದೆಗಳ ವಂಶದ ಬಳಿಗೆ ಹೋಗುವನು; ಅವರು ಬೆಳಕನ್ನು ಎಂದಿಗೂ ನೋಡು ವದಿಲ್ಲ.ಮನುಷ್ಯನು ಘನತೆಯಲ್ಲಿದ್ದು ವಿವೇಕ ವಿಲ್ಲದವನಾದರೆ ಮಡಿದು ಹೋಗುವ ಪಶುಗಳಿಗೆ ಸಮಾನನಾಗಿದ್ದಾನೆ.

ಕೀರ್ತನೆಗಳು 55:23

ಓ ದೇವರೇ, ನೀನು ಅವರನ್ನು ನಾಶನದ ಕುಣಿಯಲ್ಲಿ ಇಳಿಯ ಮಾಡುವಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಯದ ದಿವಸಗಳಲ್ಲಿ ಅರ್ದದಷ್ಟಾದರೂ ಜೀವಿ ಸುವದಿಲ್ಲ; ನಾನು ನಿನ್ನಲ್ಲಿ ಭರವಸವಿಡುತ್ತೇನೆ.

ಕೀರ್ತನೆಗಳು 69:15

ನೀರಿನ ಪ್ರವಾಹವು ನನ್ನ ಮೇಲೆ ಹಾದು ಹೋಗದೇ ಇರಲಿ; ಅಗಾಧವು ನನ್ನನ್ನು ನುಂಗದೆ ಇರಲಿ; ಕುಣಿಯು ನನಗಾಗಿ ತನ್ನ ಬಾಯನ್ನು ಮುಟ್ಟ ದಿರಲಿ.

ಕೀರ್ತನೆಗಳು 103:4

ನಿನ್ನ ಜೀವವನ್ನು ನಾಶದೊಳಗಿಂದ ವಿಮೋ ಚಿಸಿ ಪ್ರೀತಿ ಕೃಪೆಯನ್ನೂ ಅಂತಃಕರಣಗಳನ್ನೂ ನಿನಗೆ ಕಿರೀಟವಾಗಿ ಇಟ್ಟು

ಯೆಶಾಯ 9:2

ಕತ್ತಲೆಯಲ್ಲಿ ನಡೆಯುವ ಜನರು ದೊಡ್ಡ ಬೆಳಕನ್ನು ಕಂಡರು; ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ ಬೆಳಕು ಪ್ರಕಾಶಿ ಸುತ್ತದೆ.

ಯೆಶಾಯ 38:17

ಇಗೋ, ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು; ಆದರೆ ನನ್ನ ಆತ್ಮವನ್ನು ನಾಶಕೂಪದಿಂದ ಬಿಡುಗಡೆ ಮಾಡಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ.

ಯೋಹಾನ 11:9

ಯೇಸು--ಹಗಲಿಗೆ ಹನ್ನೆರಡು ತಾಸುಗಳು ಇವೆಯಲ್ಲವೇ? ಯಾವ ಮನುಷ್ಯನಾದರೂ ಹಗಲಿ ನಲ್ಲಿ ತಿರುಗಾಡಿದರೆ ಈ ಲೋಕದ ಬೆಳಕನ್ನು ನೋಡು ವದರಿಂದ ಅವನು ಎಡವುವದಿಲ್ಲ.

ಪ್ರಕಟನೆ 20:1

ಆಗ ಒಬ್ಬ ದೂತನು ತಳವಿಲ್ಲದ ತಗ್ಗಿನ ಬೀಗದ ಕೈಯನ್ನೂ ದೊಡ್ಡ ಸರಪಣಿ ಯನ್ನೂ ತನ್ನ ಕೈಯಲ್ಲಿ ಹಿಡಿದುಕೊಂಡು ಪರಲೋಕ ದಿಂದ ಇಳಿದು ಬರುವದನ್ನು ನಾನು ಕಂಡೆನು.

Interlinear

Choose Theme