ಯೋಬ 3:9 · ಕನ್ನಡ ಬೈಬಲ್
ಅದರ ಸಂಧ್ಯಾರುಣದ ನಕ್ಷತ್ರಗಳು ಕಪ್ಪಾಗಲಿ; ಅದು ಬೆಳಕಿಗೋಸ್ಕರ ಕಾದು ಕೊಳ್ಳಲೂ ಬಾರದಿರಲಿ; ಅದು ದಿನದ ಉದಯವನ್ನು ನೋಡದಿರಲಿ.
Cross references
ಯೋಬ 30:26
ನಾನು ಒಳ್ಳೇದನ್ನು ನಿರೀಕ್ಷಿಸಲು ಕೇಡುಬಂತು; ಬೆಳಕನ್ನು ಎದುರು ನೋಡಲು, ಅಂಧಕಾರ ಬಂತು.
ಯೋಬ 41:10
ಅದನ್ನು ಕದಲಿಸುವ ಹಾಗೆ ಕಠಿಣನು ಇಲ್ಲ. ಹಾಗಾದರೆ ನನ್ನ ಮುಂದೆ ನಿಂತು ಕೊಳ್ಳುವ ಹಾಗೆ ಯಾರು ಶಕ್ತರು?
ಯೋಬ 41:18
ಅದರ ಸೀನು ವಿಕೆಯಿಂದ ಬೆಳಕು ಹುಟ್ಟುವದು; ಅದರ ಕಣ್ಣುಗಳು ಉದಯದ ರೆಪ್ಪೆಗಳ ಹಾಗೆ ಇವೆ.
ಯೆರೆಮಿಯ 8:15
ಈ ಕಾರಣದಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ; ಇಗೋ, ನಾನು ಅವರಿಗೆ, ಹೌದು, ಈ ಜನರಿಗೆ, ಮಾಚಿಪತ್ರೆಯನ್ನು ತಿನ್ನುವದಕ್ಕೆ ಕೊಡು ತ್ತೇನೆ. ವಿಷದ ನೀರನ್ನು ಅವರಿಗೆ ಕುಡಿಯಲು ಕೊಡು ತ್ತೇನೆ.
ಯೆರೆಮಿಯ 13:16
ಅವರ ಪ್ರವಾದನೆಯನು ಕೇಳುವ ಜನರು ಕ್ಷಾಮದ ಮತ್ತು ಕತ್ತಿಯ ನಿಮಿತ್ತ ಯೆರೂಸಲೇಮಿನ ಬೀದಿಗಳಲ್ಲಿ ಬಿಸಾಡಲ್ಪಡುವರು; ಅವರನ್ನೂ ಹೆಂಡತಿಯರನ್ನೂ ಕುಮಾರರನ್ನೂ ಕುಮಾರ್ತೆಯರನ್ನೂ ಹೂಣಿಡುವದಕ್ಕೆ ಯಾರೂ ಇರು ವದಿಲ್ಲ; ನಾನು ಅವರ ಕೆಟ್ಟತನವನ್ನು ಅವರ ಮೇಲೆ ಹೊಯಿದು ಬಿಡುವೆನು.