Home Job 30 · ಕನ್ನಡ ಬೈಬಲ್

Job

Chapter 30

ಕನ್ನಡ ಬೈಬಲ್
1ಆದರೆ ಈ ದಿವಸಗಳಲ್ಲಿ ನನಗಿಂತ ಚಿಕ್ಕವರು ನನ್ನನ್ನು ನೋಡಿ ಪರಿಹಾಸ್ಯಮಾಡುತ್ತಾರೆ; ಅವರ ತಂದೆಗಳನ್ನು ನನ್ನ ಕುರಿಮಂದೆಯ ನಾಯಿಗಳ ಸಂಗಡ ಸೇರಿಸುವದಕ್ಕೂ ಅಯೋಗ್ಯರೆಂದೆನು
2ಹೌದು, ಅವರ ಕೈಗಳ ಶಕ್ತಿಯ ಲಾಭ ನನಗೆ ಯಾಕೆ? ಅವರಲ್ಲಿ ಮುದಿಪ್ರಾಯವು ನಾಶವಾಯಿತು.
3ಕೊರತೆ ಯಿಂದಲೂ ಬರದಿಂದಲೂ ಒಂಟಿಗರಾಗಿ ಪೂರ್ವ ದಲ್ಲಿ ಹಾಳೂ ಬೈಲೂ ಆದ ಅರಣ್ಯಕ್ಕೆ ಓಡುತ್ತಾರೆ;
4ಪೊದೆಯ ಹತ್ತಿರ ಉಪ್ಪಿನಸೊಪ್ಪು ಕೀಳುವವರಿಗೆ ಜಾಲಿಯ ಬೇರುಗಳೇ ಅವರ ರೊಟ್ಟಿ.
5ಜನರಿಂದ ಅವರನ್ನು ಹೊರಗೆ ಹಾಕುತ್ತಾರೆ; (ಕಳ್ಳರ ಹಿಂಡಿನಂತೆ ಅವರ ಹಿಂದೆ ಕೂಗುತ್ತಾರೆ).
6ಭಯಂಕರವಾದ ತಗ್ಗು ಗಳ ಸಂದುಗಳಲ್ಲಿಯೂ ಭೂಮಿಯ ಗುಹೆಗಳಲ್ಲಿಯೂ ಬಂಡೆಗಳಲ್ಲಿಯೂ ವಾಸವಾಗಿರಬೇಕು.
7ಪೊದೆಗಳ ನಡುವೆ ಕೂಗುತ್ತಾರೆ; ತುರಿಚಿಗಳ ಕೆಳಗೆ ಕೂಡುತ್ತಾರೆ.
8ಹುಚ್ಚರ ಮಕ್ಕಳಾಗಿಯೂ ಹೌದು, ಕೆಳಮಟ್ಟದವರ ಮಕ್ಕಳಾಗಿಯೂ ಇದ್ದರು.
9ಆದರೆ ಈಗ ನಾನು ಅವರ ಹಾಸ್ಯದ ರಾಗವೂ ಹೌದು, ಅವರಿಗೆ ಗಾದೆಯೂ ಆದೆನು.
10ನನ್ನನ್ನು ಅಸಹ್ಯಿಸುತ್ತಾರೆ; ನನಗೆ ದೂರ ವಾಗಿ ಓಡಿಹೋಗುತ್ತಾರೆ; ನನ್ನ ಮುಖದ ಮುಂದೆ ಉಗುಳಲು ಹಿಂದೆಗೆಯುವದಿಲ್ಲ.
11ಆತನು ತನ್ನ ಹಗ್ಗವನ್ನು ಸಡಲಿಸಿ ನನ್ನನ್ನು ಶ್ರಮೆ ಪಡಿಸುತ್ತಾನೆ; ನನ್ನ ಮುಖದ ಮುಂದೆ ಕಡಿವಾಣಕಿತ್ತು ಬಿಡುತ್ತಾರೆ;
12ಬಲಗಡೆಯಲ್ಲಿ ಯುವಕರು ಏಳುತ್ತಾರೆ; ಅವರು ನನ್ನ ಕಾಲುಗಳನ್ನು ದೂಡುತ್ತಾರೆ; ನಾಶಕರ ವಾದ ತಮ್ಮ ಹಾದಿಗಳನ್ನು ನನಗೆ ವಿರೋಧವಾಗಿ ಕಟ್ಟುತ್ತಾರೆ.
13ನನ್ನ ದಾರಿಯನ್ನೂ ಕೆಡಿಸುತ್ತಾರೆ; ನನ್ನ ನಷ್ಟಕ್ಕಾಗಿ ಸಹಾಯಮಾಡುತ್ತಾರೆ; ಅವರಿಗೆ ಸಹಾಯ ಕನಿಲ್ಲ.
14ಅವರು ಅಗಲವಾದ ಬಿರುಕಿನಲ್ಲಿ ನೀರು ಬರುವಂತೆ ಬಂದರು; ನಾಶದೊಂದಿಗೆ ಹೊರಳಿ ನನ್ನ ಮೇಲೆ ಅವರು ಬರುತ್ತಾರೆ.
15ದಿಗಿಲುಗಳು ನನ್ನ ಮೇಲೆ ಬಂದವೆ; ಅವು ಗಾಳಿಯ ಹಾಗೆ ನನ್ನ ಪ್ರಾಣ ವನ್ನು ಹಿಂದಟ್ಟುತ್ತವೆ; ಮೇಘದ ಹಾಗೆ ನನ್ನ ಕ್ಷೇಮವು ದಾಟಿ ಹೋಗುತ್ತದೆ.
16ಆದರೆ ಈಗ ನನ್ನ ಪ್ರಾಣವು ನನ್ನಲ್ಲಿ ಹೊಯ್ಯಲ್ಪಡುವದು; ದೀನತ್ವದ ದಿವಸಗಳು ನನ್ನನ್ನು ಹಿಡಿದವೆ.
17ರಾತ್ರಿಯಲ್ಲಿ ನನ್ನ ಎಲುಬುಗಳು ನನ್ನಲ್ಲಿ ತಿವಿಯಲ್ಪಡುತ್ತವೆ; ನನ್ನ ನರಗಳು ವಿಶ್ರಾಂತಿ ತೆಗೆದು ಕೊಳ್ಳುವದಿಲ್ಲ.
18ನನ್ನ ರೋಗದ ಮಹಾ ಶಕ್ತಿಯಿಂದ ನನ್ನ ವಸ್ತ್ರವು ಬದಲಾಗುತ್ತದೆ; ಅದು ನನ್ನ ಅಂಗಿಯ ಹಾಗೆ ನನ್ನನ್ನು ಬಂಧಿಸುತ್ತದೆ.
19ಆತನು ನನ್ನನ್ನು ಕೆಸರಿನಲ್ಲಿ ದೊಬ್ಬಿದ್ದಾನೆ; ದೂಳಿಗೂ ಬೂದಿಗೂ ಸಮಾನನಾದೆನು.
20ನಿನಗೆ ಮೊರೆಯಿಡುತ್ತೇನೆ, ಆದರೆ ನೀನು ಉತ್ತರ ಕೊಡುವದಿಲ್ಲ; ನಿಂತುಕೊಳ್ಳುತ್ತೇನೆ, ಆದರೆ ನೀನು ನನ್ನನ್ನು ಲಕ್ಷಿಸುವದಿಲ್ಲ.
21ನೀನು ನನಗೆ ಕ್ರೂರವಾದಿ; ನಿನ್ನ ಕೈಯ ಶಕ್ತಿಯಿಂದ, ನನ್ನನ್ನು ಎದುರಿಸುತ್ತೀ.
22ನನ್ನನ್ನು ಗಾಳಿಗೆ ಎತ್ತುತ್ತೀ; ಅದನ್ನು ಹತ್ತಿಹೋಗುವ ಹಾಗೆ ಮಾಡಿ, ನನ್ನನ್ನು ಪೂರ್ಣವಾಗಿ ಕ್ಷೀಣಮಾಡುತ್ತೀ.
23ಮರಣಕ್ಕೂ ಎಲ್ಲಾ ಜೀವಿಗಳ ನೇಮಕವಾದ ಮನೆಗೂ ನನ್ನನ್ನು ತಿರುಗಿಸುವಿ ಎಂದು ತಿಳಿದಿದ್ದೇನೆ.
24ಆದರೆ ಆತನ ನಾಶದಲ್ಲಿ ಅವರು ಮೊರೆಯಿಟ್ಟರೆ, ಸಮಾಧಿಗೆ ಆತನು ಕೈ ಚಾಚುವದಿಲ್ಲ.
25ಕಷ್ಟದಲ್ಲಿ ಇದ್ದವನಿಗೋಸ್ಕರ ನಾನು ಅತ್ತೆನಲ್ಲವೋ? ದರಿದ್ರನಿ ಗೋಸ್ಕರ ನನ್ನ ಪ್ರಾಣವು ದುಃಖಪಡಲಿಲ್ಲವೋ?
26ನಾನು ಒಳ್ಳೇದನ್ನು ನಿರೀಕ್ಷಿಸಲು ಕೇಡುಬಂತು; ಬೆಳಕನ್ನು ಎದುರು ನೋಡಲು, ಅಂಧಕಾರ ಬಂತು.
27ನನ್ನ ಕರುಳುಗಳು ಸುಮ್ಮನಿರದೆ ಬೇಯುತ್ತವೆ. ಸಂಕಟಗಳ ದಿವಸಗಳು ನನಗೆ ಮುಂಗೊಂಡವು.
28ಬಿಸಿಲು ಇಲ್ಲದೆ ದುಃಖಿಸುವವನಾಗಿ ನಾನು ಹೋದೆನು; ನಾನು ಸಭೆಯಲ್ಲಿ ಎದ್ದು ಕೂಗಿದೆನು.
29ಘಟಸರ್ಪಗಳಿಗೆ ಸಹೋದರನಾದೆನು; ಗೂಬೆ ಗಳಿಗೆ ನಾನು ಜೊತೆಯವನಾದೆನು.
30ನನ್ನ ಮೇಲಿನ ಚರ್ಮವು ಕಪ್ಪಗಾಯಿತು; ನನ್ನ ಎಲುಬುಗಳು ಉಷ್ಣ ದಿಂದ ಬೆಂದಿವೆ.ನನ್ನ ಕಿನ್ನರಿ ಗೋಳಾಟವೂ ನನ್ನ ಕೊಳಲು ಅಳುವವರ ಶಬ್ಧವೂ ಆಯಿತು.
31ನನ್ನ ಕಿನ್ನರಿ ಗೋಳಾಟವೂ ನನ್ನ ಕೊಳಲು ಅಳುವವರ ಶಬ್ಧವೂ ಆಯಿತು.
Bible Study with Steffi App

Memorize verses with spaced repetition. Free, no ads, 15+ languages.

Download Free ↗

Choose Theme