ಅದು ನನ್ನ ತಾಯಿಯ ಗರ್ಭದ ಬಾಗಲನ್ನು ಮುಚ್ಚಲಿಲ್ಲ; ದುಃಖವನ್ನು ನನ್ನ ಕಣ್ಣುಗಳಿಗೆ ಮರೆಮಾಡಲಿಲ್ಲ.
Cross references
ಕರ್ತನು ಅಬ್ರಹಾಮನ ಹೆಂಡತಿಯಾದ ಸಾರಳ ನಿಮಿತ್ತ ಅಬೀಮೆಲೆಕನ ಮನೆಯಲ್ಲಿದ್ದ ಸ್ತ್ರೀಯರೆಲ್ಲರೂ ಬಂಜೆಯರಾಗುವಂತೆ ಮಾಡಿದ್ದನು.
ಲೇಯಳು ತಾತ್ಸಾರವಾದಳೆಂದು ಕರ್ತನು ನೋಡಿ ಅವಳ ಗರ್ಭವನ್ನು ತೆರೆದನು. ಆದರೆ ರಾಹೇಲಳು ಬಂಜೆಯಾಗಿದ್ದಳು.
ಹನ್ನಳಿಗೆ ಯೋಗ್ಯ ವಾದ ಪಾಲನ್ನು ಕೊಟ್ಟು ಹನ್ನಳನ್ನು ಪ್ರೀತಿಮಾಡಿ ದನು. ಆದರೆ ಕರ್ತನು ಅವಳ ಗರ್ಭವನ್ನು ಮುಚ್ಚಿ ದ್ದನು.
ನನ್ನ ವ್ಯಥೆಯನ್ನೆಲ್ಲಾ ತೂಗಿದರೆ, ನನ್ನ ಶ್ರಮೆಯನ್ನು ತ್ರಾಸಿನಲ್ಲಿಟ್ಟರೆ ಲೇಸು.
ನನ್ನ ಪ್ರಾಣವು ನನ್ನ ಜೀವನಕ್ಕಾಗಿ ಬೇಸರಗೊಂಡಿದೆ. ನನ್ನ ದೂರುಗಳನ್ನು ನನ್ನ ಮೇಲೆಯೇ ಬಿಡುವೆನು; ನನ್ನ ಮನೋವ್ಯಥೆ ಯಿಂದ ಮಾತನಾಡುವೆನು.
ಹಾಗಾದರೆ ಯಾಕೆ ನನ್ನನ್ನು ಗರ್ಭದಿಂದ ಹೊರಡ ಮಾಡಿದಿ? ಯಾವ ಕಣ್ಣು ನನ್ನನ್ನು ನೋಡದ ಹಾಗೆ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.
ಈಹೊತ್ತೇ ನನ್ನ ದೂರು ಕಹಿಯಾಗಿದೆ; ನನ್ನ ಏಟು ನನ್ನ ನಿಟ್ಟುಸುರಿಗಿಂತ ಭಾರವಾಗಿದೆ.
ತನ್ನ ವರುಷಗಳ ದಿನಗಳು ಬಹಳವಾಗಿದ್ದು ತನ್ನ ಪ್ರಾಣವು ಸುಖದಿಂದ ತೃಪ್ತಿ ಪಡದೆ ತನಗೆ ಹೂಣಿಡುವಿಕೆಯು ಇಲ್ಲದೇ ಅವನು ನೂರು ಮಕ್ಕಳನ್ನು ಪಡೆದು ಅನೇಕ ವರುಷಗಳು ಬದುಕಿದರೆ ನಾನು ಹೇಳುವದೇನಂದರೆ, ಅವನಿ ಗಿಂತಲೂ ಇನ್ನು ಹುಟ್ಟದಿರುವವನೇ ಉತ್ತಮ.
ಆದಕಾರಣ ನಿನ್ನ ಹೃದಯದಿಂದ ದುಃಖವನ್ನು ತೆಗೆದು ಹಾಕು; ನಿನ್ನ ಶರೀರದಿಂದ ಕೆಟ್ಟದ್ದನ್ನು ತೆಗೆದುಬಿಡು; ಬಾಲ್ಯವೂ ಯೌವನವೂ ವ್ಯರ್ಥವಾಗಿವೆ.