Home Bibles ಯೋಬ 27:2 · ಕನ್ನಡ ಬೈಬಲ್
ಯೋಬ 27:2 · ಕನ್ನಡ ಬೈಬಲ್

ನನ್ನ ನ್ಯಾಯವನ್ನು ತೊಲಗಿಸಿದ ದೇವರ ಜೀವದೊಂದಿಗೆ ನನ್ನ ಜೀವವನ್ನು ಕಹಿಮಾಡಿದ ಸರ್ವಶಕ್ತನ ಜೀವದೊಂದಿಗೆ

Cross references

ಅಂಕೆಗಳ ಪುಸ್ತಕ 14:21

ಆದಾಗ್ಯೂ ನನ್ನ ಜೀವದಾಣೆ, ಭೂಮಿಯೆಲ್ಲಾ ಕರ್ತನ ಮಹಿಮೆಯಿಂದ ತುಂಬಿರುವದು.

ರೂತ 1:20

ಆಗ ಆಕೆಯು ಅವರಿಗೆ ನನ್ನನ್ನು ನೊವೊಮಿ ಎಂದು ಕರೆಯಬೇಡಿರಿ; ಮಾರಾ ಎಂದು ಕರೆಯಿರಿ; ಯಾಕಂದರೆ ಸರ್ವಶಕ್ತನು ನನ್ನನ್ನು ಬಹು ದುಃಖದಲ್ಲಿ ನಡಿಸಿದನು.

ರೂತ 3:13

ಈ ರಾತ್ರಿಯಲ್ಲಿ ಇಲ್ಲಿರು; ನಾಳೆ ಬೆಳಿಗ್ಗೆ ಅವನು ನಿನಗೆ ಸಂಬಂಧಿಕನ ಕಾರ್ಯ ಮಾಡಿದರೆ ಒಳ್ಳೇದಾಯಿತು; ಅವನು ನಿನಗೆ ಸಂಬಂಧಿಕನ ಕಾರ್ಯಮಾಡಲು ಮನಸ್ಸಿಲ್ಲದೆ ಇದ್ದರೆ ಕರ್ತನ ಜೀವದಾಣೆ--ನಾನೇ ನಿನಗೆ ಸಂಬಂಧಿಕನ ಕಾರ್ಯ ಮಾಡುತ್ತೇನೆ. ಉದಯ ಕಾಲದ ವರೆಗೂ ಮಲಗಿರು ಅಂದನು.

1 ಸಮುವೇಲ 14:39

ನನ್ನ ಕುಮಾರನಾದ ಯೋನಾತಾನ ನಿಂದಾದರೂ ಉಂಟಾಗಿದ್ದರೆ ಅವನು ಸಾಯಲೇ ಸಾಯುವನೆಂದು ಇಸ್ರಾಯೇಲನ್ನು ರಕ್ಷಿಸುವ ಕರ್ತನ ಮೇಲೆ ಆಣೆ ಇಟ್ಟು ಹೇಳುತ್ತೇನೆ ಅಂದನು. ಆದರೆ ಸಕಲ ಜನರಲ್ಲಿ ಒಬ್ಬನಾದರೂ ಅವನಿಗೆ ಪ್ರತ್ಯುತ್ತರ ಕೊಡಲಿಲ್ಲ.

1 ಸಮುವೇಲ 14:45

ಆದರೆ ಜನರು ಸೌಲನಿಗೆ--ಇಸ್ರಾಯೇಲಿನಲ್ಲಿ ಈ ದೊಡ್ಡ ರಕ್ಷಣೆ ಯನ್ನುಂಟು ಮಾಡಿದ ಯೋನಾತಾನನು ಸಾಯ ಬಹುದೋ? ಅದು ಎಂದಿಗೂ ಆಗದು; ಅವನು ಇಂದು ಕರ್ತನ ಸಹಾಯದ ಮೂಲಕ ಕಾರ್ಯವನ್ನು ನಡಿಸಿದ್ದರಿಂದ ಕರ್ತನ ಆಣೆ, ಅವನ ತಲೆಯಲ್ಲಿರುವ ಒಂದು ಕೂದಲಾದರೂ ನೆಲದ ಮೇಲೆ ಬೀಳಬಾರದು ಅಂದರು. ಜನರು ಯೋನಾತಾನನನ್ನು ಸಾಯದ ಹಾಗೆ ಬಿಡಿಸಿಕೊಂಡರು.

1 ಸಮುವೇಲ 20:21

ಇಗೋ, ಹುಡುಗ ನನ್ನು ಕಳುಹಿಸಿ--ಆ ಬಾಣಗಳನ್ನು ಹುಡುಕಿಕೊಂಡು ಬಾ ಎಂದು ಹೇಳುವೆನು. ಇಗೋ, ಆ ಬಾಣಗಳು ಈಚೆ ಬಿದ್ದಿರುತ್ತವೆ; ಅವುಗಳನ್ನು ತೆಗೆದುಕೊಂಡು ಬಾ ಎಂದು ನಾನು ಹುಡುಗನಿಗೆ ಹೇಳಿದರೆ ನೀನು ಬರ ಬಹುದು. ಯಾಕಂದರೆ ಕರ್ತನಾಣೆ, ನಿನಗೆ ಕೇಡಿಲ್ಲದೆ ಸಮಾಧಾನವಿರುವದು.

1 ಸಮುವೇಲ 25:26

ಆದಕಾರಣ ನನ್ನ ಒಡೆಯನೇ, ನೀನು ರಕ್ತ ಚೆಲ್ಲುವದಕ್ಕೂ ನಿನ್ನ ಕೈಯಿಂದ ನಿನಗೆ ಮುಯ್ಯಿ ತೀರಿಸಿಕೊಳ್ಳುವದಕ್ಕೂ ಹೋಗುವದನ್ನು ದೇವರು ಆಟಂಕ ಮಾಡಿದ್ದರಿಂದ ಕರ್ತನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಿನ್ನ ಶತ್ರುಗಳೂ ನನ್ನ ಒಡೆಯನಿಗೆ ಕೇಡನ್ನು ಹುಡುಕು ವವರೂ ನಾಬಾಲನ ಹಾಗೆಯೇ ಆಗಲಿ.

1 ಸಮುವೇಲ 25:34

ನಿನಗೆ ಕೇಡು ಮಾಡದ ಹಾಗೆ ನನಗೆ ಆಟಂಕ ಮಾಡಿದ ಇಸ್ರಾ ಯೇಲಿನ ದೇವರಾದ ಕರ್ತನ ಜೀವದಾಣೆ, ನೀನು ಬೇಗನೆ ಬಂದು ನನ್ನನ್ನು ಎದುರುಗೊಳ್ಳದೆ ಹೋಗಿದ್ದರೆ ಉದಯವಾಗುವಷ್ಟರಲ್ಲಿ ನಾಬಾಲನಿಗೆ ಒಬ್ಬನಾದರೂ ಉಳಿಯುತ್ತಿರಲಿಲ್ಲ ಅಂದನು.

2 ಸಮುವೇಲ 2:27

ಅದಕ್ಕೆ ಯೋವಾಬನು--ದೇವರ ಜೀವದಾಣೆ, ಉದಯದಲ್ಲಿ ನೀನು ಮಾತನಾಡದೆ ಹೋದರೆ ನಿಶ್ಚಯ ವಾಗಿ ಜನರಲ್ಲಿ ಪ್ರತಿ ಮನುಷ್ಯನು ತನ್ನ ಸಹೋ ದರನ ಹಿಂದಿನಿಂದ ತಿರುಗಿ ಹೋಗುತ್ತಿದ್ದನು ಅಂದನು.

1 ಅರಸುಗಳು 17:1

ಗಿಲ್ಯಾದಿನ ನಿವಾಸಿಗಳಲ್ಲಿ ತಿಷ್ಬೀಯನಾದ ಎಲೀಯನು ಅಹಾಬನಿಗೆ--ಯಾವಾತನ ಸಮ್ಮುಖದಲ್ಲಿ ನಿಲ್ಲುತ್ತೇನೋ ಆ ಇಸ್ರಾಯೇಲಿನ ದೇವ ರಾದ ಕರ್ತನ ಜೀವದಾಣೆ, ನನ್ನ ಮಾತಿನ ಪ್ರಕಾರ ವಲ್ಲದೆ ಈ ವರ್ಷಗಳಲ್ಲಿ ಮಂಜೂ ಮಳೆಯೂ ಬೀಳು ವದಿಲ್ಲ ಅಂದನು.

1 ಅರಸುಗಳು 18:15

ಅದಕ್ಕೆ ಎಲೀಯನು--ಯಾವನ ಮುಂದೆ ನಾನು ನಿಲ್ಲುತ್ತೇನೋ, ಆ ಸೈನ್ಯಗಳ ಕರ್ತನ ಜೀವ ದಾಣೆ, ಇಂದು ನನ್ನನ್ನು ಅವನಿಗೆ ತೋರಿಸಿಕೊಳ್ಳುವೆನು ಅಂದನು.

2 ಅರಸುಗಳು 4:27

ಅವಳು--ಕ್ಷೇಮವು ಅಂದಳು. ಅವಳು ಬೆಟ್ಟದ ಮೇಲಿದ್ದ, ದೇವರ ಮನು ಷ್ಯನ ಬಳಿಗೆ ಬಂದು ಅವನ ಪಾದಗಳನ್ನು ಹಿಡಿದಳು. ಆದರೆ ಅವಳನ್ನು ತಳ್ಳಲು ಗೇಹಜಿಯು ಹತ್ತಿರ ಬಂದ ದರಿಂದ ದೇವರ ಮನುಷ್ಯನು--ಅವಳನ್ನು ಬಿಡು; ಅವಳ ಹೃದಯದಲ್ಲಿ ದುಃಖವಿದೆ; ಕರ್ತನು ಅದನ್ನು ನನಗೆ ತಿಳಿಸದೆ ಮರೆಮಾಡಿದ್ದಾನೆ ಅಂದನು.

ಯೋಬ 9:17

ಆತನು ಬಿರುಗಾಳಿಯಿಂದ ನನ್ನನ್ನು ಚೂರು ಮಾಡು ತ್ತಾನೆ. ನನ್ನ ಗಾಯಗಳನ್ನು ಕಾರಣವಿಲ್ಲದೆ ಹೆಚ್ಚಿಸು ತ್ತಾನೆ.

ಯೋಬ 9:18

ನನ್ನ ಉಸಿರು ತಕ್ಕೊಳ್ಳದಂತೆ ಮಾಡಿ ಕಹಿ ಯಾದವುಗಳಿಂದ ನನ್ನನ್ನು ತುಂಬಿಸುತ್ತಾನೆ.

ಯೋಬ 10:3

ನೀನು ಬಲಾತ್ಕಾರ ಮಾಡುವದೂ ನಿನ್ನ ಕೈಕೆಲಸವನ್ನು ಅಲಕ್ಷ್ಯಮಾಡುವದೂ ದುಷ್ಟರ ಆಲೋ ಚನೆಯ ಮೇಲೆ ಪ್ರಕಾಶಿಸುವದೂ ನಿನಗೆ ಒಳ್ಳೆಯದೆ ನಿಸುತ್ತದೆಯೋ?

ಯೋಬ 34:5

ಯೋಬನು--ನಾನು ನೀತಿವಂತನಾಗಿದ್ದೇನೆ, ದೇವರು ನನ್ನ ನ್ಯಾಯತೀ ರ್ಪನ್ನು ತೆಗೆದುಬಿಟ್ಟನು.

ಯೆಶಾಯ 40:27

ನನ್ನ ಮಾರ್ಗವು ಕರ್ತನಿಗೆ ಮರೆಯಾಗಿದೆ ಮತ್ತು ನನ್ನ ನ್ಯಾಯವು ನನ್ನ ದೇವರಿಂದ ದಾಟಿ ಹೋಯಿ ತಲ್ಲಾ! ಎಂದು ಯಾಕೋಬೇ ಯಾಕೆ ಹೇಳುತ್ತಿ? ಇಸ್ರಾಯೇಲೇ ಯಾಕೆ ಮಾತಾಡುತ್ತಿ?

ಯೆರೆಮಿಯ 4:2

ನೀನು ಸತ್ಯದಿಂದಲೂ ನ್ಯಾಯದಿಂದಲೂ ನೀತಿ ಯಿಂದಲೂ ಕರ್ತನ ಜೀವದಾಣೆ ಎಂದು ಪ್ರಮಾಣಮಾಡುವಿ; ಆಗ ಜನಾಂಗಗಳು ಆತನಲ್ಲಿ ಆಶೀರ್ವದಿಸಿ ಕೊಳ್ಳುವವು; ಮತ್ತು ಆತನಲ್ಲಿ ಹೊಗಳಿಕೊಳ್ಳುವವು.

ಯೆರೆಮಿಯ 5:2

ಚೀಯೋನಿನ ಮಗಳನ್ನು ಸೌಂದರ್ಯವಾದ ಮತ್ತು ಕೋಮಲವಾದವಳಿಗೆ ನಾನು ಹೋಲಿಸುತ್ತೇನೆ.

ಯೆರೆಮಿಯ 12:16

ಆತನು ಕತ್ತಲೆಯನ್ನು ತರುವದಕ್ಕಿಂತ ಮುಂಚೆಯೂ ನಿಮ್ಮ ಕಾಲುಗಳು ಅಂಧಕಾರದ ಪರ್ವತಗಳ ಮೇಲೆ ಎಡವುವದಕ್ಕಿಂತ ಮುಂಚೆಯೂ ನೀವು ಬೆಳಕಿಗೆ ಕಾದುಕೊಳ್ಳುತ್ತಿರುವಾಗ ಆತನು ಅದನ್ನು ಮರಣದ ನೆರಳಾಗಿ ಮಾಡಿ ಕಾರ್ಗ ತ್ತಲಿಗೆ ಬದಲಾಯಿಸುವದಕ್ಕಿಂತ ಮುಂಚೆಯೇ ನಿಮ್ಮ ದೇವರಾದ ಕರ್ತನನ್ನು ಮಹಿಮೆಪಡಿಸಿರಿ.

ಯೆಹೆಜ್ಕೇಲ 33:11

ಅವರಿಗೆ ಹೀಗೆ ಹೇಳು ಎಂದು ದೇವರಾದ ಕರ್ತನು ಹೇಳುತ್ತಾನೆ --ನನ್ನ ಜೀವದಾಣೆ, ನನಗೆ ದುಷ್ಟನ ಸಾವಿನಿಂದ ಸಂತೋಷ ಸಿಗುವದಿಲ್ಲ; ಆದರೆ ಆ ದುಷ್ಟನು ದುರ್ಮಾ ರ್ಗದಿಂದ ತಿರುಗಿಕೊಂಡು ಜೀವಿಸುವದಾದರೆ ಅದರಲ್ಲಿಯೇ ನನಗೆ ಸಂತೋಷಸಿಗುವದು; ಇಸ್ರಾ ಯೇಲಿನ ಮನೆತನದವರೇ, ನೀವು ನಿಮ್ಮ ನಿಮ್ಮ ದುಷ್ಟಮಾರ್ಗಗಳನ್ನು ಬಿಟ್ಟು ತಿರುಗಿರಿ, ನೀವು ತಿರುಗಿ ಕೊಳ್ಳಿರಿ. ನೀವು ಸಾಯುವದು ಯಾಕೆ?

Interlinear

Choose Theme