Home Bibles ರೂತ 3:13 · ಕನ್ನಡ ಬೈಬಲ್
ರೂತ 3:13 · ಕನ್ನಡ ಬೈಬಲ್

ಈ ರಾತ್ರಿಯಲ್ಲಿ ಇಲ್ಲಿರು; ನಾಳೆ ಬೆಳಿಗ್ಗೆ ಅವನು ನಿನಗೆ ಸಂಬಂಧಿಕನ ಕಾರ್ಯ ಮಾಡಿದರೆ ಒಳ್ಳೇದಾಯಿತು; ಅವನು ನಿನಗೆ ಸಂಬಂಧಿಕನ ಕಾರ್ಯಮಾಡಲು ಮನಸ್ಸಿಲ್ಲದೆ ಇದ್ದರೆ ಕರ್ತನ ಜೀವದಾಣೆ--ನಾನೇ ನಿನಗೆ ಸಂಬಂಧಿಕನ ಕಾರ್ಯ ಮಾಡುತ್ತೇನೆ. ಉದಯ ಕಾಲದ ವರೆಗೂ ಮಲಗಿರು ಅಂದನು.

Cross references

ದ್ವಿತೀಯೋಪದೇಶಕಾಂಡ 25:5

ಸಹೋದರರು ಕೂಡಿ ವಾಸಮಾಡುವಾಗ ಅವರಲ್ಲಿ ಒಬ್ಬನು ಮಕ್ಕಳಿಲ್ಲದೆ ಸತ್ತರೆ ಆ ಸತ್ತವನ ಹೆಂಡತಿ ಮನೆ ಬಿಟ್ಟು ಅನ್ಯನ ಹೆಂಡತಿಯಾಗಬಾರದು; ಗಂಡನ ಸಹೋದರನು ಅವಳ ಬಳಿಗೆ ಬಂದು ಅವಳನ್ನು ಹೆಂಡತಿಯಾಗಿ ತಕ್ಕೊಂಡು ಗಂಡನ ಸಹೋದರನಿಗೆ ತಕ್ಕ ಹಾಗೆ ಅವಳಿಗೆ ನಡಿಸಬೇಕು.

ನ್ಯಾಯಾಧಿಪತಿಗಳು 8:19

ಅದಕ್ಕವನು--ಅವರು ನನ್ನ ತಾಯಿಯ ಮಕ್ಕಳು, ನನ್ನ ಸಹೋದರರು; ಕರ್ತನ ಜೀವದ ಆಣೆ ನೀವು ಅವರನ್ನು ಬದುಕಿಸಿದ್ದರೆ ನಿಮ್ಮನ್ನು ಕೊಲ್ಲುವದಿಲ್ಲ ಅಂದನು.

ರೂತ 2:20

ನೊವೊಮಿ ತನ್ನ ಸೊಸೆಗೆಜೀವಿಸಿರುವವರಿಗೋಸ್ಕರವೂ ಸತ್ತವರಿಗೋಸ್ಕರವೂ ಮಾಡಿದ ಕೃಪೆಯನ್ನು ಬಿಡದೆ ಇರುವವನು ಕರ್ತ ನಿಂದ ಆಶೀರ್ವದಿಸಲ್ಪಡಲಿ ಅಂದಳು. ನೊವೊಮಿ ಅವಳಿಗೆ ಆ ಮನುಷ್ಯನು ನಮ್ಮ ಸಂಬಂಧಿಕನಾಗಿಯೂ ವಿಮೋಚಿಸತಕ್ಕ ನಮ್ಮ ಬಾಧ್ಯರಲ್ಲಿ ಒಬ್ಬನಾಗಿಯೂ ಇದ್ದಾನೆ ಅಂದಳು.

ರೂತ 4:5

ಅದಕ್ಕೆ ಅವನು ನಾನು ಬಿಡಿಸಿಕೊಳ್ಳುವೆನು ಅಂದನು. ಆಗ ಬೋವಜನು ನೀನು ನೊವೊಮಿಯಿಂದ ಆ ಹೊಲವನ್ನು ಕೊಂಡು ಕೊಳ್ಳುವ ದಿವಸದಲ್ಲಿ ಸತ್ತವನ ಬಾಧ್ಯತೆಯಲ್ಲಿ ಅವನ ಹೆಸರನ್ನು ಸ್ಥಿರಮಾಡುವ ಹಾಗೆ ಅವನ ಹೆಂಡತಿಯಾಗಿರುವ ಮೋವಾಬ್ಯಳಾದ ರೂತ ಳಿಂದಲೂ ಅದನ್ನು ಕೊಂಡುಕೊಳ್ಳಬೇಕು ಅಂದನು.

ರೂತ 4:6

ಅದಕ್ಕೆ ಬಂಧುವು ನಾನು ನನ್ನ ಬಾಧ್ಯತೆಯನ್ನು ಕೆಡಿಸಿಕೊಳ್ಳದ ಹಾಗೆ ಅದನ್ನು ಬಿಡಿಸಿಕೊಳ್ಳಲಾರೆನು; ನಾನು ಬಿಡಿಸಿಕೊಳ್ಳತಕ್ಕದ್ದನ್ನು ನೀನು ಬಿಡಿಸಿಕೋ;

ಯೆರೆಮಿಯ 4:2

ನೀನು ಸತ್ಯದಿಂದಲೂ ನ್ಯಾಯದಿಂದಲೂ ನೀತಿ ಯಿಂದಲೂ ಕರ್ತನ ಜೀವದಾಣೆ ಎಂದು ಪ್ರಮಾಣಮಾಡುವಿ; ಆಗ ಜನಾಂಗಗಳು ಆತನಲ್ಲಿ ಆಶೀರ್ವದಿಸಿ ಕೊಳ್ಳುವವು; ಮತ್ತು ಆತನಲ್ಲಿ ಹೊಗಳಿಕೊಳ್ಳುವವು.

ಮತ್ತಾಯ 22:24

ಬೋಧ ಕನೇ, ಒಬ್ಬ ಮನುಷ್ಯನು ಮಕ್ಕಳಿಲ್ಲದೆ ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾಗಿ ತನ್ನ ಸಹೋದರನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ.

2 ಕೊರಿಂಥದವರಿಗೆ 1:23

ಇದಲ್ಲದೆ ನಿಮ್ಮ ಮೇಲೆ ಕನಿಕರವಿರುವದರಿಂದ ನಾನು ಇದುವರೆಗೆ ಕೊರಿಂಥಕ್ಕೆ ಬರಲಿಲ್ಲವೆಂಬದಕ್ಕೆ ನನ್ನ ಪ್ರಾಣದೊಂದಿಗೆ ದೇವರೇ ನನಗೆ ಸಾಕ್ಷಿ.ನಿಮ್ಮ ನಂಬಿಕೆಯ ಮೇಲೆ ನಾವು ದೊರೆತನ ಮಾಡುವದಕ್ಕಾಗಿ ಅಲ್ಲ; ಆದರೆ ನಿಮ್ಮ ಸಂತೋಷಕ್ಕೆ ಸಹಾಯಮಾಡುವವರಾಗಿದ್ದೇವೆ. ಯಾಕಂದರೆ ನೀವು ನಂಬಿಕೆಯಲ್ಲಿ ನಿಂತಿದ್ದೀರಿ.

ಹೆಬ್ರಿಯರಿಗೆ 6:16

ಮನುಷ್ಯರು ನಿಜವಾಗಿಯೂ ತಮಗಿಂತ ಹೆಚ್ಚಿನವನ ಆಣೆಯಿಡು ತ್ತಾರಷ್ಟೆ; ಆಣೆಯನ್ನು ಸ್ಥಿರಪಡಿಸಿದ ಮೇಲೆ ಅವರೊಳಗೆ ವಿವಾದವೇನೂ ಇರುವದಿಲ್ಲ.

Interlinear

Choose Theme