ದಿಕ್ಕಿಲ್ಲದವರ ಕತ್ತೆಯನ್ನು ತಕ್ಕೊಂಡು ಹೋಗುತ್ತಾರೆ; ವಿಧವೆಯ ಎತ್ತನ್ನು ಒತ್ತೆಯಾಗಿ ತಕ್ಕೊಳ್ಳುತ್ತಾರೆ.
Cross references
ಬೀಸುವ ಕಲ್ಲಿನಲ್ಲಿ ಅಡಿಕಲ್ಲಾದರೂ ಮೇಲ್ಕಲ್ಲಾ ದರೂ ಒತ್ತೆಯಾಗಿ ತಕ್ಕೊಳ್ಳಬಾರದು; ಹಾಗೆ ಮಾಡಿದರೆ ಪ್ರಾಣವನ್ನು ಒತ್ತೆಯಾಗಿ ತಕ್ಕೊಂಡ ಹಾಗಿರುವದು.
ಒಬ್ಬನು ತನ್ನ ಸಹೋದರರಾದ ಇಸ್ರಾಯೇಲ್ ಮಕ್ಕಳಲ್ಲಿ ಒಬ್ಬನನ್ನು ಕದ್ದು ವ್ಯಾಪಾರಮಾಡಿ ಮಾರಿದ ವನಾಗಿ ಸಿಕ್ಕಿದರೆ ಆ ಕಳ್ಳನು ಸಾಯಬೇಕು; ಹೀಗೆ ಕೆಟ್ಟದ್ದನ್ನು ನಿನ್ನ ಮಧ್ಯದಲ್ಲಿಂದ ತೆಗೆದುಹಾಕಬೇಕು.
ನೀನು ನಿನ್ನ ನೆರೆಯವನಿಗೆ ಯಾವದೊಂದು ಕೈಗಡ ಕೊಟ್ಟರೆ ಅವನ ಒತ್ತೆಯನ್ನು ಕೇಳುವ ಹಾಗೆ ಅವನ ಮನೆಯಲ್ಲಿ ಪ್ರವೇಶಿಸಬಾರದು.
ಪರನಿಗೂ ದಿಕ್ಕಿಲ್ಲದವನಿಗೂ ನ್ಯಾಯವನ್ನು ತಪ್ಪಿಸ ಬೇಡ; ವಿಧವೆಯ ವಸ್ತ್ರವನ್ನು ಒತ್ತೆಯಾಗಿ ತಕ್ಕೊಳ್ಳಬೇಡ.
ಇಗೋ, ನಾನು ಇಲ್ಲಿದ್ದೇನೆ; ಕರ್ತನ ಮುಂದೆಯೂ ಆತನ ಅಭಿಷಿಕ್ತನ ಮುಂದೆಯೂ ನನಗೆ ವಿರೋಧವಾಗಿ ಸಾಕ್ಷಿಕೊಡಿರಿ. ನಾನು ಯಾರ ಎತ್ತನ್ನಾದರೂ ಕತ್ತೆಯ ನ್ನಾದರೂ ತೆಗೆದುಕೊಂಡೆನೋ? ಯಾರಿಗಾದರೂ ವಂಚನೆ ಮಾಡಿದೆನೋ? ಯಾರನ್ನಾದರೂ ಹಿಂಸಿಸಿ ದೆನೋ? ಯಾರಿಂದಲಾದರೂ ಕಣ್ಣಿಗೆ ಮರೆಮಾಡುವ ಲಂಚವನ್ನು ತೆಗೆದುಕೊಂಡೆನೋ? ಹೀಗಿದ್ದರೆ ಹೇಳಿರಿ ತಿರಿಗಿಕೊಡುತ್ತೇನೆ ಅಂದನು.
ಸುಮ್ಮನೆ ನಿನ್ನ ಸಹೋದರನಿಂದ ಈಡು ತೆಗೆದು ಕೊಂಡಿ; ಬೆತ್ತಲೆಯಾಗಿರುವವರ ವಸ್ತ್ರಗಳನ್ನು ನೀನು ಸುಲುಕೊಂಡಿ.
ನಾನು ಬಡವರ ಇಷ್ಟವನ್ನು ಹಿಂತೆಗೆದಿದ್ದರೆ ವಿಧ ವೆಯ ಕಣ್ಣುಗಳನ್ನು ನಿರಾಶೆಪಡಿಸಿದ್ದರೆ,