Home Bibles ಯೋಬ 24:2 · ಕನ್ನಡ ಬೈಬಲ್
ಯೋಬ 24:2 · ಕನ್ನಡ ಬೈಬಲ್

ಗಡಿ ಗಳನ್ನು ಬದಲಿಸುತ್ತಾರೆ, ಮಂದೆಗಳನ್ನು ಬಲಾತ್ಕಾರ ದಿಂದ ತಕ್ಕೊಂಡು ಅವುಗಳನ್ನು ಸಾಕಿಕೊಳ್ಳುತ್ತಾರೆ.

Cross references

ದ್ವಿತೀಯೋಪದೇಶಕಾಂಡ 19:14

ನಿನ್ನ ದೇವರಾದ ಕರ್ತನು ನಿನಗೆ ಸ್ವಾಧೀನ ಮಾಡಿ ಕೊಳ್ಳುವದಕ್ಕೆ ಕೊಡುವ ದೇಶದೊಳಗೆ ನೀನು ಹೊಂದುವ ಸ್ವಾಸ್ತ್ಯದಲ್ಲಿ ಹಿರಿಯರು ಇಟ್ಟಂಥ ನಿನ್ನ ನೆರೆಯವನ ಮೇರೆಯನ್ನು ತಪ್ಪಿಸಬಾರದು.

ದ್ವಿತೀಯೋಪದೇಶಕಾಂಡ 27:17

ನೆರೆಯವನ ಮೇರೆ ತಪ್ಪಿಸುವವನಿಗೆ ಶಾಪ. ಜನವೆಲ್ಲಾ ಆಮೆನ್‌ ಎಂದು ಹೇಳಲಿ.

ಯೋಬ 1:15

ಶೆಬದವರು ಅವುಗಳ ಮೇಲೆ ಬಿದ್ದು ಅವುಗಳನ್ನು ತಕ್ಕೊಂಡು ಹೋದರು; ಹೌದು, ಸೇವಕರನ್ನು ಸಹ ಕತ್ತಿಯಿಂದ ಸಂಹರಿಸಿದರು. ನಾನೊಬ್ಬನು ಮಾತ್ರ ನಿನಗೆ ತಿಳಿಸುವದಕ್ಕೆ ತಪ್ಪಿಸಿಕೊಂಡೆನು ಅಂದನು.

ಯೋಬ 1:17

ಅವನು ಇನ್ನೂ ಮಾತ ನಾಡುತ್ತಿರಲು ಮತ್ತೊಬ್ಬನು ಬಂದು--ಕಸ್ದೀಯರು ಮೂರು ದಂಡುಗಳನ್ನು ಕಟ್ಟಿ, ಒಂಟೆಗಳ ಮೇಲೆ ಬಿದ್ದು, ಅವುಗಳನ್ನು ತಕ್ಕೊಂಡು ಸಂಹರಿಸಿದರು; ಹೌದು, ಸೇವಕರನ್ನು ಕತ್ತಿಯಿಂದ ಹೊಡೆದರು; ನಾನೊಬ್ಬನು ಮಾತ್ರ ನಿನಗೆ ತಿಳಿಸುವುದಕ್ಕೆ ತಪ್ಪಿಸಿ ಕೊಂಡೆನು ಅಂದನು.

ಯೋಬ 5:5

ಹಸಿದವನು ಅವನ ಪೈರನ್ನು ತಿನ್ನುವನು, ಮುಳ್ಳುಗಳೊಳಗಿಂದಲೂ ಅದನ್ನು ತೆಗೆದುಕೊಳ್ಳು ವನು; ಕೊಳ್ಳೆಗಾರನು ಅವರ ಆಸ್ತಿಯನ್ನು ನುಂಗಿಬಿಡು ವನು.

ಸಾಮೇತಿಗಳು 22:28

ನಿನ್ನ ಪಿತೃಗಳು ಹಾಕಿದ ಪೂರ್ವಕಾಲದ ಮೇರೆಯನ್ನು ತೆಗೆಯಬೇಡ.ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿ ದ್ದೀಯಾ? ಅವನು ನೀಚರ ಮುಂದೆ ಅಲ್ಲ, ಅರಸರ ಮುಂದೆಯೇ ನಿಲ್ಲುವನು.

ಸಾಮೇತಿಗಳು 23:10

ಪೂರ್ವಕಾ ಲದ ಮೇರೆಯನ್ನು ತೆಗೆಯಬೇಡ; ಅನಾಥರ ಹೊಲ ಗಳಲ್ಲಿ ಪ್ರವೇಶಿಸದಿರು;

ಹೊಶೇಯ 5:10

ಯೆಹೂದದ ಪ್ರಭುಗಳು ಮೇರೆಗಳನ್ನು ಬಿಡಿಸುವವರ ಹಾಗೆ ಇದ್ದರು; ಆದದರಿಂದ ಅವರ ಮೇಲೆ ನೀರಿನ ಹಾಗೆ ನನ್ನ ಕೋಪವನ್ನು ಸುರಿಸುವೆನು.

Interlinear

Choose Theme