Home Bibles ಯೋಬ 22:24 · ಕನ್ನಡ ಬೈಬಲ್
ಯೋಬ 22:24 · ಕನ್ನಡ ಬೈಬಲ್

ಧೂಳಿನಂತೆ ಬಂಗಾರವನ್ನು, ಹಳ್ಳಗಳ ಕಲ್ಲುಗಳಂತೆ ಓಫಿರ್‌ ಬಂಗಾರವನ್ನು ತೆಗೆದು ಹಾಕುವಿ.

Cross references

ಆದಿಕಾಂಡ 10:29

ಓಫೀರನೂ ಹವೀಲನೂ ಯೋಬಾಬನೂ ಹುಟ್ಟಿದರು. ಇವರೆಲ್ಲರೂ ಯೊಕ್ತಾನನ ಕುಮಾರರು.

1 ಅರಸುಗಳು 9:28

ಅವರು ಓಫಿರಿಗೆ ಹೋಗಿ ಅಲ್ಲಿಂದ ನಾನೂರ ಇಪ್ಪತ್ತು ಬಂಗಾರದ ತಲಾಂತು ಗಳನ್ನು ಅರಸನಾದ ಸೊಲೊಮೋನನಿಗೆ ತಕ್ಕೊಂಡು ಬಂದರು.

1 ಅರಸುಗಳು 10:21

ಇದಲ್ಲದೆ ಅರಸನಾದ ಸೊಲೊಮೋನನು ಕುಡಿಯುವ ಪಾತ್ರೆ ಗಳೆಲ್ಲಾ ಬಂಗಾರದವುಗಳಾಗಿದ್ದವು. ಲೆಬನೋನಿನ ಅಡವಿಯ ಮನೆಯ ಪಾತ್ರೆಗಳೆಲ್ಲಾ ಹಾಗೆಯೇ ಬಂಗಾ ರದವುಗಳಾಗಿದ್ದವು. ಬೆಳ್ಳಿಯದು ಯಾವದೂ ಇರಲಿಲ್ಲ. ಯಾಕಂದರೆ ಸೊಲೊಮೋನನ ದಿವಸಗಳಲ್ಲಿ ಅದು ಏನೂ ಇಲ್ಲದ್ದಾಗಿ ಎಣಿಸಲ್ಪಟ್ಟಿತ್ತು.

1 ಅರಸುಗಳು 22:48

ಯೆಹೋ ಷಾಫಾಟನು ಬಂಗಾರಕ್ಕೋಸ್ಕರ ಓಫೀರಿಗೆ ಹೋಗು ವದಕ್ಕೆ ತಾರ್ಷೀಷಿನ ಹಡಗುಗಳನ್ನು ಮಾಡಿಸಿದನು. ಆದರೆ ಅವು ಹೋಗಲಿಲ್ಲ; ಯಾಕಂದರೆ ಆ ಹಡಗು ಗಳು ಎಚ್ಯೋನ್ಗೆಬೆರಿನ ಬಳಿಯಲ್ಲಿ ಒಡೆದುಹೋದವು.

1 ದಿನವೃತ್ತಾಂತ 1:23

ಶೆಬಾನನ್ನೂ, ಓಫೀರನನ್ನೂ ಹವೀಲಾನನ್ನೂ, ಯೋಬಾಬನನ್ನೂ ಪಡೆದನು. ಇವ ರೆಲ್ಲರು ಯೊಕ್ತಾನನ ಮಕ್ಕಳು.

2 ದಿನವೃತ್ತಾಂತ 1:5

ಇದಲ್ಲದೆ ಹೂರನ ಮಗನಾದ ಊರೀ ಯನ ಮಗನಾದ ಬೆಚಲೇಲನು ಮಾಡಿದ ತಾಮ್ರದ ಬಲಿಪೀಠವನ್ನು ಕರ್ತನ ಗುಡಾರದ ಮುಂದೆ ಇಟ್ಟನು. ಸೊಲೊಮೋನನೂ ಸಭೆಯೂ ಅದರ ಮುಂದೆ ವಿಚಾರಿಸುತ್ತಿದ್ದರು.

2 ದಿನವೃತ್ತಾಂತ 9:10

ಇದಲ್ಲದೆ ಓಫೀರಿನಿಂದ ಬಂಗಾರವನ್ನು ತಂದ ಹೂರಾಮನ ಸೇವಕರೂ ಸೊಲೊಮೋನನ ಸೇವ ಕರೂ ಅಲ್ಮಗ್‌ ಮರಗಳನ್ನೂ ಅಮೂಲ್ಯವಾದ ಕಲ್ಲುಗ ಳನ್ನೂ ತಂದರು.

2 ದಿನವೃತ್ತಾಂತ 9:27

ಅರಸನು ಯೆರೂಸಲೇಮಿನಲ್ಲಿ ಬೆಳ್ಳಿಯನ್ನು ಕಲ್ಲು ಗಳ ಹಾಗೆಯೂ ದೇವದಾರು ಮರಗಳನ್ನು ತಗ್ಗಿನ ಲ್ಲಿರುವ ಆಲದ ಮರಗಳ ಹಾಗೆಯೂ ಬಹಳವಾಗಿ ಮಾಡಿದನು.

ಯೋಬ 31:25

ನನ್ನ ಐಶ್ವರ್ಯವು ಬಹಳವಾಗಿದೆ ಎಂದು ನನ್ನ ಕೈ ಬಹಳವಾಗಿ ಸಂಪಾದಿಸಿ ಕೊಂಡಿತೆಂದು ನಾನು ಸಂತೋಷಿಸಿದ್ದರೆ,

ಕೀರ್ತನೆಗಳು 45:9

ಅರಸುಗಳ ಕುಮಾರ್ತೆ ಯರು ನಿನ್ನ ಗೌರವವುಳ್ಳ ಸ್ತ್ರೀಯರಲ್ಲಿ ಇದ್ದಾರೆ; ರಾಣಿಯು ಓಫಿರ್‌ ಬಂಗಾರವನ್ನು ಧರಿಸಿಕೊಂಡು ನಿನ್ನ ಬಲಗಡೆಯಲ್ಲಿ ನಿಂತಿದ್ದಾಳೆ.

ಯೆಶಾಯ 13:12

ನಾನು ಮನುಷ್ಯನನ್ನು ಚೊಕ್ಕ ಬಂಗಾರಕ್ಕಿಂತಲೂ ಇಲ್ಲವೆ ಒಫೀರಿನ ಬಂಗಾರಕ್ಕಿಂತಲೂ ಅಮೂಲ್ಯನನ್ನಾಗಿ ಮಾಡುವೆನು.

Interlinear

Choose Theme