Home Bibles 1 ಅರಸುಗಳು 22:48 · ಕನ್ನಡ ಬೈಬಲ್
1 ಅರಸುಗಳು 22:48 · ಕನ್ನಡ ಬೈಬಲ್

ಯೆಹೋ ಷಾಫಾಟನು ಬಂಗಾರಕ್ಕೋಸ್ಕರ ಓಫೀರಿಗೆ ಹೋಗು ವದಕ್ಕೆ ತಾರ್ಷೀಷಿನ ಹಡಗುಗಳನ್ನು ಮಾಡಿಸಿದನು. ಆದರೆ ಅವು ಹೋಗಲಿಲ್ಲ; ಯಾಕಂದರೆ ಆ ಹಡಗು ಗಳು ಎಚ್ಯೋನ್ಗೆಬೆರಿನ ಬಳಿಯಲ್ಲಿ ಒಡೆದುಹೋದವು.

Cross references

ಆದಿಕಾಂಡ 27:37

ಇಸಾಕನು ಪ್ರತ್ಯುತ್ತರವಾಗಿ ಏಸಾವನಿಗೆ--ಇಗೋ, ಅವನನ್ನು ನಿನಗೆ ದೊರೆಯಾಗಿ ಇಟ್ಟು ಅವನ ಸಹೋದರರೆಲ್ಲರನ್ನೂ ಅವನಿಗೆ ಸೇವಕ ರನ್ನಾಗಿ ಕೊಟ್ಟು ಧಾನ್ಯದಿಂದಲೂ ದ್ರಾಕ್ಷಾರಸ ದಿಂದಲೂ ಅವನನ್ನು ಪೋಷಿಸಿದ್ದೇನೆ. ಈಗ ನನ್ನ ಮಗನೇ, ನಿನಗೆ ನಾನು ಏನು ಮಾಡಲಿ ಅಂದನು.

ಅಂಕೆಗಳ ಪುಸ್ತಕ 33:35

ಅಬ್ರೋನದಿಂದ ಹೊರಟು ಎಚ್ಯೋನ್ಗೆಬೆರಿನಲ್ಲಿ ಇಳಿದುಕೊಂಡರು.

2 ಸಮುವೇಲ 8:14

ಎದೋಮಿ ನಲ್ಲಿ ಕಾವಲುದಂಡುಗಳನ್ನು ಇಟ್ಟನು. ಎಲ್ಲಾ ಎದೋಮಿ ನಲ್ಲಿ ಅವನು ಕಾವಲುದಂಡುಗಳನ್ನು ಇಟ್ಟದ್ದರಿಂದ ಎದೋಮ್ಯರೆಲ್ಲರೂ ದಾವೀದನಿಗೆ ದಾಸರಾದರು. ದಾವೀದನು ಹೋದಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿದನು.

1 ಅರಸುಗಳು 9:26

ಇದಲ್ಲದೆ ಅರಸನಾದ ಸೊಲೊಮೋನನು ಎದೋಮ್‌ ದೇಶದ ಕೆಂಪುಸಮುದ್ರ ತೀರದ ಎಲೋ ತಿನ ಬಳಿಯಲ್ಲಿರುವ ಎಚ್ಯೊನ್ಗೇಬರಿನಲ್ಲಿ ಹಡಗು ಗಳನ್ನು ಮಾಡಿಸಿದನು.

1 ಅರಸುಗಳು 9:28

ಅವರು ಓಫಿರಿಗೆ ಹೋಗಿ ಅಲ್ಲಿಂದ ನಾನೂರ ಇಪ್ಪತ್ತು ಬಂಗಾರದ ತಲಾಂತು ಗಳನ್ನು ಅರಸನಾದ ಸೊಲೊಮೋನನಿಗೆ ತಕ್ಕೊಂಡು ಬಂದರು.

1 ಅರಸುಗಳು 10:22

ಅರಸನಿಗೆ ತಾರ್ಷೀ ಷಿನ ಹಡಗುಗಳು ಹೀರಾಮನ ಹಡಗುಗಳ ಸಂಗಡ ಸಮುದ್ರದಲ್ಲಿ ಇದ್ದವು. ಮೂರು ವರುಷಕ್ಕೆ ಒಂದು ಸಾರಿ ತಾರ್ಷೀಷಿನ ಹಡಗುಗಳು ಬೆಳ್ಳಿಬಂಗಾರ ವನ್ನೂ ದಂತವನ್ನೂ ಕೋತಿಗಳನ್ನೂ ನವಿಲುಗಳನ್ನೂ ತಕ್ಕೊಂಡು ಬರುತ್ತಿದ್ದವು.

2 ಅರಸುಗಳು 3:9

ಹೀಗೆಯೇ ಇಸ್ರಾಯೇಲಿನ ಅರಸನೂ ಯೆಹೂದದ ಅರಸನೂ ಎದೋಮಿನ ಅರಸನೂ ಹೊರಟು ಸುತ್ತಾದ ಮಾರ್ಗದಲ್ಲಿ ಏಳು ದಿವಸ ನಡೆದರು. ಆದರೆ ಸೈನ್ಯಕ್ಕೂ ಅವರ ಹಿಂದೆ ಬಂದ ಪಶುಗಳಿಗೂ ನೀರು ಇಲ್ಲದೆ ಹೋಯಿತು.

2 ಅರಸುಗಳು 8:20

ಅವನ ಕಾಲದಲ್ಲಿ ಯೆಹೂದದ ಕೈಕೆಳಗಿದ್ದ ಎದೋಮ್ಯರು ತಿರುಗಿ ಬಿದ್ದು ತಮಗೆ ಒಬ್ಬ ಅರಸ ನನ್ನು ಮಾಡಿಕೊಂಡರು.

2 ದಿನವೃತ್ತಾಂತ 9:21

ಯಾಕಂದರೆ ಹೂರಾಮನ ಸೇವಕರ ಸಂಗಡ ಅರಸನ ಹಡಗುಗಳು ತಾರ್ಷಿಷಿಗೆ ಹೋಗಿ ಮೂರು ವರುಷಕ್ಕೆ ಒಂದುಸಾರಿ ಬಂಗಾರವನ್ನೂ ಬೆಳ್ಳಿ ಯನ್ನೂ ದಂತವನ್ನೂ ಕೋತಿಗಳನ್ನೂ ನವಿಲುಗಳನ್ನೂ ತಕ್ಕೊಂಡು ಬರುತ್ತಿದ್ದವು.

2 ದಿನವೃತ್ತಾಂತ 20:21

ಅವನು ಜನರ ಸಂಗಡ ಆಲೋಚನೆ ಮಾಡಿದ ತರುವಾಯ ಸೈನ್ಯದ ಮುಂದೆ ಅವರು ಹೊರಡುವಾಗ ಪರಿಶುದ್ಧತ್ವದ ಪ್ರಭೆಯನ್ನು ಸ್ತುತಿಸುವದಕ್ಕೆ ಕರ್ತನನ್ನು ಕೊಂಡಾಡಿರಿ, ಯಾಕಂದರೆ ಆತನ ಕೃಪೆಯು ಯುಗ ಯುಗಕ್ಕೂ ಇರುವದೆಂದು ಹೇಳುವದಕ್ಕೆ ಕರ್ತ ನಿಗೆ ಸಂಗೀತಗಾರರನ್ನು ನೇಮಿಸಿದನು.

2 ದಿನವೃತ್ತಾಂತ 20:35

ಇದರ ತರುವಾಯ ಯೆಹೂದದ ಅರಸನಾದ ಯೆಹೋಷಾಫಾಟನು ಇಸ್ರಾಯೇಲಿನ ಅರಸನೂ ಬಹು ದುಷ್ಟನಾಗಿ ನಡೆದವನೂ ಆದ ಅಹಜ್ಯನ ಸಂಗಡ ಸಹವಾಸಮಾಡಿದನು.

2 ದಿನವೃತ್ತಾಂತ 25:7

ಆಗ ದೇವರ ಮನುಷ್ಯ ನಾದ ಒಬ್ಬನು ಅವನ ಬಳಿಗೆ ಬಂದು ಅವನಿಗೆಅರಸನೇ, ಇಸ್ರಾಯೇಲಿನ ಸೈನ್ಯವು ನಿನ್ನ ಸಂಗಡ ಹೋಗದೆ ಇರಲಿ; ಯಾಕಂದರೆ ಕರ್ತನು ಇಸ್ರಾಯೇ ಲ್ಯರಾದ ಎಫ್ರಾಯಾಮನ ಸಮಸ್ತ ಮಕ್ಕಳ ಸಂಗಡ ಇರುವದಿಲ್ಲ.

ಕೀರ್ತನೆಗಳು 45:9

ಅರಸುಗಳ ಕುಮಾರ್ತೆ ಯರು ನಿನ್ನ ಗೌರವವುಳ್ಳ ಸ್ತ್ರೀಯರಲ್ಲಿ ಇದ್ದಾರೆ; ರಾಣಿಯು ಓಫಿರ್‌ ಬಂಗಾರವನ್ನು ಧರಿಸಿಕೊಂಡು ನಿನ್ನ ಬಲಗಡೆಯಲ್ಲಿ ನಿಂತಿದ್ದಾಳೆ.

ಕೀರ್ತನೆಗಳು 48:7

ಮೂಡಣ ಗಾಳಿಯಿಂದ ತಾರ್ಷಿಷ್‌ ಹಡಗುಗಳನ್ನು ನೀನು ಒಡೆಯುತ್ತೀ.

ಯೆಶಾಯ 2:16

ಎಲ್ಲಾ ತಾರ್ಷೀಷ್‌ ಹಡಗುಗಳು, ಅಂತೂ ನೋಡತಕ್ಕ ಮನೋಹರವಾದ ಎಲ್ಲಾ ಚಿತ್ರಗಳ ಮೇಲೆಯೂ ಆ ದಿನವು ಬರುವದು.

ಯೆಶಾಯ 60:9

ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ, ನನಗೋಸ್ಕರ ದೂರದಿಂದ ನಿನ್ನ ಕುಮಾರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಕರ್ತನ ಹೆಸರಿನ ಬಳಿಗೂ ನಿನ್ನನ್ನು ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವದರಲ್ಲಿ ಮುಂದಾಗುತ್ತಿವೆ.

ಯೋನ 1:3

ಆದರೆ ಯೋನನು ಕರ್ತನ ಸಮ್ಮುಖದಿಂದ ತಾರ್ಷೀಷಿಗೆ ಓಡಿ ಹೋಗುವದಕ್ಕೆ ಎದ್ದು ಯೊಪ್ಪಕ್ಕೆ ಇಳಿದು ತಾರ್ಷೀಷಿಗೆ ಹೋಗುವ ಹಡಗನ್ನು ಕಂಡು ಅದರ ಪ್ರಯಾಣದ ತೆರವನ್ನು ಕೊಟ್ಟು ಕರ್ತನ ಸಮ್ಮುಖದಿಂದ ಅವರ ಸಂಗಡ ತಾರ್ಷಿಷಿಗೆ ಹೋಗುವದಕ್ಕೆ ಅದನ್ನು ಹತ್ತಿದನು.

Interlinear

Interlinear data is unavailable for this verse.

Choose Theme