Home Bibles ☰ Books ಯೋಬ 17:3 · ಕನ್ನಡ ಬೈಬಲ್
ಯೋಬ 17:3 · ಕನ್ನಡ ಬೈಬಲ್

ದಯಮಾಡಿ ನನ್ನ ಸಂಗಡ ಇದ್ದು ನಿನ್ನೊಂದಿಗೆ ನನಗೆ ಹೊಣೆಯಾಗು; ನನ್ನೊಂದಿಗೆ ಕೈ ತಟ್ಟುವವರು ಯಾರು?

Cross references

ಆದಿಕಾಂಡ 43:9

ನಾನು ಅವನಿಗೋಸ್ಕರ ಹೊಣೆಯಾಗಿರುವೆನು. ನೀನು ಅವನ ವಿಷಯದಲ್ಲಿ ನನ್ನನ್ನೇ ಕೇಳಬಹುದು. ನಾನು ಅವನನ್ನು ನಿನ್ನ ಬಳಿಗೆ ತಂದು ನಿನ್ನೆದುರಿಗೆ ನಿಲ್ಲಿಸದಿದ್ದರೆ ಎಂದೆಂದಿಗೂ ನಾನು ಆ ಅಪರಾಧವನ್ನು ಹೊರುವೆನು.

ಆದಿಕಾಂಡ 44:32

ನಿನ್ನ ದಾಸನಾದ ನಾನು ಆ ಹುಡುಗನಿಗೋಸ್ಕರ ನನ್ನ ತಂದೆಯ ಬಳಿಯಲ್ಲಿ ಹೊಣೆ ಯಾಗಿ--ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ ಎಂದೆಂದಿಗೂ ನನ್ನ ತಂದೆಗೆ ದೋಷಿಯಾಗಿರುವೆ ನೆಂದು ಹೇಳಿಕೊಂಡಿದ್ದೇನೆ.

ಯೋಬ 5:1

ಈಗ ಕರೆ; ನಿನಗೆ ಉತ್ತರ ಕೊಡುವವನು ಇದ್ದಾನೋ? ಪರಿಶುದ್ಧರಲ್ಲಿ ಯಾರ ಕಡೆಗೆ ತಿರುಗಿಕೊಳ್ಳುವಿ?

ಯೋಬ 9:33

ನಮ್ಮಿಬ್ಬರ ಮೇಲೆ ಕೈ ಇಡತಕ್ಕ ಮಧ್ಯಸ್ಥಗಾರನು ನಮ್ಮ ಮಧ್ಯದಲ್ಲಿಲ್ಲ.

ಕೀರ್ತನೆಗಳು 119:122

ಒಳ್ಳೇದಕ್ಕಾಗಿ ನಿನ್ನ ಸೇವಕನಿಗೆ ಹೊಣೆಯಾಗು; ಅಹಂಕಾರಿಗಳು ನನಗೆ ಹಿಂಸೆ ಮಾಡದಿರಲಿ.

ಸಾಮೇತಿಗಳು 6:11

ಹೀಗೆ ದಾರಿದ್ರ್ಯವು ಪ್ರಯಾಣ ಮಾಡು ವವನ ಹಾಗೂ ನಿನ್ನ ಕೊರತೆಯು ಯುದ್ಧಸ್ಥರ ಹಾಗೂ ಬರುವದು.

ಸಾಮೇತಿಗಳು 11:15

ಅನ್ಯನಿಗೆ ಹೊಣೆಯಾಗುವವನು ಹಾನಿಗೆ ಗುರಿಯಾಗುತ್ತಾನೆ; ಹೊಣೆಗಾರತ್ವವನ್ನು ಹಗೆಮಾಡಿ ಕೊಳ್ಳುವವನು ಭದ್ರವಾಗಿರುವನು.

ಸಾಮೇತಿಗಳು 17:18

ವಿವೇಕವಿಲ್ಲದವನು ಕೈ ಮೇಲೆ ಹೊಡೆದು ತನ್ನ ಸ್ನೇಹಿತನ ಎದುರಿನಲ್ಲಿ ಹೊಣೆ ಯಾಗುತ್ತಾನೆ.

ಸಾಮೇತಿಗಳು 20:16

ಪರರ ಹೊಣೆಯಾಗಿರುವ ಬಟ್ಟೆಯನ್ನು ತೆಗೆದುಕೋ; ಪರಸ್ತ್ರೀಗೋಸ್ಕರ ಅವನಿಂದ ಒತ್ತೆ ತೆಗೆ ದುಕೋ.

ಸಾಮೇತಿಗಳು 22:26

ಕೈ ಕೊಡುವವರಲ್ಲಿ ಇಲ್ಲವೆ ಸಾಲಕ್ಕೆ ಹೊಣೆಯಾಗುವವರಲ್ಲಿ ನೀನು ಒಬ್ಬ ನಾಗಬೇಡ.

ಯೆಶಾಯ 38:14

ನಾನು ಬಾನಕ್ಕಿಯಂತೆಯೂ ಬಕದ ಹಾಗೂ ಕೀಚುಗುಟ್ಟಿದೆನು ಪಾರಿವಾಳದಂತೆ ಮೂಲುಗುತ್ತಿದ್ದೆನು. ನನ್ನ ಕಣ್ಣುಗಳು ಮೇಲಕ್ಕೆ ನೋಡುವದರಿಂದ ಕ್ಷೀಣವಾದವು. ಓ ಕರ್ತನೇ, ನಾನು ಬಾಧೆಪಡುತ್ತಿದ್ದೇನೆ; ನೀನು ನನಗೆ ಆಶ್ರಯನಾಗು.

ಹೆಬ್ರಿಯರಿಗೆ 7:22

ಇದರಿಂದಲೇ ಯೇಸು ಎಷ್ಟೋ ಶ್ರೇಷ್ಠವಾದ ಒಡಂಬಡಿಕೆಗೆ ಹೊಣೆಗಾರನಾದನು.

Interlinear

Choose Theme