ಇದರಿಂದಲೇ ಯೇಸು ಎಷ್ಟೋ ಶ್ರೇಷ್ಠವಾದ ಒಡಂಬಡಿಕೆಗೆ ಹೊಣೆಗಾರನಾದನು.
Cross references
ನಾನು ಅವನಿಗೋಸ್ಕರ ಹೊಣೆಯಾಗಿರುವೆನು. ನೀನು ಅವನ ವಿಷಯದಲ್ಲಿ ನನ್ನನ್ನೇ ಕೇಳಬಹುದು. ನಾನು ಅವನನ್ನು ನಿನ್ನ ಬಳಿಗೆ ತಂದು ನಿನ್ನೆದುರಿಗೆ ನಿಲ್ಲಿಸದಿದ್ದರೆ ಎಂದೆಂದಿಗೂ ನಾನು ಆ ಅಪರಾಧವನ್ನು ಹೊರುವೆನು.
ನಿನ್ನ ದಾಸನಾದ ನಾನು ಆ ಹುಡುಗನಿಗೋಸ್ಕರ ನನ್ನ ತಂದೆಯ ಬಳಿಯಲ್ಲಿ ಹೊಣೆ ಯಾಗಿ--ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ ಎಂದೆಂದಿಗೂ ನನ್ನ ತಂದೆಗೆ ದೋಷಿಯಾಗಿರುವೆ ನೆಂದು ಹೇಳಿಕೊಂಡಿದ್ದೇನೆ.
ನನ್ನ ಮಗನೇ, ನಿನ್ನ ಸ್ನೇಹಿತನಿಗಾಗಿ ನೀನು ಹೊಣೆಯಾಗಿದ್ದರೆ ಪರನೊಂದಿಗೆ ನಿನ್ನ ಕೈಯನ್ನು ಒಡ್ಡಿದ್ದರೆ
ಪರರ ಹೊಣೆಯಾಗಿರುವ ಬಟ್ಟೆಯನ್ನು ತೆಗೆದುಕೋ; ಪರಸ್ತ್ರೀಗೋಸ್ಕರ ಅವನಿಂದ ಒತ್ತೆ ತೆಗೆ ದುಕೋ.
ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಮಧ್ಯದಲ್ಲಿ ಯಜ್ಞವನ್ನೂ ಅರ್ಪಣೆಯನ್ನೂ ನಿಲ್ಲಿಸುವನು. ಅಸಹ್ಯಗಳನ್ನು ವಾಹನಮಾಡಿಕೊಂಡು ಒಬ್ಬ ಘಾತಕನು ಹಾರಿಬರುವನು, ನಿಶ್ಚಿತ ಪ್ರಳಯವು ಅವನನ್ನು ಮುಳುಗಿಸುವ ತನಕ ಹಾಳು ಮಾಡುವನು.
ಯಾಕಂದರೆ ಇದು ಬಹು ಜನರ ಪಾಪಗಳ ಪರಿಹಾರಕ್ಕೋಸ್ಕರ ಸುರಿಸಲ್ಪಡುವ ಹೊಸಒಡಂಬಡಿಕೆ ಯ ನನ್ನ ರಕ್ತವಾಗಿದೆ ಅಂದನು.
ಆಗ ಆತನು ಅವರಿಗೆ--ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ಹೊಸಒಡಂಬಡಿಕೆಯ ನನ್ನ ರಕ್ತ.
ಅದೇ ಪ್ರಕಾರ ಊಟವಾದ ಮೇಲೆ ಪಾತ್ರೆಯನ್ನು ತೆಗೆದು ಕೊಂಡು--ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪ ಡುವ ನನ್ನ ರಕ್ತದಿಂದಾದ ಹೊಸಒಡಂಬಡಿಕೆಯಾಗಿದೆ.
ಅದೇ ರೀತಿಯಾಗಿ ಊಟವಾದ ಮೇಲೆ ಆತನು ಪಾತ್ರೆಯನ್ನು ತೆಗೆದುಕೊಂಡು--ಈ ಪಾತ್ರೆಯು ನನ್ನ ರಕ್ತದಲ್ಲಿರುವ ಹೊಸಒಡಂಬಡಿಕೆ ಯಾಗಿದೆ; ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಇದನ್ನು ಮಾಡಿರಿ ಅಂದನು.
ಆದರೆ ಆತನು ಅದಕ್ಕಿಂತ ಶ್ರೇಷ್ಠವಾದ ಸೇವೆಯನ್ನು ಹೊಂದಿದ ವನಾಗಿದ್ದಾನೆ; ಉತ್ತಮವಾದ ವಾಗ್ದಾನಗಳ ಮೇಲೆ ಸ್ಥಾಪಿತವಾದ ಶ್ರೇಷ್ಠವಾದ ಒಡಂಬಡಿಕೆಗೆ ಸಹ ಮಧ್ಯಸ್ಥನಾಗಿದ್ದಾನೆ.
ಈ ಕಾರಣದಿಂದ ಮೊದಲನೇ ಒಡಂಬಡಿಕೆಯ ಅಧೀನದಲ್ಲಿದ್ದ ಅಕ್ರಮಗಳ ವಿಮೋಚನೆಗಾಗಿ ಕರೆಯಲ್ಪ ಟ್ಟವರು ನಿತ್ಯಬಾಧ್ಯತೆಯ ವಾಗ್ದಾನವನ್ನು ಹೊಂದು ವದಕ್ಕೆ ಮರಣದ ಮೂಲಕ ಆತನು ಹೊಸ ಒಡಂಬಡಿ ಕೆಗೆ ಮಧ್ಯಸ್ಥನಾಗಿದ್ದಾನೆ.
ಹೊಸಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಹಿತಕರವಾಗಿ ಮಾತನಾಡುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.
ಶಾಶ್ವತವಾದ ಒಡಂಬಡಿಕೆಯ ರಕ್ತದ ಮೂಲಕ ಕುರಿ ಹಿಂಡಿಗೆ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರ ಮಾಡಿದ ಶಾಂತಿದಾಯಕನಾದ ದೇವರು