Home Bibles ☰ Books ಯೋಬ 17:10 · ಕನ್ನಡ ಬೈಬಲ್
ಯೋಬ 17:10 · ಕನ್ನಡ ಬೈಬಲ್

ಆದಾಗ್ಯೂ ನೀವೆಲ್ಲರೂ ತಿರುಗಿಕೊಂಡು ಬನ್ನಿರಿ; ನಿಮ್ಮಲ್ಲಿ ನಾನು ಜ್ಞಾನಿಯನ್ನು ಕಂಡುಕೊಳ್ಳಲಿಲ್ಲ.

Cross references

ಯೋಬ 6:29

ತಿರುಗಿಕೊಳ್ಳಿರಿ, ಅನ್ಯಾಯವಾಗದಿರಲಿ; ಹೌದು, ತಿರುಗಿಕೊಳ್ಳಿರಿ; ಇನ್ನು ನನ್ನ ನೀತಿಯು ಇವುಗಳಲ್ಲಿ ಇರುವದು.ನನ್ನ ನಾಲಿಗೆಯಲ್ಲಿ ಅನ್ಯಾಯ ಉಂಟೋ? ನನ್ನ ಅಂಗಳವು ಕೇಡನ್ನು ರುಚಿ ನೋಡುವದಿಲ್ಲವೋ?

ಯೋಬ 12:2

ನಿಸ್ಸಂದೇಹವಾಗಿ ನೀವೇ ಆ ಜನರು; ನಿಮ್ಮ ಸಂಗಡಲೇ ಜ್ಞಾನವು ಸಾಯುವದು.

ಯೋಬ 15:9

ನಮಗೆ ತಿಳಿಯದೆ ಇರುವದನ್ನು ನೀನು ಏನು ತಿಳುಕೊಂಡಿರುವಿ? ನಮ್ಮಲ್ಲಿ ಇಲ್ಲದ್ದೇನು ಗ್ರಹಿಸಿದಿ?

ಯೋಬ 17:4

ಅವರ ಹೃದಯವನ್ನು ಬುದ್ಧಿಗೆ ಅಡಗಿಸಿದಿ; ಆದದರಿಂದ ನೀನು ಅವರನ್ನು ಉನ್ನತಕ್ಕೇರಿಸುವದಿಲ್ಲ.

ಯೋಬ 18:3

ಯಾಕೆ ನಾವು ಪಶುವಿನ ಹಾಗೆ ಎಣಿಸಲ್ಪಟ್ಟೆವು? ಯಾಕೆ ನಿಮ್ಮ ಕಣ್ಣುಗಳಿಗೆ ತುಚ್ಛವಾಗಿದ್ದೇವೆ?

ಯೋಬ 32:9

ದೊಡ್ಡ ಮನುಷ್ಯರೇ ಬುದ್ಧಿವಂತರಲ್ಲ; ಮುದುಕರೇ ನ್ಯಾಯವನ್ನು ಗ್ರಹಿಸಿಕೊಳ್ಳುವವರಲ್ಲ.

ಯೋಬ 42:7

ಕರ್ತನು ಈ ಮಾತುಗಳನ್ನೆಲ್ಲಾ ಯೋಬನಿಗೆ ಹೇಳಿದ ಮೇಲೆ ಕರ್ತನು ತೇಮಾನ್ಯನಾದ ಎಲೀಫಜ ನಿಗೆ -- ನಿನ್ನ ಮೇಲೆಯೂ ನಿನ್ನ ಸ್ನೇಹಿತರಿಬ್ಬರ ಮೇಲೆಯೂ ಕೋಪಗೊಂಡಿದ್ದೇನೆ; ನೀವು ನನ್ನ ಸೇವಕನಾದ ಯೋಬನ ಪ್ರಕಾರ ನನ್ನ ವಿಷಯವಾಗಿ ಸರಿಯಾದವುಗಳನ್ನು ಮಾತಾಡಲಿಲ್ಲ.

ಮಲಾಕಿ 3:18

ಆಗ ನೀವು ತಿಳುಕೊಂಡು ನೀತಿವಂತ ನಿಗೂ ದುಷ್ಟನಿಗೂ ದೇವರ ಸೇವೆಮಾಡುವವನಿಗೂ ಮಾಡದವನಿಗೂ ಇರುವ ಹೆಚ್ಚುಕಡಿಮೆಯನ್ನು ತಿಳುಕೊಳ್ಳುವಿರಿ.

1 ಕೊರಿಂಥದವರಿಗೆ 1:20

ಜ್ಞಾನಿಯು ಎಲ್ಲಿ? ಶಾಸ್ತ್ರಿಯು ಎಲ್ಲಿ? ಲೋಕದ ತರ್ಕವಾದಿ ಎಲ್ಲಿ? ದೇವರು ಈ ಲೋಕದ ಜ್ಞಾನವನ್ನು ಹುಚ್ಚುತನವನ್ನಾಗಿ ಮಾಡಿದ್ದಾನಲ್ಲವೇ?

1 ಕೊರಿಂಥದವರಿಗೆ 6:5

ನಿಮ್ಮನ್ನು ನಾಚಿಕೆ ಪಡಿಸುವದಕ್ಕೆ ಇದನ್ನು ಹೇಳುತ್ತೇನೆ. ತನ್ನ ಸಹೋದರರ ಮಧ್ಯದಲ್ಲಿ ನ್ಯಾಯತೀರಿಸಬಲ್ಲವನಾದ ಬುದ್ಧಿವಂತನು ನಿಮ್ಮಲ್ಲಿ ಒಬ್ಬನಾದರೂ ಇಲ್ಲವೋ?

Interlinear

Choose Theme