Home Bibles ಯೋಬ 42:7 · ಕನ್ನಡ ಬೈಬಲ್
ಯೋಬ 42:7 · ಕನ್ನಡ ಬೈಬಲ್

ಕರ್ತನು ಈ ಮಾತುಗಳನ್ನೆಲ್ಲಾ ಯೋಬನಿಗೆ ಹೇಳಿದ ಮೇಲೆ ಕರ್ತನು ತೇಮಾನ್ಯನಾದ ಎಲೀಫಜ ನಿಗೆ -- ನಿನ್ನ ಮೇಲೆಯೂ ನಿನ್ನ ಸ್ನೇಹಿತರಿಬ್ಬರ ಮೇಲೆಯೂ ಕೋಪಗೊಂಡಿದ್ದೇನೆ; ನೀವು ನನ್ನ ಸೇವಕನಾದ ಯೋಬನ ಪ್ರಕಾರ ನನ್ನ ವಿಷಯವಾಗಿ ಸರಿಯಾದವುಗಳನ್ನು ಮಾತಾಡಲಿಲ್ಲ.

Cross references

ಯೋಬ 2:11

ಇದಲ್ಲದೆ ಯೋಬನ ಮೂವರು ಸ್ನೇಹಿತರು ಅವನ ಮೇಲೆ ಬಂದ ಈ ಎಲ್ಲಾ ಕೇಡನ್ನು ಕುರಿತು ಕೇಳಿ ತಮ್ಮ ತಮ್ಮ ಸ್ಥಳಗಳಿಂದ ಬಂದರು. ಅವರಾ ರಂದರೆ; ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು; ಇವರು ಅವನಿಗೋಸ್ಕರ ಗೋಳಾಡುವದಕ್ಕೂ ಅವನನ್ನು ಸಂತೈ ಸುವದಕ್ಕೂ ಹೋಗಬೇಕೆಂದು ತಮ್ಮಲ್ಲಿ ಆಲೋಚನೆ ಮಾಡಿಕೊಂಡರು.

ಯೋಬ 4:1

ತೇಮಾನ್ಯನಾದ ಎಲೀಫಜನು ಉತ್ತರ ಕೊಟ್ಟು--

ಯೋಬ 8:1

ಆಗ ಶೂಹ್ಯನಾದ ಬಿಲ್ದದನು ಈ ಪ್ರಕಾರಉತ್ತರಿಸಿದನು--

ಯೋಬ 11:1

ಆಗ ನಾಮಾಥ್ಯನಾದ ಚೋಫರನು ಉತ್ತರಿಸಿ ಹೀಗೆ ನುಡಿದನು;

ಯೋಬ 11:5

ದೇವರು ಮಾತನಾಡಿ ನಿನ್ನ ಕಡೆಗೆ ತನ್ನ ತುಟಿಗಳನ್ನು ತೆರೆದು ಜ್ಞಾನದ ಮರ್ಮ ಗಳನ್ನು ನಿನಗೆ ತೋರಿಸಿದರೆ ಒಳ್ಳೆಯದು.

ಯೋಬ 32:2

ಆಗ ರಾಮನ ಬಂಧುವಾದ ಬೂಜ್‌ನಾದ ಬರಕೇಲನ ಮಗನಾದ ಎಲೀಹುವಿನ ಕೋಪ ಯೋಬನ ಮೇಲೆ ಉರಿಯಿತು, ಅವನು ದೇವರಿಗಿಂತ ತನ್ನನ್ನು ನೀತಿವಂತ ನೆಂದು ಸ್ಥಾಪಿಸಿದ್ದರಿಂದ ಅವನ ಕೋಪ ಉರಿಯಿತು.

ಯೋಬ 32:3

ಅವನ ಮೂವರು ಸ್ನೇಹಿತರ ಮೇಲೆಯೂ ಅವರು ಉತ್ತರ ಕಂಡುಕೊಳ್ಳದೆ ಯೋಬನನ್ನು ಖಂಡಿಸಿದ್ದರಿಂದ ಅವನ ಕೋಪ ಉರಿಯಿತು.

ಯೋಬ 32:5

ಅವರು ತನಗಿಂತ ಹಿರಿಯರಾಗಿದ್ದರು. ಆ ಮೂವರ ಬಾಯಲ್ಲಿ ಏನೂ ಉತ್ತರವಿಲ್ಲವೆಂದು ಎಲೀಹು ನೋಡಿದಾಗ ಅವನ ಕೋಪ ಉರಿಯಿತು.

ಕೀರ್ತನೆಗಳು 51:4

ನೀನು ನಿನ್ನ ಮಾತುಗಳಲ್ಲಿ ನೀತಿವಂತ ನಾಗಿಯೂ ನಿನ್ನ ನ್ಯಾಯತೀರ್ವಿಕೆಯಲ್ಲಿ ನಿರ್ಮಲನಾ ಗಿಯೂ ಇದ್ದಿಯಲ್ಲಾ; ನಿನಗೆ ಮಾತ್ರವೇ ವಿರೋಧ ವಾಗಿ ನಾನು ಪಾಪಮಾಡಿ ನಿನ್ನ ದೃಷ್ಟಿಯಲ್ಲಿ ಈ ಕೆಟ್ಟದ್ದನ್ನು ಮಾಡಿದ್ದೇನೆ.

Interlinear

Choose Theme