Home Bibles ಯೋಬ 11:18 · ಕನ್ನಡ ಬೈಬಲ್
ಯೋಬ 11:18 · ಕನ್ನಡ ಬೈಬಲ್

ನಿರೀಕ್ಷೆ ಇದೆ ಎಂದು ಭರವಸದಿಂದಿರುವಿ; ಹೌದು, ನೀನು ನಿನ್ನ ಸುತ್ತಲೂ ಅಗೆದು ಭರವಸದಿಂದ ವಿಶ್ರಾಂತಿ ತಕ್ಕೊಳ್ಳುವಿ.

Cross references

ಲೇವ್ಯಕಾಂಡ 26:5

ಕಣ ತುಳಿಸುವ ಕೆಲಸವು ದ್ರಾಕ್ಷೇ ಬೆಳೆಯ ವರೆಗೂ ದ್ರಾಕ್ಷೇ ಬೆಳೆಯನ್ನು ಕೂಡಿಸುವ ಕೆಲಸವು ಬಿತ್ತನೆಯ ಕಾಲದ ವರೆಗೂ ನಡೆಯುವವು. ನೀವು ನಿಮ್ಮ ರೊಟ್ಟಿ ಯನ್ನು ತಿಂದು ತೃಪ್ತಿಹೊಂದಿ ಸುರಕ್ಷಿತವಾಗಿ ನಿಮ್ಮ ದೇಶದಲ್ಲಿ ವಾಸಮಾಡುವಿರಿ.

ಯೋಬ 6:11

ನಾನು ನಿರೀಕ್ಷಿಸುವ ಹಾಗೆ ನನ್ನ ಶಕ್ತಿ ಏನು? ನಾನು ನನ್ನ ಆಯುಷ್ಯವನ್ನು ಹೆಚ್ಚಿಸುವ ಹಾಗೆ ನನ್ನ ಅಂತ್ಯವೇನು?

ಯೋಬ 7:6

ನನ್ನ ದಿನಗಳು ಮಗ್ಗದ ಲಾಳಿಗಿಂತ ತ್ವರೆಯಾಗಿವೆ; ನಿರೀಕ್ಷೆ ಇಲ್ಲದೆ ಅವು ಮುಗಿಯುತ್ತವೆ.

ಯೋಬ 22:27

ನೀನು ಆತನಿಗೆ ವಿಜ್ಞಾಪನೆ ಮಾಡಲು ನಿನ್ನನ್ನು ಕೇಳುವನು; ನಿನ್ನ ಪ್ರಮಾಣಗಳನ್ನು ಸಲ್ಲಿಸುವಿ.

ಕೀರ್ತನೆಗಳು 3:5

ಕರ್ತನೇ ನನ್ನನ್ನು ಕಾಪಾಡಿದ್ದರಿಂದ ನಾನು ಮಲಗಿ ನಿದ್ದೆಗೈದು ಎಚ್ಚತ್ತೆನು.

ಕೀರ್ತನೆಗಳು 4:8

ಸಮಾಧಾನವಾಗಿ ಮಲಗಿ ನಿದ್ರೆ ಸಹ ಮಾಡುವೆನು; ಯಾಕಂದರೆ ಕರ್ತನೇ, ನೀನೋಬ್ಬನೇ ನನ್ನನ್ನು ಸುರ ಕ್ಷಿತವಾಗಿ ವಾಸಿಸುವಂತೆ ಮಾಡುತ್ತೀ.

ಕೀರ್ತನೆಗಳು 43:5

ಓ ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ಇನ್ನೂ ಕೊಂಡಾಡುವೆನು.

ಸಾಮೇತಿಗಳು 3:24

ನೀನು ಮಲಗುವಾಗ ನಿನಗೆ ಹೆದರಿಕೆ ಇರುವದಿಲ್ಲ, ಹೌದು, ನೀನು ಮಲಗಿಕೊಳ್ಳುವಿ. ನಿನ್ನ ನಿದ್ರೆಯು ಸುಖವಾಗಿರುವದು.

ಸಾಮೇತಿಗಳು 14:32

ದುಷ್ಟನು ತನ್ನ ದುಷ್ಟತನದಲ್ಲಿ ನೂಕ ಲ್ಪಡುತ್ತಾನೆ; ಮರಣದಲ್ಲಿ ನೀತಿವಂತನಿಗೆ ನಿರೀಕ್ಷೆ ಇದೆ.

ರೋಮಾಪುರದವರಿಗೆ 5:3

ಇದು ಮಾತ್ರವಲ್ಲದೆ ನಮಗೆ ಉಂಟಾಗುವ ಉಪದ್ರವ ಗಳಲ್ಲಿಯೂ ಹೆಚ್ಚಳ ಪಡುತ್ತೇವೆ; ಉಪದ್ರವದಿಂದ ತಾಳ್ಮೆಯೂ

ಕೊಲೊಸ್ಸೆಯವರಿಗೆ 1:27

ಅನ್ಯಜನಗಳಲ್ಲಿ ಈ ಮರ್ಮದ ಮಹಿಮಾತಿಶಯವು ಎಷ್ಟೆಂಬದನ್ನು ದೇವರು ತನ್ನ ಜನರಿಗೆ (ಪರಿಶುದ್ಧರಿಗೆ) ತಿಳಿಸುವದಕ್ಕೆ ಮನಸ್ಸು ಮಾಡಿ ಕೊಂಡನು. ಈ ಮರ್ಮವು ಏನೆಂದರೆ ನಿಮ್ಮಲ್ಲಿರುವ ಕ್ರಿಸ್ತನು ಮಹಿಮೆಯ ನಿರೀಕ್ಷೆಯಾಗಿದ್ದಾನೆ ಎಂಬದೇ.

Interlinear

Choose Theme