Home Bibles ☰ Books ಯೆರೆಮಿಯ 8:3 · ಕನ್ನಡ ಬೈಬಲ್
ಯೆರೆಮಿಯ 8:3 · ಕನ್ನಡ ಬೈಬಲ್

ಅವರು ತಮ್ಮ ನಾಲಿಗೆಗಳನ್ನು ಬಿಲ್ಲಿನಂತೆ ಸುಳ್ಳುಗಳಿಗಾಗಿ ಬೊಗ್ಗಿಸುತ್ತಾರೆ. ಆದರೆ ಭೂಮಿಯಲ್ಲಿ ಸತ್ಯಕ್ಕಾಗಿ ಬಲಿಷ್ಠರಾಗುವದಿಲ್ಲ; ಅವರು ಕೇಡಿನಿಂದ ಕೇಡಿಗೆ ಹೋಗುತ್ತಾ ನನ್ನನ್ನು ಅರಿಯದೆ ಇದ್ದಾರೆಂದು ಕರ್ತನು ಅನ್ನುತ್ತಾನೆ.

Cross references

ಲೇವ್ಯಕಾಂಡ 26:33

ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು; ನಿಮ್ಮ ಭೂಮಿ ಹಾಳಾಗಿ ರುವದು; ನಿಮ್ಮ ಪಟ್ಟಣಗಳು ನಾಶವಾಗಿರುವವು.

ದ್ವಿತೀಯೋಪದೇಶಕಾಂಡ 30:1

ಇದಲ್ಲದೆ ನಾನು ನಿನ್ನ ಮುಂದೆ ಇಟ್ಟ ಈ ಎಲ್ಲಾ ಆಶೀರ್ವಾದವೂ ಶಾಪವೂ ನಿನಗೆ ಸಂಭವಿಸಿದ ಮೇಲೆ ನಾನು ಈಹೊತ್ತು ನಿನಗೆ ಆಜ್ಞಾಪಿಸುವದೆಲ್ಲಾದರಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ತಳ್ಳಿಬಿಟ್ಟ ಎಲ್ಲಾ ಜನಾಂಗಗಳ ಮಧ್ಯದಲ್ಲಿ ನೀನು ನೆನಪುಮಾಡಿ

ದ್ವಿತೀಯೋಪದೇಶಕಾಂಡ 30:4

ಆಕಾಶದ ಅಂತ್ಯದಲ್ಲಿ ನಿನ್ನವರು ಹೊರ ಡಿಸಲ್ಪಟ್ಟಿದ್ದರೂ ಅಲ್ಲಿಂದ ದೇವರಾದ ಕರ್ತನು ನಿನ್ನನ್ನು ಕೂಡಿಸಿ ಅಲ್ಲಿಂದ ನಿನ್ನನ್ನು ಕರತರುವನು.

1 ಅರಸುಗಳು 19:4

ಆದರೆ ಅವನು ಅರಣ್ಯದಲ್ಲಿ ಒಂದು ದಿವಸದ ಪ್ರಯಾಣ ಮಾಡಿ ಷಿಟ್ಟೀಮ್‌ ಮರದ ಕೆಳಗೆ ಕುಳಿತು ತಾನು ಸಾಯಬೇಕೆಂದು ಬೇಡಿ ಕೊಂಡು--ಕರ್ತನೇ, ಈಗ ಸಾಕು; ನನ್ನ ಪ್ರಾಣವನ್ನು ತೆಗೆದುಕೋ. ಯಾಕಂದರೆ ನನ್ನ ಪಿತೃಗಳಿಗಿಂತ ನಾನು ಉತ್ತಮನಲ್ಲ ಅಂದನು.

ಯೋಬ 3:20

ಕಷ್ಟದಲ್ಲಿರುವವನಿಗೆ ಬೆಳಕೂ ಕಹಿಯಾದ ಪ್ರಾಣ ವುಳ್ಳವರಿಗೆ ಜೀವವೂ ಯಾಕೆ ಕೊಡಲ್ಪಟ್ಟಿವೆ?

ಯೋಬ 7:15

ಆದದರಿಂದ ನನ್ನ ಪ್ರಾಣವು ಕೊರಳು ಹಿಸುಕುವದನ್ನೂ ನನ್ನ ಜೀವವು ಮರಣವನ್ನೂ ಆದು ಕೊಳ್ಳುತ್ತದೆ.

ಯೆರೆಮಿಯ 20:14

ನಿಮ್ಮ ಕ್ರಿಯೆಗಳ ಫಲದ ಪ್ರಕಾರ ನಿಮ್ಮನ್ನು ಶಿಕ್ಷಿಸು ತ್ತೇನೆಂದು ಕರ್ತನು ಅನ್ನುತ್ತಾನೆ; ಅದರ ಅಡವಿಗೆ ಬೆಂಕಿಹಚ್ಚುತ್ತೇನೆ; ಅದರ ಸುತ್ತಲಿರುವದನ್ನೆಲ್ಲಾ ಅದು ತಿಂದುಬಿಡುವದು.

ಯೆರೆಮಿಯ 23:3

ಆಗ ಕರ್ತನು ನನಗೆ--ಯೆರೆವಿಾಯನೇ, ಏನು ನೋಡುತ್ತೀ ಅಂದನು. ಆಗ ನಾನು ಅಂಜೂರದ ಹಣ್ಣುಗಳನ್ನು ನೋಡುತ್ತೇನೆ; ಒಳ್ಳೇ ಹಣ್ಣುಗಳು ಬಹಳ ಒಳ್ಳೇವು; ಕೆಟ್ಟ ಹಣ್ಣುಗಳು ಬಹಳ ಕೆಟ್ಟವುಗಳು, ತಿನ್ನ ಕೂಡದ ಹಾಗೆ ಅಷ್ಟು ಕೆಟ್ಟವಾಗಿವೆ ಅಂದೆನು.

ಯೆರೆಮಿಯ 23:8

ತಿನ್ನಕೂಡದ ಹಾಗೆ ಅಷ್ಟು ಕೆಟ್ಟವುಗಳಾಗಿರುವ ಆ ಕೆಟ್ಟ ಅಂಜೂರದ ಹಣ್ಣುಗಳ ಹಾಗೆ ನಿಶ್ಚಯವಾಗಿ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ ಅವನ ಪ್ರಧಾನರನ್ನೂ ಈ ದೇಶದಲ್ಲಿ ಉಳಿಯುವ ಯೆರೂಸಲೇಮಿನ ಶೇಷವನ್ನೂ ಐಗುಪ್ತದೇಶದಲ್ಲಿ ವಾಸಿಸುವವರನ್ನೂ ಒಪ್ಪಿಸುತ್ತೇನೆಂದು ಕರ್ತನು ಹೇಳುತ್ತಾನೆ.

ಯೆರೆಮಿಯ 29:14

ನಿನ್ನನ್ನು ಪ್ರೀತಿ ಮಾಡುವವರೆಲ್ಲರು ನಿನ್ನನ್ನು ಮರೆತುಬಿಟ್ಟಿದ್ದಾರೆ, ನಿನ್ನನ್ನು ಹುಡುಕುವದಿಲ್ಲ; ನಿನ್ನ ಅಕ್ರಮಗಳು ಬಹಳವೂ ನಿನ್ನ ಪಾಪಗಳು ಪ್ರಬಲವೂ ಆಗಿರುವದರಿಂದ ಶತ್ರುವಿನ ಗಾಯದಿಂದಲೂ ಕ್ರೂರನ ಶಿಕ್ಷೆಯಿಂದಲೂ ನಾನು ನಿನ್ನನ್ನು ಗಾಯಪಡಿಸಿದ್ದೇನೆ.

ಯೆರೆಮಿಯ 40:12

ಆ ಮನುಷ್ಯರನ್ನೆಲ್ಲಾ ಕರಕೊಂಡು, ನೆತನ್ಯನ ಮಗನಾದ ಇಷ್ಮಾಯೇಲನ ಸಂಗಡ ಯುದ್ಧ ಮಾಡುವದಕ್ಕೆ ಹೋಗಿ ಗಿಬ್ಯೋನಿ ನಲ್ಲಿರುವ ದೊಡ್ಡ ನೀರುಗಳ ಬಳಿಯಲ್ಲಿ ಅವನನ್ನು ಕಂಡರು.

ಯೆರೆಮಿಯ 44:2

ಬಾರೂಕನೇ, ಇಸ್ರಾಯೇಲಿನ ದೇವರಾದ ಕರ್ತನು ನಿನ್ನನ್ನು ಕುರಿತು ಹೀಗೆ ಹೇಳುತ್ತಾನೆ--ಈಗ ನನಗೆ ಅಯ್ಯೋ!

ದಾನಿಯೇಲ 9:7

ಓ ಕರ್ತನೇ, ನೀನು ನೀತಿವಂತನು; ಆದರೆ ನಾವು ಈ ದಿನದ ಪ್ರಕಾರ ನಾಚಿಕೆಗೀಡಾದವರು; ಯೆಹೂದದ ಮನುಷ್ಯರನ್ನೂ ಯೆರೂಸಲೇಮಿನ ನಿವಾ ಸಿಗಳನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಹತ್ತಿರದಲ್ಲಿ ರುವವರನ್ನೂ ಮತ್ತು ದೂರದಲ್ಲಿರುವವರನ್ನೂ ಅವರು ನಿನಗೆ ವಿರುದ್ಧವಾಗಿ ಮಾಡಿರುವ ಅವರ ಅಪರಾಧದ ನಿಮಿತ್ತ ನೀನು ಅವರನ್ನು ಎಲ್ಲಾ ದೇಶಗಳಲ್ಲಿಯೂ ಓಡಿಸಿ ಬಿಟ್ಟಿದ್ದೀ.

Interlinear

Choose Theme