Home Bibles ಯೆರೆಮಿಯ 49:2 · ಕನ್ನಡ ಬೈಬಲ್
ಯೆರೆಮಿಯ 49:2 · ಕನ್ನಡ ಬೈಬಲ್

ಜನಾಂಗಗಳಿಗೆ ತಿಳಿಸಿರಿ, ಸಾರಿರಿ; ಧ್ವಜವನ್ನೆತ್ತಿರಿ; ಸಾರಿರಿ, ಮರೆಮಾಡಬೇಡಿರಿ, ಬಾಬೆಲು ಹಿಡಿಯ ಲ್ಪಟ್ಟಳು, ಬೇಲ್‌ನಿಗೆ ನಾಚಿಕೆಯಾಯಿತು, ಮೆರೋದಾ ಕನು ತುಂಡು ತುಂಡಾಗಿ ಮುರಿದು ಹೋದನು, ಅವಳ ವಿಗ್ರಹಗಳಿಗೆ ನಾಚಿಕೆಯಾಯಿತು. ಅವಳ ವಿಗ್ರಹಗಳು ಮುರಿದು ಹೋದವೆಂದು ಹೇಳಿರಿ;

Cross references

ಅಂಕೆಗಳ ಪುಸ್ತಕ 21:25

ಇಸ್ರಾಯೇಲ್ಯರು ಆ ಪಟ್ಟಣಗಳನ್ನೆಲ್ಲಾ ತೆಗೆದು ಕೊಂಡರು; ಇಸ್ರಾಯೇಲ್ಯರು ಅಮೋರಿಯರ ಸಮಸ್ತ ಪಟ್ಟಣಗಳಲ್ಲಿಯೂ ಹೆಷ್ಬೋನಿನಲ್ಲಿಯೂ ಅದರ ಸಮಸ್ತ ಗ್ರಾಮಗಳಲ್ಲಿಯೂ ವಾಸಮಾಡಿದರು.

ದ್ವಿತೀಯೋಪದೇಶಕಾಂಡ 3:11

ಮಹಾ ಶರೀರಗಳಲ್ಲಿ ಉಳಿದವರೊಳಗೆ ಬಾಷಾನಿನ ಅರಸ ನಾದ ಓಗನು ಮಾತ್ರ ಉಳಿದನು; ಅಗೋ, ಅವನ ಮಂಚವು ಕಬ್ಬಿಣದ ಮಂಚ; ಅದು ಅಮ್ಮೋನನ ಮಕ್ಕಳ ರಬ್ಬಾನಲ್ಲಿ ಉಂಟಲ್ಲವೋ? ಅದರ ಉದ್ದವು ಪುರುಷನ ಕೈಯಳತೆಯ ಪ್ರಕಾರ ಒಂಭತ್ತು ಮೊಳ, ಅಗಲವು ನಾಲ್ಕು ಮೊಳ ಇತ್ತು.

ಯೆಹೋಶುವ 13:24

ಇದಲ್ಲದೆ ಮೋಶೆಯು ಗಾದನ ಮಕ್ಕಳ ಗೋತ್ರ ಅವರ ಕುಟುಂಬಗಳ ಪ್ರಕಾರ ಬಾಧ್ಯತೆಯಾಗಿ ಕೊಟ್ಟನು.

2 ಸಮುವೇಲ 11:1

ಒಂದು ವರುಷ ಕಳೆದ ತರುವಾಯ ಅರಸುಗಳು ಯುದ್ಧಕ್ಕೆ ಹೊರಡುವಾಗ ದಾವೀದನು ಯೋವಾಬನನ್ನೂ ಅವನ ಸಂಗಡವಿದ್ದ ಅವನ ಸೇವಕರನ್ನೂ ಎಲ್ಲಾ ಇಸ್ರಾಯೇಲ್ಯರನ್ನೂ ಕಳುಹಿಸಿದನು; ಅವರು ಅಮ್ಮೋನನ ಮಕ್ಕಳನ್ನು ಸಂಹ ರಿಸಿ ರಬ್ಬಕ್ಕೆ ಮುತ್ತಿಗೆ ಹಾಕಿದರು. ಆದರೆ ದಾವೀದನು ಇನ್ನೂ ಯೆರೂಸಲೇಮಿನಲ್ಲೇ ಕಾದಿದ್ದನು.

2 ಸಮುವೇಲ 12:27

ಯೋವಾಬನು ದಾವೀದನಿಗೆ--ನಾನು ರಬ್ಬದ ಮೇಲೆ ಯುದ್ಧಮಾಡಿ ನೀರುಗಳ ಪಟ್ಟಣವನ್ನು ಹಿಡಿದಿದ್ದೇನೆ.

ಕೀರ್ತನೆಗಳು 48:11

ನಿನ್ನ ನ್ಯಾಯತೀರ್ವಿಕೆಗಳ ನಿಮಿತ್ತ ಚೀಯೋನ್‌ ಪರ್ವತವು ಸಂತೋಷಪಡಲಿ; ಯೆಹೂದದ ಕುಮಾರ್ತೆಯರು ಉಲ್ಲಾಸಪಡಲಿ.

ಕೀರ್ತನೆಗಳು 97:8

ಚೀಯೋನ್‌ ಇದನ್ನು ಕೇಳಿ ಸಂತೋಷಿಸಿತು. ಓ ಕರ್ತನೇ, ನಿನ್ನ ನ್ಯಾಯಗಳ ನಿಮಿತ್ತ ಯೆಹೂದದ ಕುಮಾರ್ತೆಗಳು ಉಲ್ಲಾಸಿಸುತ್ತಾರೆ.

ಯೆಶಾಯ 11:14

ಆದರೆ ಅವರು ಪಶ್ಚಿಮ ದಿಕ್ಕಿಗೆ ಫಿಲಿಷ್ಪಿಯರ ಹೆಗಲಿನ ಮೇಲೆ ಎರಗುವರು; ಅವರು ಜೊತೆಯಾಗಿ ಪೂರ್ವದವರನ್ನು ಹಾಳುಮಾಡುವರು; ಅವರು ಎದೋಮಿನ ಮತ್ತು ಮೋವಾಬಿನ ಮೇಲೆ ತಮ್ಮ ಕೈಯನ್ನು ಹಾಕುವರು; ಅಮ್ಮೋನ್ಯರ ಮಕ್ಕಳು ಅವರಿಗೆ ವಿಧೇಯರಾಗುವರು.

ಯೆಶಾಯ 14:1

ಕರ್ತನು ಯಾಕೋಬ್ಯರನ್ನು ಕರುಣಿಸಿ ಮತ್ತೆ (ಇನ್ನೂ) ಇಸ್ರಾಯೇಲ್ಯರನ್ನು ಆದುಕೊಂಡು ಅವರನ್ನು ತಮ್ಮ ಸ್ವಂತ ದೇಶದಲ್ಲಿ ಸೇರಿಸಬೇಕೆಂದಿದ್ದಾನೆ. ಅನ್ಯರು ಅವರೊಂದಿಗೆ ಕೂಡಿ ಬಂದು ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು.

ಯೆಶಾಯ 14:2

ಜನರು ಅವರನ್ನು ತೆಗೆದುಕೊಂಡು ತಮ್ಮ ಸ್ಥಳಕ್ಕೆ ಅವರನ್ನು ಬರಮಾಡುವರು. ಆಗ ಇಸ್ರಾಯೇಲಿನ ಮನೆತನದವರು ಕರ್ತನ ದೇಶದಲ್ಲಿ ಆ ಜನಾಂಗದ ವರನ್ನು ಗಂಡು ಹೆಣ್ಣಾಳುಗಳನ್ನಾಗಿ (ದಾಸದಾಸಿಯ ರನ್ನಾಗಿ) ಇಟ್ಟುಕೊಳ್ಳುವರು. ತಮ್ಮನ್ನು ಸೆರೆಹಿಡಿದ ವರನ್ನು ಸೆರೆಹಿಡಿಯುವರು, ತಮ್ಮನ್ನು ಹಿಂಸಿಸಿದವರ ಮೇಲೆ ಅಧಿಕಾರನಡಿಸುವರು.

ಯೆರೆಮಿಯ 4:19

ನನ್ನ ಕರುಳುಗಳು, ನನ್ನ ಕರುಳುಗಳು! ನನ್ನ ಹೃದಯದಲ್ಲಿಯೇ ನೊಂದುಕೊಂಡಿದ್ದೇನೆ; ನನ್ನ ಹೃದ ಯವು ನನ್ನಲ್ಲಿ ಕೂಗುತ್ತದೆ, ಮೌನವಾಗಿರಲಾರೆನು; ಓ ನನ್ನ ಪ್ರಾಣವೇ, ತುತೂರಿಯ ಶಬ್ದವನ್ನೂ ಯುದ್ಧದ ಆರ್ಭಟವನ್ನೂ ನೀನು ಕೇಳಿದ್ದೀ.

ಯೆರೆಮಿಯ 49:1

ಬಾಬೆಲಿಗೆ ವಿರೋಧವಾಗಿಯೂ ಕಸ್ದೀಯರ ದೇಶಕ್ಕೆ ವಿರೋಧವಾಗಿಯೂ ಕರ್ತನು ಪ್ರವಾದಿಯಾದ ಯೆರೆವಿಾಯನ ಮೂಲಕ ಹೇಳಿಸಿದ ವಾಕ್ಯವು.

ಯೆಹೆಜ್ಕೇಲ 16:46

ನಿನ್ನ ಎಡಗಡೆಯಲ್ಲಿ ಕುಮಾರ್ತೆಯರೊಂದಿಗೆ ವಾಸಿಸುವ ಸಮಾರ್ಯವೇ ನಿನ್ನ ಅಕ್ಕ; ಬಲಗಡೆಯಲ್ಲಿ ಕುಮಾರ್ತೆಯರೊಂದಿಗೆ ವಾಸಿಸುವ ಸೊದೋಮ್‌ ನಿನ್ನ ತಂಗಿ.

ಯೆಹೆಜ್ಕೇಲ 21:20

ಅಮ್ಮೋನ್ಯರ ರಬ್ಬಾ ಎಂಬ ಕೋಟೆ ಯುಳ್ಳ ಯೆರೂಸಲೇಮಿನಲ್ಲಿರುವ ಯೆಹೂದಕ್ಕೂ ಕತ್ತಿ ಬರುವ ಹಾಗೆ ಮಾರ್ಗವನ್ನು ನೇಮಿಸಿಕೋ.

ಯೆಹೆಜ್ಕೇಲ 21:25

ದುಷ್ಟನಾದ ಭ್ರಷ್ಟ ಇಸ್ರಾಯೇಲನ ಪ್ರಭುವೇ, ನೀನು ಮಾಡಿದ ಅಕ್ರಮಗಳಿಂದ ನಿನಗೆ ಅಂತ್ಯ ದಿವಸವು ಬಂದಿತು.

ಯೆಹೆಜ್ಕೇಲ 25:4

ಇಗೋ, ನಾನು ನಿನ್ನನ್ನು ಮೂಡಣದವರಿಗೆ ಸ್ವಾಸ್ತ್ಯವಾಗಿ ಕೊಡುತ್ತೇನೆ, ಅವರು ತಮ್ಮ ಭವನಗಳನ್ನು ನಿನ್ನಲ್ಲಿ ಇರಿಸುವರು, ತಮ್ಮ ನಿವಾಸಗಳನ್ನು ನಿನ್ನಲ್ಲಿ ಮಾಡಿಕೊಳ್ಳುವರು, ಅವರು ನಿನ್ನ ಫಲವನ್ನು ತಿಂದು ನಿನ್ನ ಹಾಲನ್ನೇ ಕುಡಿಯುವರು.

ಆಮೋಸ 1:14

ಆದರೆ ನಾನು ರಬ್ಬದ ಗೋಡೆಯಲ್ಲಿ ಬೆಂಕಿಯನ್ನು ಹತ್ತಿಸುವೆನು; ಅದು ಯುದ್ಧದ ದಿನದಲ್ಲಿ ಆರ್ಭಟದ ಸಂಗಡವೂ ಬಿರುಗಾಳಿಯ ದಿನದಲ್ಲಿ ಸುಳಿಗಾಳಿಯ ಸಂಗಡವೂ ಅಲ್ಲಿಯ ಅರಮನೆಗಳನ್ನು ನುಂಗಿಬಿಡುವದು.ಅವರ ಅರಸನು ತಾನು ತನ್ನ ರಾಜಕುಮಾರರ ಸಂಗಡ ಸೆರೆಗೆ ಹೋಗುವನೆಂದು ಕರ್ತನು ಹೇಳುತ್ತಾನೆ.

ಒಬದ್ಯ 1:19

ದಕ್ಷಿಣದವರು ಏಸಾವನ ಬೆಟ್ಟವನ್ನೂ ಬೈಲಿನವರು ಫಿಲಿಷ್ಟಿಯರನ್ನೂ ಸ್ವತಂತ್ರಿಸಿಕೊಳ್ಳುವರು; ಎಫ್ರಾಯಾಮಿನ ಹೊಲ ಗಳನ್ನು ಸಮಾರ್ಯದ ಹೊಲಗಳನ್ನು ಸಹ ಸ್ವಾಧೀನ ಮಾಡಿಕೊಳ್ಳುವರು ಮತ್ತು ಬೆನ್ಯಾವಿಾನನು ಗಿಲ್ಯಾದನ್ನು ಸ್ವತಂತ್ರಿಸಿಕೊಳ್ಳುವನು.

Interlinear

Choose Theme