ದುಷ್ಟನಾದ ಭ್ರಷ್ಟ ಇಸ್ರಾಯೇಲನ ಪ್ರಭುವೇ, ನೀನು ಮಾಡಿದ ಅಕ್ರಮಗಳಿಂದ ನಿನಗೆ ಅಂತ್ಯ ದಿವಸವು ಬಂದಿತು.
Cross references
ಇದಲ್ಲದೆ ಅವನು ದೇವರ ಮೇಲೆ ಆಣೆ ಇಡುವಂತೆ ಮಾಡಿದ ಅರಸನಾದ ನೆಬೂಕದ್ನೆಚ್ಚರನಿಗೆ ತಿರುಗಿ ಬಿದ್ದನು. ಹೇಗಂದರೆ ಅವನು ಇಸ್ರಾಯೇಲಿನ ದೇವರಾದ ಕರ್ತನ ಕಡೆಗೆ ತಿರುಗದೆಯೂ ತನ್ನ ಕುತ್ತಿಗೆ ಯನ್ನು ಬೊಗ್ಗಿಸದೆಯೂ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.
ದುಷ್ಟರ ದುಷ್ಟತನವು ಮುಗಿದು ಹೋಗಲಿ, ಆದರೆ ನೀತಿವಂತನನ್ನು ದೃಢಪಡಿಸು. ನೀತಿಯುಳ್ಳ ದೇವರು ಹೃದಯವನ್ನೂ ಅಂತರಿಂದ್ರಿ ಯಗಳನ್ನೂ ಶೋಧಿಸುತ್ತಾನಲ್ಲಾ.
ನೀನು ಜನಾಂಗಗಳನ್ನು ಗದರಿಸಿ ದುಷ್ಟರನ್ನು ನಾಶ ಮಾಡಿದ್ದೀ; ಅವರ ಹೆಸರನ್ನು ಯುಗ ಯುಗಾಂತರ ಗಳ ವರೆಗೂ ಅಳಿಸಿ ಬಿಟ್ಟಿದ್ದೀ.
ಮುಂದಿನ ತಲಾಂತರಕ್ಕೆ ತಿಳಿಸುವದಕ್ಕೋಸ್ಕರ ಅದರ ಬುರುಜುಗಳ ಮೇಲೆ ಮನಸ್ಸಿಟ್ಟು ಆಕೆಯ ಅರಮನೆಗಳನ್ನು ಲಕ್ಷಿಸಿರಿ.ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವ ರಾಗಿದ್ದಾನೆ. ಆತನು ಮರಣದ ವರೆಗೂ ನಮ್ಮನ್ನು ನಡಿಸುವನು.
ಆದದರಿಂದ ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--
ಬಾಬೆಲಿಗೆ ವಿರೋಧವಾಗಿಯೂ ಕಸ್ದೀಯರ ದೇಶಕ್ಕೆ ವಿರೋಧವಾಗಿಯೂ ಕರ್ತನು ಪ್ರವಾದಿಯಾದ ಯೆರೆವಿಾಯನ ಮೂಲಕ ಹೇಳಿಸಿದ ವಾಕ್ಯವು.
ಜನಾಂಗಗಳಿಗೆ ತಿಳಿಸಿರಿ, ಸಾರಿರಿ; ಧ್ವಜವನ್ನೆತ್ತಿರಿ; ಸಾರಿರಿ, ಮರೆಮಾಡಬೇಡಿರಿ, ಬಾಬೆಲು ಹಿಡಿಯ ಲ್ಪಟ್ಟಳು, ಬೇಲ್‌ನಿಗೆ ನಾಚಿಕೆಯಾಯಿತು, ಮೆರೋದಾ ಕನು ತುಂಡು ತುಂಡಾಗಿ ಮುರಿದು ಹೋದನು, ಅವಳ ವಿಗ್ರಹಗಳಿಗೆ ನಾಚಿಕೆಯಾಯಿತು. ಅವಳ ವಿಗ್ರಹಗಳು ಮುರಿದು ಹೋದವೆಂದು ಹೇಳಿರಿ;
ಕರ್ತನ ಆಲಯವನ್ನೂ ಅರಸನ ಮನೆಯನ್ನೂ ಯೆರೂಸಲೇಮಿನ ಎಲ್ಲಾ ಮನೆಗಳನ್ನೂ ದೊಡ್ಡವರ ಎಲ್ಲಾ ಮನೆಗಳನ್ನೂ ಬೆಂಕಿಯಿಂದ ಸುಟ್ಟು ಬಿಟ್ಟನು;
ಅಂತ್ಯವು ಬಂತು. ಅಂತ್ಯವು ಬಂದು ಅದು ನಿನಗೋಸ್ಕರ ಕಾಯುತ್ತಾ ಇದೆ. ಇಗೋ, ಅದು ಬಂತು.
ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಅವನು ತಿರಸ್ಕರಿಸಿದ ನನ್ನ ಪ್ರಮಾಣವನ್ನೂ ಅವನು ವಿಾರಿದ ಒಡಂಬಡಿಕೆಯನ್ನೂ ನನ್ನ ಜೀವ ದಾಣೆ ನಿಶ್ಚಯವಾಗಿ ಅವನ ತಲೆಯ ಮೇಲೆಯೇ ಮುಯ್ಯಿ ತೀರಿಸುವೆನು.
ನಿನ್ನ ಜೋಯಿಸರು ವ್ಯರ್ಥವಾದದ್ದನ್ನು ನೋಡಿ ಸಾಕ್ಷಾತ್ಕರಿಸಿ ಸುಳ್ಳಾಗಿ ಶಕುನ ಹೇಳುತ್ತಿದ್ದಾರೆ, ಹೀಗೆ ನಿನ್ನನ್ನು ಹತವಾದ ದುಷ್ಟರ ಕುತ್ತಿಗೆಗಳ ಮೇಲೆ ತಂದಿದ್ದಾರೆ. ಅವರ ಅಂತ್ಯದಿನವು ಬಂದಿದೆ; ಅದೇ ಅವರ ಅಕ್ರಮಗಳಿಗೆ ಅಂತ್ಯವಾಗಿದೆ.
ನಾನು ರಬ್ಬಾವನ್ನು ಒಂಟೆಗಳ ನಿವಾಸಸ್ಥಳವಾಗಿಯೂ ಅಮ್ಮೋನ್ಯರ ಮಂದೆ ಗಳು ಮಲಗುವ ಸ್ಥಳವನ್ನಾಗಿಯೂ ಮಾಡುವೆನು. ಆಗ ನಾನೇ ಕರ್ತನೆಂದು ನೀವು ತಿಳಿಯುವಿರಿ.
ಆ ದಿನವು ಸವಿಾಪವಾಯಿತು, ಕರ್ತನ ದಿನವು, ಆ ಕಾರ್ಮುಗಿಲಿನ ದಿನವು ಸವಿಾಪ ವಾಯಿತು; ಅದೇ ಅನ್ಯಜನಾಂಗಗಳ ಕಾಲವಾಗಿ ರುವದು.
ನೀನು ಇಸ್ರಾಯೇಲ್ಯರ ಮೇಲೆ ದೀರ್ಘ ದ್ವೇಷವಿಟ್ಟು ಅವರ ಅಪರಾಧದ ಕೊನೆಯ ಕಾಲದಲ್ಲಿ ಅಪತ್ತು ಸಂಭವಿಸಿ ದಾಗ ಅವರನ್ನು ಕತ್ತಿಯ ಬಾಯಿಗೆ ಗುರಿಮಾಡಿದಿ.
ಆದರೆ ನಾನು ರಬ್ಬದ ಗೋಡೆಯಲ್ಲಿ ಬೆಂಕಿಯನ್ನು ಹತ್ತಿಸುವೆನು; ಅದು ಯುದ್ಧದ ದಿನದಲ್ಲಿ ಆರ್ಭಟದ ಸಂಗಡವೂ ಬಿರುಗಾಳಿಯ ದಿನದಲ್ಲಿ ಸುಳಿಗಾಳಿಯ ಸಂಗಡವೂ ಅಲ್ಲಿಯ ಅರಮನೆಗಳನ್ನು ನುಂಗಿಬಿಡುವದು.ಅವರ ಅರಸನು ತಾನು ತನ್ನ ರಾಜಕುಮಾರರ ಸಂಗಡ ಸೆರೆಗೆ ಹೋಗುವನೆಂದು ಕರ್ತನು ಹೇಳುತ್ತಾನೆ.