ಕಸ್ದೀಯರ ದೇಶವು ಸುಲಿಗೆಯಾಗುವದು; ಅದನ್ನು ಸುಲುಕೊಳ್ಳುವವರೆಲ್ಲರಿಗೆ ತೃಪ್ತಿಯಾಗುವದೆಂದು ಕರ್ತನು ಅನ್ನುತ್ತಾನೆ.
Cross references
ಕರ್ತನು ನ್ಯಾಯವನ್ನು ಪ್ರೀತಿಮಾಡುತ್ತಾನೆ; ತನ್ನ ಪರಿಶುದ್ಧರನ್ನು ತೊರೆದುಬಿಡನು; ಅವರು ಯುಗ ಯುಗಕ್ಕೂ ಕಾಪಾಡಲ್ಪಡುವರು; ಆದರೆ ದುಷ್ಟರ ಸಂತತಿಯು ಕಡಿದುಹಾಕಲ್ಪಡುವದು.
ದುಷ್ಟನು ದೊಡ್ಡ ಅಧಿಕಾರದಲ್ಲಿರು ವದನ್ನು ನಾನು ನೋಡಿದೆನು; ಅವನು ಹಸುರಾಗಿ ವಿಸ್ತರಿಸಿಕೊಂಡ ಮರದ ಹಾಗೆ ಇದ್ದನು.
ನೀನು ಅವರೊಂದಿಗೆ ಹೂಣಿಡುವಿಕೆ ಯಲ್ಲಿ ಕೂಡಿಕೊಳ್ಳದೆ ಇರುವಿ. ನಿನ್ನ ದೇಶವನ್ನು ನೀನು ನಾಶಮಾಡಿ ನಿನ್ನ ಜನರನ್ನು ಕೊಂದುಹಾಕಿದಿ. ಕೆಟ್ಟವರ ಸಂತಾನವು ಎಂದೆಂದಿಗೂ ಹೆಸರು ಹೊಂದು ವದಿಲ್ಲ.
ಇಗೋ, ಸಾಯಂಕಾಲದಲ್ಲಿ ಭಯಭ್ರಾಂತಿ; ಉದ ಯಕ್ಕೆ ಮುಂಚೆ ಅವನು ಇಲ್ಲದಂತಾಗುವನು. ನಮ್ಮನ್ನು ಸೂರೆಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆ ಹೊಡೆಯುವವರ ಪಾಡು ಇದೇ.
ನಿನ್ನನ್ನು ಹೆಸರು ಹಿಡಿದು ಕರೆಯುವ ಕರ್ತನು ನಾನೇ, ಇಸ್ರಾಯೇಲಿನ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಬಂಡಾರವನ್ನೂ ಗುಪ್ತ ಸ್ಥಳಗಳಲ್ಲಿ ಮರೆ ಮಾಡಿದ ನಿಧಿ ನಿಕ್ಷೇಪಗಳನ್ನೂ ನಿನಗೆ ಕೊಡುವೆನು.
ಅವರು ಕರ್ಮೆಲಿನ ಬೆಟ್ಟದ ಕೊನೆಯಲ್ಲಿ ಅಡಗಿಕೊಂಡರೂ ನಾನು ಅವರನ್ನು ಹುಡುಕಿ ಅಲ್ಲಿಂದ ತೆಗೆಯುವೆನು; ಅವರು ನನ್ನ ಕಣ್ಣುಗಳಿಗೆ ಮರೆಯಾಗಿ ಸಮುದ್ರದ ತಳದಲ್ಲಿ ಅಡಗಿಕೊಂಡರೂ ಸರ್ಪಕ್ಕೆ ಅಪ್ಪಣೆಕೊಟ್ಟು ಅದು ಅವರನ್ನು ಅಲ್ಲೇ ಕಚ್ಚುವಂತೆ ಮಾಡುವೆನು.
ಸರ್ವರು ಸಂಹಾರದಿಂದ ಏಸಾವನ ಬೆಟ್ಟದೊಳಗಿಂದ ನಾಶ ವಾಗುವ ಹಾಗೆ ಓ ತೇಮಾನೇ, ನಿನ್ನ ಪರಾಕ್ರಮ ಶಾಲಿಗಳು ಗಾಬರಿಪಡುವರು.
ಆದರೆ ಏಸಾವನನ್ನು ಹಗೆ ಮಾಡಿದೆನು; ಅವನ ಬೆಟ್ಟಗಳನ್ನು ಹಾಳುಮಾಡಿ ಅವನ ಸ್ವಾಸ್ತ್ಯವನ್ನು ಅಡವಿಯ ಸರ್ಪಗಳಿಗೆ ಕೊಟ್ಟೆನು.
ಇದಕ್ಕನುಸಾರ-- ನಾನು ಯಾಕೋಬನನ್ನು ಪ್ರೀತಿಸಿದೆನು ಮತು ಏಸಾವನನ್ನು ಹಗೆಮಾಡಿದೆನು ಎಂದು ಬರೆಯಲ್ಪಟ್ಟಿದೆ.