ಸರ್ವರು ಸಂಹಾರದಿಂದ ಏಸಾವನ ಬೆಟ್ಟದೊಳಗಿಂದ ನಾಶ ವಾಗುವ ಹಾಗೆ ಓ ತೇಮಾನೇ, ನಿನ್ನ ಪರಾಕ್ರಮ ಶಾಲಿಗಳು ಗಾಬರಿಪಡುವರು.
Cross references
ಎಲೀಫಜನ ಮಕ್ಕಳು ಯಾರಂದರೆ: ತೇಮಾನ್ ಓಮಾರ್ ಚೆಫೋ ಗತಾಮ್ ಕೆನಜ್;
ಅವರ ಸಂಗಡ ಜಗಳವಾಡಬೇಡಿರಿ. ನಾನು ನಿಮಗೆ ಅವರ ದೇಶದಲ್ಲಿ ಪಾದದಷ್ಟೂ ಸ್ಥಳ ಕೊಡುವದಿಲ್ಲ; ಸೇಯಾರ್ ಬೆಟ್ಟವನ್ನು ಏಸಾವನಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲಾ.
ಯೋಬಾಬನು ಸತ್ತ ತರುವಾಯ ಅವನಿಗೆ ಬದಲಾಗಿ ತೇಮಾನೀಯರ ದೇಶದವನಾದ ಹೂಷಾಮನು ಆಳಿದನು.
ಇದಲ್ಲದೆ ಯೋಬನ ಮೂವರು ಸ್ನೇಹಿತರು ಅವನ ಮೇಲೆ ಬಂದ ಈ ಎಲ್ಲಾ ಕೇಡನ್ನು ಕುರಿತು ಕೇಳಿ ತಮ್ಮ ತಮ್ಮ ಸ್ಥಳಗಳಿಂದ ಬಂದರು. ಅವರಾ ರಂದರೆ; ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು; ಇವರು ಅವನಿಗೋಸ್ಕರ ಗೋಳಾಡುವದಕ್ಕೂ ಅವನನ್ನು ಸಂತೈ ಸುವದಕ್ಕೂ ಹೋಗಬೇಕೆಂದು ತಮ್ಮಲ್ಲಿ ಆಲೋಚನೆ ಮಾಡಿಕೊಂಡರು.
ಬಲವಾದ ಹೃದಯ ದವರು ಕೊಳ್ಳೆ ಮಾಡಲ್ಪಟ್ಟಿದ್ದಾರೆ, ತೂಕಡಿಸಿ ನಿದ್ರೆ ಹೋಗಿದ್ದಾರೆ; ಪರಾಕ್ರಮಿಗಳಲ್ಲಿ ಒಬ್ಬನೂ ತನ್ನ ಕೈಗ ಳನ್ನು ಕಂಡುಕೊಳ್ಳಲಿಲ್ಲ.
ಆ ದಿನದಲ್ಲಿ ಐಗುಪ್ತವು ಹೆಂಗಸರ ಹಾಗೆ ಇರು ವದು. ಸೈನ್ಯಗಳ ಕರ್ತನು ಅದರ ಮೇಲೆ ಆಡಿಸುವ ಕೈಯನ್ನು ಬೀಸುತ್ತಿರುವದರಿಂದ ಹೆದರಿ ಭಯಪಡು ವದು.
ನನ್ನ ಖಡ್ಗವು ಪರಲೋಕದಲ್ಲಿ ರೋಷ ಪಾನಮಾಡುವದು; ಇಗೋ, ಅದು ಎದೋ ಮಿನ ಮತ್ತು ನಾನು ಶಪಿಸಿದ ಜನರ ಮೇಲೆ ನ್ಯಾಯ ತೀರಿಸುವದಕ್ಕಾಗಿ ಕೆಳಗೆ ಇಳಿದು ಬರುವದು.
ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರಗಳನ್ನು ತೊಟ್ಟುಕೊಂಡ ವನಾಗಿ ತನ್ನ ಮಹಾಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? ನೀತಿಯಲ್ಲಿ ಮಾತನಾಡು ವವನೂ ರಕ್ಷಿಸಲು ಬಲಿಷ್ಠನೂ ಆಗಿರುವ ನಾನೇ.
ಅವರನ್ನು ಕಂಡವರೆಲ್ಲರು ಅವರನ್ನು ನುಂಗಿಬಿಟ್ಟರು, ಅವರ ಎದುರಾಳಿಗಳು--ನಮ್ಮಲ್ಲಿ ಅಪರಾಧವಿಲ್ಲ; ನೀತಿಯ ನಿವಾಸವಾದ ಕರ್ತನಿಗೆ, ಅವರ ತಂದೆಗಳ ನಿರೀಕ್ಷಣೆಯಾದ ಕರ್ತನಿಗೆ ವಿರೋಧವಾಗಿ ಪಾಪಮಾಡಿದ್ದಾರೆಂದು ಅಂದರು.
ಕರ್ತನು ಹೀಗೆ ಅನ್ನುತ್ತಾನೆ--ಆ ದಿವಸಗಳಲ್ಲಿ ಆ ಕಾಲದಲ್ಲಿ ಇಸ್ರಾ ಯೇಲಿನ ಅಕ್ರಮವನ್ನು ಹುಡುಕಿದರೂ ಅಲ್ಲಿ ಏನೂ ಇರದು; ಯೆಹೂದದ ಪಾಪಗಳನ್ನು ಹುಡುಕಿದರೂ ಅವು ಸಿಕ್ಕುವದಿಲ್ಲ. ನಾನು ಉಳಿಸುವವರನ್ನು ಮನ್ನಿಸುತ್ತೇನೆ.
ಯುದ್ಧದ ಶಬ್ದವೂ ದೊಡ್ಡ ನಾಶನವೂ ದೇಶದಲ್ಲಿ ಇರುವದು.
ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನ ನಿಮಿತ್ತ ವ್ಯಾಜ್ಯವಾಡುತ್ತೇನೆ; ನಿನಗೋಸ್ಕರ ಪ್ರತಿದಂಡನೆ ಮಾಡುತ್ತೇನೆ; ಅದರ ಸಮುದ್ರವನ್ನು ಒಣಗಿಸುತ್ತೇನೆ; ಅದರ ಬುಗ್ಗೆಯನ್ನು ಬತ್ತಿ ಹೋಗುವಂತೆ ಮಾಡುತ್ತೇನೆ;
ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನೂ ನನ್ನ ಕೈಯನ್ನು ಎದೋಮಿನ ಮೇಲೆ ಚಾಚುತ್ತೇನೆ, ಅದರೊಳಗಿನಿಂದ ಮನುಷ್ಯರನ್ನೂ ಮೃಗಗಳನ್ನೂ ಕಡಿದುಬಿಡುತ್ತೇನೆ, ತೇಮಾನು ಮೊದಲುಗೊಂಡು ಅದನ್ನು ಕಾಡನ್ನಾಗಿ ಮಾಡುತ್ತೇನೆ; ದೆದಾನಿಯವರು ಕತ್ತಿಯಿಂದ ಬೀಳು ವರು.
ಆದರೆ ನಾನು ತೇಮಾನಿನ ಮೇಲೆ ಬೆಂಕಿಯನ್ನು ಕಳುಹಿಸುವೆನು, ಅದು ಬೊಚ್ರದ ಅರಮನೆಗಳನ್ನು ನುಂಗಿಬಿಡುವದು.
ಶೂರರಲ್ಲಿ ಧೈರ್ಯ ಹೃದಯ ವುಳ್ಳವನು ಆ ದಿನದಲ್ಲಿ ಬೆತ್ತಲೆಯಾಗಿ ಓಡಿ ಹೋಗುವನು ಎಂದು ಕರ್ತನು ಹೇಳುತ್ತಾನೆ.
ಇದಲ್ಲದೆ ಚೀಯೋನ್ ಪರ್ವತದಲ್ಲಿ ರಕ್ಷಕರು ಏಸಾವಿನ ಬೆಟ್ಟಕ್ಕೆ ನ್ಯಾಯ ತೀರಿಸುವದಕ್ಕೋಸ್ಕರ ಏಳುವರು; ಆಗ ರಾಜ್ಯವು ಕರ್ತನದಾಗಿರುವದು.
ಇಗೋ, ನಿನ್ನ ಮಧ್ಯದಲ್ಲಿರುವ ನಿನ್ನ ಜನರು ಹೆಂಗಸರ ಹಾಗಿದ್ದಾರೆ; ನಿನ್ನ ದೇಶದ ಬಾಗಲುಗಳು ನಿನ್ನ ಶತ್ರುಗಳಿಗೆ ಅಗಲವಾಗಿ ತೆರೆಯಲ್ಪಡುವವು; ಬೆಂಕಿ ನಿನ್ನ ಅಗುಳಿಗಳನ್ನು ತಿಂದುಬಿಡುವದು.