Home Bibles ಯೆರೆಮಿಯ 48:3 · ಕನ್ನಡ ಬೈಬಲ್
ಯೆರೆಮಿಯ 48:3 · ಕನ್ನಡ ಬೈಬಲ್

ಹೆಷ್ಬೋನೇ, ಗೋಳಾಡು; ಆಯಿ ಹಾಳಾಯಿತು; ರಬ್ಬಾದ ಕುಮಾರ್ತೆಯರೇ ಕೂಗಿರಿ; ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಬೇಲಿಗಳ ಬಳಿಯಲ್ಲಿ ಅತ್ತಿತ್ತ ಓಡಾಡಿರಿ; ಅವರ ಅರಸನೂ ಅವನ ಯಾಜಕರೂ ಅವನ ಪ್ರಧಾನರೂ ಒಟ್ಟಾಗಿ ಸೆರೆಗೆ ಹೋಗುವರು.

Cross references

ಯೆಶಾಯ 15:2

ಬಯಿತ್‌ ಮತ್ತು ದೀಬೋನಿನವನು ಎತ್ತರವಾದ ಸ್ಥಳಗಳಿಗೆ ಅಳುವದಕ್ಕಾಗಿ ಹೋಗಿದ್ದಾನೆ; ನೆಬೋವಿಗೋಸ್ಕರವೂ ಮೇದೆಬಕ್ಕೋಸ್ಕರವೂ ಮೋವಾಬು ಗೋಳಾಡುತ್ತದೆ. ಅವರೆಲ್ಲರ ತಲೆಗಳೆಲ್ಲಾ ಬೋಳಾಗಿರುವವು, ಪ್ರತಿ ಯೊಬ್ಬರ ಗಡ್ಡವು ಕತ್ತರಿಸಿಹಾಕಲ್ಪಡುವದು.

ಯೆಶಾಯ 15:5

ನನ್ನ ಹೃದಯವು ಮೋವಾಬಿನ ನಿಮಿತ್ತ ಕೂಗು ತ್ತದೆ; ಅಲ್ಲಿಂದ ಪಲಾಯನವಾದವರು ಮೂರು ವರುಷದ ಕಡಸಿನಂತೆ ಚೋಯರಿಗೆ ಓಡಿಹೋಗು ವರು; ಲೂಹೀಥ್‌ ದಿಣ್ಣೆಯನ್ನು ಅಳುತ್ತಾ ಹತ್ತುತ್ತಾರೆ; ಯಾಕಂ ದರೆ ಹೊರೊನಯಿಮಿನ ದಾರಿಯಲ್ಲಿ ನಡೆಯುತ್ತಾ ನಾಶವಾದೆವಲ್ಲಾ ಎಂದು ಸ್ವರಗೈಯು ತ್ತಾರೆ.

ಯೆಶಾಯ 15:8

ಕೂಗಾಟವು ಮೋವಾಬಿನ ಎಲ್ಲೆ ಗಳ ತನಕ ಹಬ್ಬಿದೆ, ಅದರ ಕಿರಿಚಾಟ ಎಗ್ಲಯಿಮಿನ ವರೆಗೆ ಬೆಯೇರ್‌ ಏಲೀಮಿನ ವರೆಗೂ ವ್ಯಾಪಿಸಿದೆ.ದೀಮೋನಿನ ನೀರೆಲ್ಲಾ ರಕ್ತವಾಯಿತು; ದೀಮೋ ನಿನ ಮೇಲೆ ಹೆಚ್ಚಾದದ್ದನ್ನು ತರುವೆನು; ಮೋವಾ ಬ್ಯರಲ್ಲಿ ತಪ್ಪಿಸಿಕೊಂಡವರ ಮೇಲೆಯೂ ದೇಶ ದಲ್ಲಿ ಉಳಿದವರ ಮೇಲೆಯೂ ಸಿಂಹವನ್ನು ಬರಮಾಡುವೆನು.

ಯೆಶಾಯ 16:7

ಆದದರಿಂದ ಮೋವಾಬಿನ ನಿಮಿತ್ತ ಮೋವಾಬೇ ಗೋಳಾಡುವದು, ಪ್ರತಿಯೊ ಬ್ಬನೂ ಗೋಳಾಡುವನು; ಕೀರ್‌ ಹರೆಷೆಥಿನ ಅಸ್ತಿವಾರ ಗಳಿಗೋಸ್ಕರ ನೀವು ದುಃಖಿಸುವಿರಿ; ನಿಜವಾಗಿಯೂ ಅವರು ನೊಂದುಹೋಗಿದ್ದಾರೆ.

ಯೆಶಾಯ 22:4

ಹೀಗಿರಲು ನನ್ನ ಕಡೆ ಯಿಂದ ದೃಷ್ಟಿ ತಿರುಗಿಸಿರಿ. ಬಹುಸಂಕಟದಿಂದ ನಾನು ಅಳುವೆನು. ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವದಕ್ಕೆ ತವಕಗೊಳ್ಳದಿರಿ ಅಂದೆನು.

ಯೆರೆಮಿಯ 4:20

ನಾಶ ನದ ಮೇಲೆ ನಾಶನವು ಕೂಗಲ್ಪಟ್ಟಿದೆ, ದೇಶವೆಲ್ಲಾ ಹಾಳಾಯಿತು; ಫಕ್ಕನೆ ನನ್ನ ಗುಡಾರಗಳೂ ಕ್ಷಣ ಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.

ಯೆರೆಮಿಯ 47:2

ಮೋವಾಬಿನ ಕೀರ್ತಿ ಇನ್ನು ಮೇಲೆ ಇರುವದೇ ಇಲ್ಲ; ಹೆಷ್ಬೋನಿನಲ್ಲಿ ಅದಕ್ಕೆ ವಿರೋಧವಾಗಿ ಕೇಡನ್ನು ಆಲೋಚಿಸಿದ್ದಾರೆ; ಬನ್ನಿ, ಜನಾಂಗವಿಲ್ಲದ ಹಾಗೆ ಅದನ್ನು ಕಡಿದುಬಿಡೋಣ, ಮದ್ಮೆನೇ, ನೀನು ಸಹ ಕಡಿಯಲ್ಪಡುವಿ; ಕತ್ತಿಯು ನಿನ್ನನ್ನು ಹಿಂದಟ್ಟುವದು.

ಯೆರೆಮಿಯ 48:5

ಇಗೋ, ನಾನು ನಿನ್ನ ಸುತ್ತಲಿರುವ ವರೆಲ್ಲರಿಂದ ನಿನ್ನ ಮೇಲೆ ಭಯವನ್ನು ಬರಮಾಡು ವೆನೆಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ. ಆಗ ನಿಮ್ಮಲ್ಲಿ ಒಬ್ಬೊಬ್ಬನು ಮುಂದಕ್ಕೆ ಓಡಿಸಲ್ಪಡುವನು; ಅಲೆದಾಡುವವನನ್ನು ಕೂಡಿಸುವವನೂ ಒಬ್ಬನೂ ಇರುವದಿಲ್ಲ.

ಯೆರೆಮಿಯ 48:34

ಯೆಹೂದದ ಅರಸನಾದ ಚಿದ್ಕೀಯನ ಆಳಿಕೆಯ ಆರಂಭದಲ್ಲಿ ಪ್ರವಾದಿಯಾದ ಯೆರೆವಿಾಯನಿಗೆ ಕರ್ತ ನಿಂದ ಏಲಾಮಿಗೆ ವಿರೋಧವಾಗಿ ಉಂಟಾದ ವಾಕ್ಯವು ಏನಂದರೆ--

Interlinear

Choose Theme