ನಾಶ ನದ ಮೇಲೆ ನಾಶನವು ಕೂಗಲ್ಪಟ್ಟಿದೆ, ದೇಶವೆಲ್ಲಾ ಹಾಳಾಯಿತು; ಫಕ್ಕನೆ ನನ್ನ ಗುಡಾರಗಳೂ ಕ್ಷಣ ಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.
Cross references
ಕರ್ತನು ಮೋಶೆಗೆ--ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳು--ನೀವು ಬಗ್ಗದ ಕುತ್ತಿಗೆಯುಳ್ಳ ಜನರು, ನಾನು ಕ್ಷಣಮಾತ್ರದಲ್ಲಿ ನಿಮ್ಮೊಳಗೆ ಬಂದು ನಿಮ್ಮನ್ನು ನಿರ್ಮೂಲಮಾಡುವೆನು. ಹೀಗಿರುವದರಿಂದ ನಾನು ನಿಮಗೆ ಏನು ಮಾಡಬೇಕೋ ಅದನ್ನು ತಿಳುಕೊಳ್ಳು ವಂತೆ ನಿಮ್ಮ ಆಭರಣಗಳನ್ನು ಈಗ ನಿಮ್ಮಿಂದ ತೆಗೆದು ಬಿಡಿರಿ ಎಂದು ಹೇಳು ಅಂದನು.
ಇಷ್ಟಾದರು ನನ್ನ ಮಾತನ್ನು ಕೇಳದೆಹೋದರೆ ನಾನು ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ಹೆಚ್ಚಾಗಿ ನಿಮ್ಮನ್ನು ಶಿಕ್ಷಿಸುವೆನು.
ನನ್ನ ಮಾತನ್ನು ಕೇಳಲೊಲ್ಲದೆ ನನಗೆ ವಿರೋಧ ವಾಗಿ ನಡೆದರೆ ನಾನು ನಿಮ್ಮ ಪಾಪಗಳಿಗೆ ತಕ್ಕಂತೆ ನಿಮ್ಮನ್ನು ಏಳರಷ್ಟು ಹೆಚ್ಚಾಗಿ ನಿಮ್ಮ ಮೇಲೆ ವ್ಯಾಧಿಗಳನ್ನು ಬರಮಾಡುವೆನು.
ನಾನು ಸಹ ನಿಮಗೆ ವಿರೋಧವಾಗಿ ನಡೆದು ಇನ್ನೂ ಹೆಚ್ಚಾಗಿ ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ನಿಮ್ಮನ್ನು ಶಿಕ್ಷಿಸುವೆನು.
ನಾನು ಕೋಪದಿಂದ ನಿಮಗೆ ವಿರೋಧವಾಗಿ ನಡೆದು ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಶಿಕ್ಷಿಸುವೆನು.
ಈ ಸಭೆಯ ಮಧ್ಯದೊಳಗಿಂದ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ. ನಾನು ಅವರನ್ನು ಕ್ಷಣಮಾತ್ರ ದಲ್ಲಿ ದಹಿಸಿಬಿಡುತ್ತೇನೆ ಅಂದನು.
ನೀವು ಈ ಸಭೆಯ ಮಧ್ಯದಿಂದ ಎದ್ದು ಬನ್ನಿರಿ. ನಾನು ಅವರನ್ನು ಕ್ಷಣಮಾತ್ರದಲ್ಲಿ ದಹಿಸಿಬಿಡುತ್ತೇನೆ ಅಂದನು. ಆಗ ಅವರು ಬೋರಲು ಬಿದ್ದರು.
ನಿನ್ನ ನೀರಿನ ಪ್ರವಾಹದ ಶಬ್ದದಿಂದ ಅಗಾಧವು ಅಗಾಧಕ್ಕೆ ಕೂಗು ತ್ತದೆ; ನಿನ್ನ ಅಲೆಗಳೂ ತೆರೆಗಳೂ ಎಲ್ಲಾ ನನ್ನ ಮೇಲೆ ಹಾದುಹೋಗಿವೆ.
ಆತನ ಮಹಿಮೆಯುಳ್ಳ ಹೆಸರಿಗೆ ಎಂದೆಂದಿಗೂ ಸ್ತೋತ್ರವಾಗಲಿ; ಆತನ ಮಹಿ ಮೆಯು ಭೂಮಿಯನ್ನೆಲ್ಲಾ ತುಂಬಲಿ. ಆಮೆನ್. ಆಮೆನ್.ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಮುಗಿದವೆ.
ನೀವು ಗೋಳಾ ಡಿರಿ, ಕರ್ತನ ದಿನವು ಸವಿಾಪವಾಯಿತು; ಅದು ಸರ್ವಶಕ್ತನಿಂದ ನಾಶನದಂತೆ ಬರುವದು.
ನಮ್ಮ ಹಬ್ಬಗಳು ನಡೆಯುವ ಚೀಯೋನ್ ಪಟ್ಟಣವನ್ನು ದೃಷ್ಟಿಸಿರಿ, ಯೆರೂಸಲೇಮ್ ನೆಮ್ಮದಿಯ ನಿವಾಸವಾಗಿಯೂ ಗೂಟಕೀಳದ, ಹಗ್ಗ ಹರಿಯದ, ಒಂದೇ ಕಡೆ ಇರುವ ಗುಡಾರವಾಗಿಯೂ ಇರುವದನ್ನು ನೀವು ಕಣ್ಣಾರೆ ಕಾಣುವಿರಿ.
ಒಂದೇ ದಿನದೊಳಗೆ ಒಂದು ಕ್ಷಣದಲ್ಲೇ, ಪುತ್ರ ಶೋಕ ಮತ್ತು ವಿಧವಾ ಸ್ಥಿತಿಯು ಇವೆರಡೂ ನಿನಗೆ ಬರುವವು; ನಿನ್ನ ಮಂತ್ರಗಳು ಬಹಳವಾಗಿರುವದ ರಿಂದಲೂ ನಿನ್ನ ಮಾಟಗಳು ಹೆಚ್ಚಾಗಿರುವದರಿಂದಲೂ ಅವು ಸಂಪೂರ್ಣವಾಗಿ ನಿನ್ನ ಮೇಲೆ ಬರುವವು.
ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು ನಿನ್ನ ನಿವಾಸದ ಪರದೆಗಳು ಹರಡಲಿ; ಹಿಂತೆ ಗೆಯಬೇಡ; ನಿನ್ನ ಹಗ್ಗಗಳನ್ನು ಉದ್ದ ಮಾಡಿ ಗೂಟ ಗಳನ್ನು ಬಲಪಡಿಸು.
ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ; ಹಿಂದಕ್ಕೆ ಹೋಗಿರಿ, ನಿಲ್ಲಬೇಡಿರಿ; ನಾನು ಉತ್ತರದಿಂದ ಕೇಡನ್ನೂ ದೊಡ್ಡ ನಾಶನವನ್ನೂ ತರುತ್ತೇನೆ.
ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ಒಂದೇ ಸಾರಿ ದೇಶದ ನಿವಾಸಿಗಳನ್ನು ಕವಣಿಯಿಂದ ಎಸೆದು ಬಿಡುತ್ತೇನೆ; ಅವರಿಗೆ ತಗಲುವ ಹಾಗೆ ಅವರನ್ನು ಸಂಕಟಪಡಿಸುತ್ತೇನೆ.
ಆದರೆ ನಾನು ವಧೆಗೆ ತಕ್ಕೊಂಡು ಹೋಗುವ ಕುರಿಯಹಾಗೆ ಇಲ್ಲವೆ ಎತ್ತಿನ ಹಾಗೆ ಇದ್ದೆನು; ನನಗೆ ವಿರೋಧವಾಗಿ ಕಲ್ಪನೆಗಳನ್ನು ಕಲ್ಪಿಸು ತ್ತಾರೆಂದೂ ಮರವನ್ನೂ ಅದರ ಫಲವನ್ನೂ ಕೆಡಿಸಿ ಅವನ ಹೆಸರು ಇನ್ನು ಜ್ಞಾಪಕಮಾಡಲ್ಪಡದ ಹಾಗೆ ಜೀವಿತರ ದೇಶದೊಳಗಿಂದ ಅವನನ್ನು ಕಡಿದು ಬಿಡೋಣ ಎಂದು ಅಂದುಕೊಳ್ಳುತ್ತಾರೆಂದೂ ನನಗೆ ತಿಳಿಯಲಿಲ್ಲ.
ಆದರೆ ನೀತಿಯಿಂದ ನ್ಯಾಯತೀರಿಸು ವಂಥ ಅಂತರಿಂದ್ರಿಯಗಳನ್ನೂ ಹೃದಯವನ್ನೂ ಶೋಧಿಸುವಂಥ ಸೈನ್ಯಗಳ ಕರ್ತನೇ, ನೀನು ಅವರಿಗೆ ಕೊಡುವ ಪ್ರತಿದಂಡನೆಯನ್ನು ನಾನು ಕಾಣುವೆನು. ನಿನಗೆ ನನ್ನ ವ್ಯಾಜ್ಯವನ್ನು ಪ್ರಕಟಮಾಡಿದ್ದೇನೆ.
ಆಗ ಅವರು--ಬನ್ನಿರಿ, ಯೆರೆವಿಾಯನಿಗೆ ವಿರೋಧವಾಗಿ ಯುಕ್ತಿಯನ್ನು ಕಲ್ಪಿಸೋಣ; ಯಾಜಕ ನಿಂದ ನ್ಯಾಯಪ್ರಮಾಣವೂ ಜ್ಞಾನಿಯಿಂದ ಆಲೋಚ ನೆಯೂ ಪ್ರವಾದಿಯಿಂದ ವಾಕ್ಯವೂ ತಪ್ಪುವುದಿಲ್ಲ ಬನ್ನಿರಿ, ನಾಲಿಗೆಯಿಂದ ಅವನನ್ನು ಹೊಡೆಯೋಣ, ಅವನ ಮಾತುಗಳಲ್ಲಿ ಒಂದನ್ನಾದರೂ ಲಕ್ಷಿಸದೆ ಇರೋಣ ಎಂದು ಅವರು ಹೇಳಿದರು.
ಆತನು ತನ್ನ ಗುಡಾರವನ್ನು ತೋಟದಂತೆ ಬಲಾತ್ಕಾರವಾಗಿ ತೆಗೆದುಹಾಕಿದ್ದಾನೆ. ಆತನು ತನ್ನ ಸಭಾಸ್ಥಾನಗಳನ್ನು ನಾಶಮಾಡಿದ್ದಾನೆ; ಕರ್ತನು ಚೀಯೋನಿನಲ್ಲಿ ಪವಿತ್ರ ಹಬ್ಬಗಳನ್ನೂ ಸಬ್ಬತ್ತನ್ನೂ ಮರೆತುಬಿಡುವಂತೆ ಮಾಡಿದ್ದಾನೆ, ತನ್ನ ಕೋಪದ ಉರಿಯಲ್ಲಿ ಅರಸನನ್ನೂ ಯಾಜಕನನ್ನೂ ತುಚ್ಛೀಕರಿ ಸಿದ್ದಾನೆ.
ಭಯವೂ ಬೋನೂ ನಾಶನವೂ ಸಂಹಾರವೂ ನಮ್ಮ ಮೇಲೆ ಬಂದಿವೆ.
ನಾಶವು ಬರುತ್ತದೆ ಮತ್ತು ಅವರು ಸಮಾಧಾನವನ್ನು ಹುಡುಕುತ್ತಾರೆ; ಆದರೆ ಅದು ಇರುವದಿಲ್ಲ.
ದೇವರಾದ ಕರ್ತನು ಹೀಗೆ ಹೇಳುತ್ತಾನೆ; ನಾನು ಕತ್ತಿ ಬರಗಾಲ ದುಷ್ಟಮೃಗ ವ್ಯಾಧಿಗಳೆಂಬ ನನ್ನ ನಾಲ್ಕು ಕಠಿಣವಾದ ನ್ಯಾಯತೀರ್ಪುಗಳನ್ನು ಯೆರೂಸ ಲೇಮಿನ ಮೇಲೆ ಕಳುಹಿಸಿ ಮನುಷ್ಯರನ್ನೂ ಮೃಗಗಳನ್ನೂ ಕಡಿದು ಬಿಟ್ಟ ಮೇಲೆ ಮತ್ತೆ ಏನಾಗುವದು?
ಆ ದಿನಕ್ಕಾಗಿ ಅಯ್ಯೋ, ಯಾಕಂದರೆ ಕರ್ತನ ದಿನವು ಸವಿಾಪವಾಗಿದೆ; ಸರ್ವಶಕ್ತನ ಕಡೆಯಿಂದ ನಾಶದಂತೆ ಬರುತ್ತದೆ.
ಕೂಷಾನಿನ ಡೇರೆಗಳನ್ನು ಕಷ್ಟದೊಳಗೆ ನೋಡಿ ದೆನು; ಮಿದ್ಯಾನಿನ ದೇಶದ ತೆರೆಗಳು ನಡುಗಿದವು.
ಶರೀರವನ್ನು ಕೊಲ್ಲುವವರಿಗೆ ಹೆದರಬೇಡಿರಿ; ಯಾಕಂದರೆ ಅವರು ಆತ್ಮವನ್ನು ಕೊಲ್ಲಲು ಶಕ್ತರಲ್ಲ; ಆದರೆ ಆತ್ಮ ಮತ್ತು ಶರೀರ ಎರಡನ್ನೂ ನರಕದಲ್ಲಿ ನಾಶಮಾಡಲು ಶಕ್ತನಾಗಿರು ವಾತನಿಗೇ ಭಯಪಡಿರಿ.
ಅಂಥವರು ಕರ್ತನ ಸಾನಿಧ್ಯದಿಂದಲೂ ಬಲವುಳ್ಳ ಆತನ ಮಹಿಮೆಯಿಂದಲೂ ನಿತ್ಯ ನಾಶನವೆಂಬ ಶಿಕ್ಷೆ ಯನ್ನು ಹೊಂದುವರು.