ಆದದರಿಂದ ನೀನು ಹೋಗಿ ನನ್ನ ಬಾಯಿಂದ ಕೇಳಿ ನೀನು ಬರೆದ ಸುರಳಿಯಲ್ಲಿ ಕರ್ತನ ಆಲಯದೊಳಗೆ ಉಪವಾಸದ ದಿವಸದಲ್ಲಿ ಕರ್ತನ ವಾಕ್ಯಗಳನ್ನು ಜನರಿಗೆ ಕೇಳುವಂತೆ ಓದಿ ಹೇಳು ಮತ್ತು ತಮ್ಮ ಪಟ್ಟಣಗಳಿಂದ ಬರುವ ಯೆಹೂದದವರೆಲ್ಲರೂ ಕೇಳುವಂತೆಯೂ ಅವುಗಳನ್ನು ಓದಿ ಹೇಳಬೇಕು.
Cross references
ಆ ಹುಡುಗರು ಬೆಳೆದಾಗ ಏಸಾವನು ಬೇಟೆ ಯಾಡುವದರಲ್ಲಿ ಜಾಣನಾಗಿದ್ದು ಅಡವಿಯ ಮನುಷ್ಯ ನಾದನು; ಯಾಕೋಬನು ಗುಡಾರಗಳಲ್ಲಿ ವಾಸ ಮಾಡುವ ಸಾಧುಮನುಷ್ಯನಾಗಿದ್ದನು.
ಅವರು ಕೂಡಿ ಇರುವದಕ್ಕೆ ಆಗದಷ್ಟು ಅವರ ಸಂಪತ್ತು ಅಭಿವೃದ್ಧಿ ಯಾಗಿತ್ತು. ಅವರ ಹಿಂಡುಗಳಿಗೋಸ್ಕರ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು.
ನಿನ್ನ ಕರ್ತನಾದ ದೇವರು ನಿನಗೆ ಕೊಡುವ ದೇಶದಲ್ಲಿ ನಿನ್ನ ದಿವಸಗಳು ಹೆಚ್ಚಾಗುವಂತೆ ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸು.
ನೀನೂ ನಿನ್ನ ಮಕ್ಕಳೂ ದ್ರಾಕ್ಷಾರಸವನ್ನಾ ಗಲಿ ಮದ್ಯಪಾನವನ್ನಾಗಲಿ ಕುಡಿದು ಸಭೆಯ ಗುಡಾರ ದೊಳಗೆ ಬರಬಾರದು; ಹಾಗೆ ಬಂದರೆ ಸತ್ತೀರಿ. ನಿಮ್ಮ ವಂಶಾವಳಿಯು ಇರುವ ವರೆಗೂ ಇದು ಶಾಶ್ವತವಾಗಿ ರುವ ಕಟ್ಟಳೆಯಾಗಿದೆ.
ಏಳು ದಿವಸಗಳ ವರೆಗೆ ನೀವು ಗುಡಾರಗಳಲ್ಲಿ ವಾಸಿಸಬೇಕು; ಇಸ್ರಾಯೇಲ್ಯ ರಾಗಿ ಹುಟ್ಟಿದವರೆಲ್ಲರೂ ಗುಡಾರಗಳಲ್ಲಿ ವಾಸಿಸ ಬೇಕು.
ನೀನು ಇಸ್ರಾ ಯೇಲ್ ಮಕ್ಕಳ ಸಂಗಡ ಮಾತನಾಡಿ ಹೇಳಬೇಕಾದ ದ್ದೇನಂದರೆ--ಪುರುಷನಾದರೂ ಸ್ತ್ರೀಯಾದರೂ ಕರ್ತ ನಿಗೆ ಪ್ರತ್ಯೇಕಿಸಿಕೊಳ್ಳುವ ಹಾಗೆ ನಾಜೀರನ ವಿಶೇಷ ವಾದ ಪ್ರಮಾಣವನ್ನು ಮಾಡಿ
ಅವನು ನನಗೆಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವಿ, ಈಗ ನೀನು ದ್ರಾಕ್ಷಾರಸವನ್ನೂ ಮದ್ಯಪಾನ ವನ್ನೂ ಕುಡಿಯದೆ ಅಶುಚಿಯಾದ ಒಂದನ್ನಾದರೂ ತಿನ್ನದೆ ಇರು. ಯಾಕಂದರೆ ಆ ಹುಡುಗನು ಗರ್ಭದಿಂದ ತನ್ನ ಮರಣದ ಪರಿಯಂತರವೂ ದೇವರ ನಾಜೀರ ನಾಗಿರುವನು ಎಂದು ಹೇಳಿದನು ಅಂದಳು.
ದ್ರಾಕ್ಷೇ ಗಿಡದಲ್ಲಿ ಹುಟ್ಟುವ ಒಂದನ್ನೂ ತಿನ್ನದೆ ದ್ರಾಕ್ಷಾರಸವನ್ನೂ ಮದ್ಯಪಾನವನ್ನೂ ಕುಡಿಯದೆ ಅಶು ಚಿಯಾದ ಒಂದನ್ನೂ ತಿನ್ನದೆ ಇದ್ದು ನಾನು ಅವಳಿಗೆ ಆಜ್ಞಾಪಿಸಿದ್ದೆಲ್ಲಾ ಕೈಕೊಳ್ಳಲಿ ಅಂದನು.
ಯೇಹುವು ಅಲ್ಲಿಂದ ಹೋಗಿ ತನ್ನನ್ನು ಎದುರು ಗೊಳ್ಳಲು ರೇಕಾಬನ ಮಗನಾದ ಯೆಹೋನಾದಾ ಬನನ್ನು ಕಂಡು ಅವನನ್ನು ವಂದಿಸಿ ಅವನಿಗೆ--ನನ್ನ ಹೃದಯವು ನಿನ್ನ ಹೃದಯದೊಂದಿಗೆ ಇರುವಂತೆ ನಿನ್ನ ಹೃದಯವು ನನ್ನೊಂದಿಗೆ ಸರಿಯಾಗಿದೆಯೋ ಅಂದನು. ಯೆಹೋನಾದಾಬನು--ಅದೆ ಅಂದನು. ಹಾಗಾದರೆ ನಿನ್ನ ಕೈಕೊಡು ಅಂದನು. ಇವನು ತನ್ನ ಕೈಕೊಟ್ಟನು. ತನ್ನ ಬಳಿಗೆ ರಥದ ಮೇಲೆ ಏರಿಸಿಕೊಂಡು ಅವ ನಿಗೆ--
ಆಗ ಯೇಹುವೂ ರೆಕಾಬನ ಮಗನಾದ ಯೆಹೋನಾದಾಬನೂ ಬಾಳನ ಮನೆಯಲ್ಲಿ ಪ್ರವೇಶಿಸಿ ದರು. ಅವರು ಬಾಳನನ್ನು ಆರಾಧಿಸುವವರ ಹೊರತು ಅವರ ಸಂಗಡ ಕರ್ತನ ಸೇವಕರಲ್ಲಿ ಒಬ್ಬನಾದರೂ ಇರದ ಹಾಗೆ ಶೋಧಿಸಿ ನೋಡಿರಿ ಎಂದು ಬಾಳನನ್ನು ಆರಾಧಿಸುವವರಿಗೆ ಹೇಳಿದರು.
ಯಾಬೇಚಿನಲ್ಲಿ ವಾಸವಾಗಿದ್ದ ಸಂತತಿಗಳು ಯಾರಂದರೆ, ತಿರ್ರಾತ್ಯರು, ಶಿಮ್ಗಾತ್ಯರು, ಸೂಕಾತ್ಯರು; ಇವರೇ ರೇಕಾಬನ ಮನೆಗೆ ತಂದೆಯಾದ ಹಮತನಿಂದ ಹುಟ್ಟಿದ ಕೇನ್ಯರು.
ಆಗ ನೀವು ಸ್ವಲ್ಪ ಮಂದಿಯಾಗಿಯೂ ಪರದೇಶಸ್ಥರಾಗಿಯೂ ಅದರಲ್ಲಿ ಇದ್ದಿರಿ.
ಆಗ ಅವರು ಏಳನೇ ತಿಂಗಳ ಹಬ್ಬದಲ್ಲಿ ಇಸ್ರಾಯೇಲಿನ ಮಕ್ಕಳು ಗುಡಾರಗಳಲ್ಲಿ ವಾಸವಾಗಿರಬೇಕೆಂದು ಕರ್ತ ನು ಮೋಶೆಯ ಮುಖಾಂತರ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದದ್ದನ್ನು ಕಂಡರು.
ಆಗ ಅವರು ಲೆಕ್ಕಕ್ಕೆ ಸ್ವಲ್ಪವಾಗಿಯೂ ಹೌದು, ಬಹಳ ಸ್ವಲ್ಪ ಮಂದಿಯಾಗಿಯೂ ಪರದೇಶಸ್ಥರಾ ಗಿಯೂ ಅದರಲ್ಲಿ ಇದ್ದರು.
ಆಗ ಬಾರೂಕನು ಪುಸ್ತಕದಿಂದ ಯೆರೆ ವಿಾಯನ ವಾಕ್ಯಗಳನ್ನು ಕರ್ತನ ಆಲಯದಲ್ಲಿ ಲೇಖಕ ನಾದ ಶಾಫಾನನ ಮಗನಾಗಿರುವ ಗೆಮರ್ಯನ ಕೊಠಡಿ ಯಲ್ಲಿ, ಮೇಲಿನ ಅಂಗಳದಲ್ಲಿ, ಕರ್ತನ ಆಲಯದ ಹೊಸ ಬಾಗಿಲಿನ ಪ್ರವೇಶದಲ್ಲಿ ಎಲ್ಲಾ ಜನರ ಕಿವಿಗಳಲ್ಲಿ ಓದಿ ಹೇಳಿದನು.
ಯಾಕಂದರೆ ಅವನು ಕರ್ತನ ದೃಷ್ಟಿಯಲ್ಲಿ ದೊಡ್ಡವ ನಾಗಿದ್ದು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿ ಯುವದೇ ಇಲ್ಲ; ಅವನು ತಾಯಿಯ ಗರ್ಭದಿಂದಲೇ ಪರಿಶುದ್ಧಾತ್ಮಭರಿತನಾಗಿರುವನು.
ಈಗಿನ ಕಷ್ಟದ ನಿಮಿತ್ತ ಹಾಗೆಯೇ ಇರುವದು ಒಳ್ಳೇದು; ಒಬ್ಬ ಮನುಷ್ಯನು ಇದ್ದ ಹಾಗೆಯೇ ಇರುವದು ಉತ್ತಮವೆಂದು ನಾನು ಭಾವಿಸುತ್ತೇನೆ.
ನಿನ್ನ ತಂದೆಯನ್ನೂ ತಾಯಿಯನ್ನೂ ಸನ್ಮಾನಿಸಬೇಕು, ಇದು ವಾಗ್ದಾನಸಹಿತವಾದ ಮೊದಲನೇ ಆಜ್ಞೆಯಾಗಿದೆ.
ನಂಬಿಕೆಯಿಂದಲೇ ಅವನು ವಾಗ್ದತ್ತ ದೇಶದಲ್ಲಿ ಅನ್ಯದೇಶದಲ್ಲಿ ಇದ್ದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿದ್ದನು. ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರೊಂದಿಗೆ ಗುಡಾರಗಳಲ್ಲಿ ವಾಸಿಸಿದನು.
ಅತಿ ಪ್ರಿಯರೇ, ಪರದೇಶಸ್ಥರೂ ಪ್ರವಾಸಿಗಳೂ ಆಗಿರುವ ನೀವು ನಿಮ್ಮ ಆತ್ಮಕ್ಕೆ ವಿರೋಧವಾಗಿ ಯುದ್ಧಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿ ರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.