Home Bibles ☰ Books ಯೆರೆಮಿಯ 10:8 · ಕನ್ನಡ ಬೈಬಲ್
ಯೆರೆಮಿಯ 10:8 · ಕನ್ನಡ ಬೈಬಲ್

ಆದರೆ ಅವರು ಕೇಳಲಿಲ್ಲ, ಕಿವಿಗೊಡಲಿಲ್ಲ; ತಮ್ಮ ಕೆಟ್ಟ ಹೃದಯದ ಕಲ್ಪನೆಯಂತೆ ನಡಕೊಂಡರು; ಆದದರಿಂದ ಅವರು ಮಾಡಬೇಕೆಂದು ನಾನು ಆಜ್ಞಾಪಿಸಿದಂಥ, ಅವರು ಮಾಡುವಂಥ, ಈ ಒಡಂಬಡಿಕೆಯ ಮಾತು ಗಳನ್ನೆಲ್ಲಾ ಅವರ ಮೇಲೆ ಬರಮಾಡುವೆನು.

Cross references

ಕೀರ್ತನೆಗಳು 115:8

ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವ ರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.

ಕೀರ್ತನೆಗಳು 135:18

ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸ ವಿಡುವವರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.

ಯೆಶಾಯ 41:29

ಇಗೋ, ಅವರೆಲ್ಲಾ ವ್ಯರ್ಥವೇ, ಅವರ ಕಾರ್ಯಗಳು ಶೂನ್ಯವೇ. ಅವರ ಕೆತ್ತಿದ ವಿಗ್ರಹಗಳು ಗಾಳಿ ಮತ್ತು ಗಲಿಬಿಲಿಯೇ.

ಯೆಶಾಯ 44:19

ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು; ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ ಮಾಂಸವನ್ನು ಸುಟ್ಟು ತಿಂದೆ ನಲ್ಲಾ; ಮಿಕ್ಕಿದ್ದರಲ್ಲಿ ಅಸಹ್ಯವಾದದ್ದನ್ನು ಮಾಡಲೋ, ಮರದ ತುಂಡಿಗೆ ಅಡ್ಡಬೀಳಬಹುದೋ ಅಂದುಕೊಳ್ಳು ವಷ್ಟು ಜ್ಞಾನವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿಗೆತಾರರು.

ಯೆರೆಮಿಯ 2:27

ಅವರು ಮರಕ್ಕೆ ನೀನು ನನ್ನ ತಂದೆ ಎಂದೂ ಕಲ್ಲಿಗೆ--ನೀನು ನನ್ನನ್ನು ಹೆತ್ತಿದ್ದೀ ಎಂದೂ ಹೇಳುತ್ತಾರಲ್ಲಾ? ಯಾಕಂದರೆ ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ; ಆದರೂ ಅವರ ಕಷ್ಟ ಕಾಲದಲ್ಲಿ--ಎದ್ದು, ನಮ್ಮನ್ನು ರಕ್ಷಿಸು ಎಂದು ಹೇಳುವರು.

ಯೆರೆಮಿಯ 4:22

ನನ್ನ ಜನರು ಮೂಢರಾಗಿದ್ದಾರೆ, ನನ್ನನ್ನು ಅವರು ಅರಿಯರು; ಕುಡಿಕರಾದ ಮಕ್ಕಳಾಗಿದ್ದಾರೆ, ಗ್ರಹಿಕೆ ಯುಳ್ಳವರಲ್ಲ; ಕೆಟ್ಟದ್ದನ್ನು ಮಾಡುವದಕ್ಕೆ ಜಾಣರಾಗಿ ದ್ದಾರೆ, ಒಳ್ಳೇದನ್ನು ಮಾಡುವದನ್ನು ಅರಿಯರು.

ಯೆರೆಮಿಯ 10:14

ಆದದರಿಂದ ನೀನು ಈ ಜನರಿಗೋಸ್ಕರ ಪ್ರಾರ್ಥನೆ ಮಾಡಬೇಡ; ಅವರಿಗೋಸ್ಕರ ಮೊರೆ ಯನ್ನೂ ಪ್ರಾರ್ಥನೆಯನ್ನೂ ಎತ್ತಬೇಡ; ಅವರು ತಮ್ಮ ಕೇಡಿನ ನಿಮಿತ್ತ ನನ್ನನ್ನು ಕೂಗುವ ಸಮಯದಲ್ಲಿ ನಾನು ಕೇಳೆನು.

ಯೆರೆಮಿಯ 51:17

ಇದಲ್ಲದೆ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸ್ತಂಭಗಳನ್ನೂ ಗದ್ದಿಗೆಗಳನ್ನೂ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸಮುದ್ರವನ್ನೂ ಕಸ್ದೀಯರು ಒಡೆದು ಅವುಗಳ ಹಿತ್ತಾಳೆಯನ್ನೆಲ್ಲಾ ಬಾಬೆಲಿಗೆ ತಕ್ಕೊಂಡು ಹೋದರು.

ಹೊಶೇಯ 4:12

ನನ್ನ ಜನರು ಮರದ ತುಂಡುಗಳಿಗೆ ಆಲೋಚನೆ ಕೇಳುತ್ತಾರೆ; ಅವರ ಕೋಲು ಅವರಿಗೆ ತಿಳಿಸುತ್ತದೆ. ವ್ಯಭಿಚಾರದ ಆತ್ಮಗಳು ಅವರನ್ನು ತಪ್ಪಿಸಿಬಿಟ್ಟಿದೆ; ಅವರು ತಮ್ಮ ದೇವರ ಕೈಕೆಳಗಿರದೆ ವ್ಯಭಿಚಾರ ಮಾಡಿದ್ದಾರೆ.

ಹಬಕ್ಕೂಕ 2:18

ಅದನ್ನು ಕೆತ್ತಿ ರೂಪಿಸಿದವನ ಕೆತ್ತಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ, ಅದನ್ನು ರೂಪಿಸಿದವನು ಮೂಕ ಬೊಂಬೆಗಳನ್ನು ಮಾಡಿ ಅದರಲ್ಲಿ ನಂಬಿಕೆಯಿಡು ವಂಥ, ಎರಕದ ವಿಗ್ರಹದಿಂದ ಪ್ರಯೋಜನವೇನು?

ಜೆಕರ್ಯ 10:2

ವಿಗ್ರಹಗಳು ವ್ಯರ್ಥವಾಗಿ ಮಾತ ನಾಡಿವೆ; ಶಕುನಗಾರರು ಸುಳ್ಳನ್ನು ನೋಡಿದ್ದಾರೆ; ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ; ವ್ಯರ್ಥವಾಗಿ ಆದರಿಸುತ್ತಾರೆ; ಆದದರಿಂದ ಮಂದೆಯ ಹಾಗೆ ತಮ್ಮ ದಾರಿಯಲ್ಲಿ ಹೋಗಿದ್ದಾರೆ; ಕುರುಬನಿಲ್ಲದ ಕಾರಣ ಕಳವಳಗೊಂಡಿದ್ದಾರೆ.

ರೋಮಾಪುರದವರಿಗೆ 1:21

ಅವರು ದೇವರನ್ನು ಅರಿತಾಗ ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ, ಕೃತಜ್ಞತೆಯುಳ್ಳವರಾಗಿಯೂ ಇರಲಿಲ್ಲ; ಅವರು ತಮ್ಮ ಕಲ್ಪನೆಗಳಲ್ಲಿ ವಿಫಲರಾದರು ಮತ್ತು ಮೂರ್ಖತನದ ಅವರ ಹೃದಯವು ಕತ್ತಲಾ ಯಿತು.

Interlinear

Choose Theme