ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು; ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ ಮಾಂಸವನ್ನು ಸುಟ್ಟು ತಿಂದೆ ನಲ್ಲಾ; ಮಿಕ್ಕಿದ್ದರಲ್ಲಿ ಅಸಹ್ಯವಾದದ್ದನ್ನು ಮಾಡಲೋ, ಮರದ ತುಂಡಿಗೆ ಅಡ್ಡಬೀಳಬಹುದೋ ಅಂದುಕೊಳ್ಳು ವಷ್ಟು ಜ್ಞಾನವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿಗೆತಾರರು.
Cross references
ಫರೋಹನು ತಿರುಗಿ ಕೊಂಡು ತನ್ನ ಮನೆಗೆ ಹೋದನು. ಅವನು ಇದಕ್ಕಾ ದರೂ ತನ್ನ ಮನಸ್ಸುಕೊಡಲಿಲ್ಲ.
ಕರ್ತನಿಗೆ ಅಸಹ್ಯ ವಾಗಿರುವ ವಿಗ್ರಹವನ್ನಾಗಲಿ ಎರಕ ಹೊಯಿದದ್ದ ನ್ನಾಗಲಿ ಮಾಡಿಕೊಂಡು ಶಿಲ್ಪಿಯ ಕೈಯಿಂದ ಮಾಡಿಸಿಗುಪ್ತವಾಗಿ ನಿಲ್ಲಿಸುವವನಿಗೆ ಶಾಪ. ಜನವೆಲ್ಲಾ ಉತ್ತರ ಕೊಟ್ಟು ಆಮೆನ್ ಎಂದು ಹೇಳಲಿ.
ನಾನು ಈ ಹೊತ್ತು ನಿಮಗೆ ಸಾಕ್ಷಿಯಾಗಿ ಹೇಳುವ ಮಾತುಗಳನ್ನೆಲ್ಲಾ ನಿಮ್ಮ ಹೃದಯಗಳಲ್ಲಿ ಇಡಿರಿ; ಈ ನ್ಯಾಯಪ್ರಮಾಣದ ಮಾತುಗಳನ್ನೆಲ್ಲಾ ಕೈಕೊಳ್ಳುವದಕ್ಕೆ ನಿಮ್ಮ ಮಕ್ಕಳಿಗೆ ಆಜ್ಞಾಪಿಸಬೇಕು.
ಸೊಲೊಮೋನನು ಚೀದೋನ್ಯರ ದೇವತೆಯಾದ ಅಷ್ಟೋರೆತನ್ನೂ ಅಮ್ಮೋ ನ್ಯರ ಅಸಹ್ಯಕರವಾದ ಮಿಲ್ಕೋಮನ್ನೂ ಹಿಂಬಾ ಲಿಸಿದನು.
ಆಗ ಸೊಲೊಮೋನನು ಮೋವಾಬಿನ ಅಸಹ್ಯಕರವಾದ ಕೆಮೋಷ್‌ಗೋಸ್ಕ ರವೂ ಅಮ್ಮೋನನ ಮಕ್ಕಳ ಅಸಹ್ಯಕರವಾದ ಮೋಲೆ ಕ್‌ನಿಗೋಸ್ಕರವೂ ಯೆರೂಸಲೇಮಿಗೆ ಎದುರಾಗಿರುವ ಬೆಟ್ಟದಲ್ಲಿ ಎತ್ತರವಾದ ಸ್ಥಳವನ್ನು ಕಟ್ಟಿಸಿದನು.
ಇದಲ್ಲದೆ ಯೆರೂಸಲೇಮಿನ ಮುಂದೆ ಮೋಸದ ಬೆಟ್ಟದ ಬಲ ಪಾರ್ಶ್ವದಲ್ಲಿದ್ದ ಚೀದೋನ್ಯರ ಅಸಹ್ಯಕರವಾದ ಅಷ್ಟೋ ರೆತಿಗೂ ಮೋವಾಬ್ಯರ ಅಸಹ್ಯಕರವಾದ ಕೆಮೋಷ ನಿಗೂ ಅಮ್ಮೋನಿನ ಮಕ್ಕಳ ಅಸಹ್ಯಕರವಾದ ಮಿಲ್ಕೋ ಮ್‌ನಿಗೂ ಇಸ್ರಾಯೇಲಿನ ಅರಸನಾದ ಸೊಲೊ ಮೋನನು ಕಟ್ಟಿಸಿದ ಉನ್ನತ ಸ್ಥಳಗಳನ್ನೂ ಅರಸನು ಹೊಲೆಮಾಡಿ
ಆದಕಾರಣ ನನ್ನ ಪ್ರಜೆಯು ಜ್ಞಾನಹೀನರಾದದರಿಂದ ಅವರು ಸೆರೆಗೆ ಹೋದರು; ಅವರ ಘನವಂತರು ಹಸಿಯು ವರು, ಹಾಗೆ ಜನಸಮೂಹವು ಬಾಯಾರಿಕೆಯಿಂದ ಒಣಗುವದು.
ಜನಾಂಗಗಳಲ್ಲಿ ತಪ್ಪಿಸಿಕೊಂಡವರಾದ ನೀವು ಒಟ್ಟಾಗಿ ಕೂಡಿಕೊಂಡು ಸವಿಾಪಕ್ಕೆ ಬನ್ನಿರಿ. ಮರದಿಂದ ಕೆತ್ತಿದ ತಮ್ಮ ವಿಗ್ರಹವನ್ನು ಹೊತ್ತು ಕೊಂಡು, ರಕ್ಷಿಸಲಾರದ ಆ ದೇವರಿಗೆ ಬಿನ್ನಹಿಸುವವರು ಏನೂ ತಿಳಿಯದವರಾಗಿದ್ದಾರೆ.
ದ್ರೋಹಿಗಳೇ, ಇದನ್ನು ಜ್ಞಾಪಕದಲ್ಲಿಟ್ಟುಕೊಂಡು, ನಿಮ್ಮನ್ನು ಮನುಷ್ಯರೆಂದು ತೋರಿಸಿರಿ, ಅದನ್ನು ತಿರುಗಿ ನಿಮ್ಮ ಮನಸ್ಸಿಗೆ ತಂದುಕೊಳ್ಳಿರಿ;
ಆ ಮನುಷ್ಯನು ನನಗೆ--ಮನುಷ್ಯ ಪುತ್ರನೇ, ನಿನ್ನ ಕಣ್ಣುಗಳಿಂದ ನೋಡಿ ನಿನ್ನ ಕಿವಿಗಳಿಂದ ಕೇಳು ನಾನು ನಿನಗೆ ತೋರಿಸುವ ಎಲ್ಲಾ ಸಂಗತಿಗಳಿಗೆ ನಿನ್ನ ಮನಸ್ಸಿಡು, ನಾನು ನಿನಗೆ ತೋರಿಸುವ ಹಾಗೆಯೇ ನೀನು ಇಲ್ಲಿಗೆ ತರಲ್ಪಟ್ಟಿರುವೆ. ನೀನು ನೋಡುವವು ಗಳನ್ನೆಲ್ಲಾ ಇಸ್ರಾಯೇಲ್ಯರ ಮನೆತನದವರಿಗೆ ತಿಳಿಸು ಅಂದನು.
ನಾನು ಅವರ ಕೆಟ್ಟತನವನ್ನೆಲ್ಲಾ ಜ್ಞಾಪಕಮಾಡು ತ್ತೇನೆಂದು ಅವರು ತಮ್ಮ ಹೃದಯಗಳಲ್ಲಿ ನೆನಸಿಕೊಳ್ಳು ವದಿಲ್ಲ; ಈಗ ಅವರ ಸ್ವಂತ ಕೃತ್ಯಗಳು ಅವರನ್ನು ಸುತ್ತಿಕೊಂಡಿವೆ; ಅವು ನನ್ನ ಮುಖದ ಮುಂದೆ ಇವೆ.
ಆದದರಿಂದ ಈಗ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ಮಾರ್ಗಗಳನ್ನು ಯೋಚಿಸಿಕೊಳ್ಳಿರಿ.