ಸಹೋದರರೇ, ನಿಮ್ಮಲ್ಲಿ ಯಾವನಾದರೂ ಸತ್ಯ ದಿಂದ ತಪ್ಪಿಹೋಗಿರಲಾಗಿ ಮತ್ತೊಬ್ಬನು ಅವನನ್ನು ಯಥಾಸ್ಥಾನಕ್ಕೆ ತಂದರೆಅವನು ಪಾಪಮಾಡಿದವ ನನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದ್ದಲ್ಲದೆ ಅವನ ಆತ್ಮವನ್ನು ಮರಣಕ್ಕೆ ತಪ್ಪಿಸಿ ಬಹುಪಾಪಗಳನ್ನು ಮುಚ್ಚಿದವನಾದನೆಂದು ತಿಳುಕೊಳ್ಳಲಿ.
Cross references
ನಿನ್ನ ಆಜ್ಞೆಗಳಿಂದ ತಪ್ಪಿಹೋಗುವ ಶಾಪಗ್ರಸ್ಥರಾದ ಅಹಂಕಾರಿಗಳನ್ನು ನೀನು ಗದರಿಸಿದ್ದೀ.
ನಿನ್ನ ನಿಯಮಗಳಿಂದ ತಪ್ಪಿದವರೆಲ್ಲರನ್ನು ನೀನು ತುಳಿದುಬಿಟ್ಟಿದ್ದೀ; ಅವರಲ್ಲಿ ಮೋಸವೂ ಸುಳ್ಳೂ ಇತ್ತು.
ನನ್ನ ಮಗನೇ, ತಿಳುವಳಿಕೆಯ ಮಾತುಗಳಿಂದ ದಾರಿ ತಪ್ಪಿಸುವ ಬೋಧನೆಯನ್ನು ಕೇಳದಿರು.
ನನ್ನ ಪ್ರಜೆಗಳನ್ನೋ ಹುಡುಗರು ಅವರನ್ನು ಭಾಧಿಸುವರು, ಅವರನ್ನು ಆಳುವವರು ಹೆಂಗಸರು. ಓ ನನ್ನ ಪ್ರಜೆಗಳೇ, ನಿಮ್ಮನ್ನು ನಡಿಸು ವವರು ದಾರಿತಪ್ಪಿಸುವವರಾಗಿದ್ದಾರೆ. ನೀವು ನಡೆ ಯುವ ದಾರಿಯನ್ನು ಹಾಳುಮಾಡಿದ್ದಾರೆ.
ಕ್ಷೀಣವಾದದ್ದನ್ನು ನೀವು ಬಲಪಡಿಸುವ ದಿಲ್ಲ, ಖಾಯಿಲೆಯಾದದ್ದನ್ನು ವಾಸಿ ಮಾಡಿಸುವದಿಲ್ಲ, ಮುರಿದದ್ದನ್ನು ಕಟ್ಟುವದಿಲ್ಲ; ಕಳೆದು ಹೋದದ್ದನ್ನು ಹುಡುಕುವದಿಲ್ಲ, ಓಡಿಸಿದ್ದನ್ನು ನೀವು ಹಿಂದಕ್ಕೆ ತರು ವದಿಲ್ಲ. ಆದರೆ ಬಲಾತ್ಕಾರದಿಂದ ಮತ್ತು ಕ್ರೂರತನ ದಿಂದ ಅವುಗಳ ಮೇಲೆ ದೊರೆತನ ಮಾಡುತ್ತೀರಿ.
ಕಳೆದು ಹೋದದ್ದನ್ನು ನಾನೇ ಹುಡುಕುವೆನು; ಓಡಿಸಲ್ಪಟ್ಟಿದ್ದನ್ನು ನಾನೇ ಮತ್ತೆ ತರುವೆನು, ಮುರಿದದ್ದನ್ನು ನಾನೇ ಕಟ್ಟುವೆನು, ಬಲಹೀನವಾದದ್ದನ್ನು ನಾನೇ ಬಲಪಡಿಸುವೆನು. ಆದರೆ ಕೊಬ್ಬಿದ್ದನ್ನೂ ಬಲಿಷ್ಠವಾದದ್ದನ್ನೂ ನಾನೇ ಸಂಹರಿಸು ವೆನು; ನಾನೇ ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ಮೇಯಿಸುವೆನು.
ಇದಲ್ಲದೆ ನಿನ್ನ ಸಹೋದರನು ನಿನಗೆ ವಿರೋಧ ವಾಗಿ ತಪ್ಪು ಮಾಡಿದರೆ ನೀನೂ ಅವನೂ ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು; ಅವನು ನಿನ್ನ ಮಾತನ್ನು ಕೇಳಿದರೆ ನೀನು ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ.
ಆದರೆ ನಿನ್ನ ನಂಬಿಕೆಯು ಬಿದ್ದುಹೋಗದಂತೆ ನಾನು ನಿನಗೋಸ್ಕರ ಬೇಡಿಕೊಂಡಿದ್ದೇನೆ; ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ಬಲಪಡಿಸು ಎಂದು ಹೇಳಿದನು.
ಸಹೋದರರೇ, ಒಬ್ಬನು ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮಿಕರಾದ ನೀವು ಸಾತ್ವಿಕಭಾವದಿಂದ ಯಥಾಸ್ಥಾನ ಪಡಿಸಿರಿ; ನೀನಾದರೋ ಶೋಧನೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು.
ಹಣದ ಪ್ರೀತಿಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ನಂಬಿಕೆಯಿಂದ ತಪ್ಪಿಹೋಗಿ ಅನೇಕ ದುಃಖಗಳಿಂದ ತಮ್ಮನ್ನು ತಾವೇ ತಿವಿಸಿ ಕೊಳ್ಳುತ್ತಾರೆ.
ಕೆಲವರು ಆ ಸುಳ್ಳಾದ ಜ್ಞಾನವನ್ನು ಹೇಳಿಕೊಂಡು ನಂಬಿಕೆಯಿಂದ ತಪ್ಪಿಹೋದರು. ಕೃಪೆಯು ನಿಮ್ಮೊಂದಿಗಿರಲಿ. ಆಮೆನ್.
ಅವರು ಪುನರುತ್ಥಾನವು ಆಗಲೇ ಆಗಿಹೋಯಿ ತೆಂದು ಹೇಳುತ್ತಾ ಸತ್ಯಭ್ರಷ್ಠರಾಗಿ ಕೆಲವರ ನಂಬಿಕೆ ಯನ್ನು ಕೆಡಿಸುವವರಾಗಿದ್ದಾರೆ.
ಹೀಗಿರುವದ ರಿಂದ ಜೋಲು ಬಿದ್ದ ಕೈಗಳನ್ನೂ ಬಲಹೀನವಾದ ಮೊಣಕಾಲುಗಳನ್ನೂ ನೆಟ್ಟಗೆ ಮಾಡಿರಿ.
ಆದರೆ ಕಹಿಯಾದ ಹಗೆತನ ಮತ್ತು ಜಗಳ ನಿಮ್ಮ ಹೃದಯ ಗಳೊಳಗೆ ಇರುವಲ್ಲಿ ನೀವು ಸತ್ಯಕ್ಕೆ ವಿರೋಧವಾಗಿ ಸುಳ್ಳಾಡಿ ಹೊಗಳಿಕೊಳ್ಳಬೇಡಿರಿ.
ಅವನು ಪಾಪಮಾಡಿದವ ನನ್ನು ತಪ್ಪಾದ ಮಾರ್ಗದಿಂದ ತಿರುಗಿಸಿದ್ದಲ್ಲದೆ ಅವನ ಆತ್ಮವನ್ನು ಮರಣಕ್ಕೆ ತಪ್ಪಿಸಿ ಬಹುಪಾಪಗಳನ್ನು ಮುಚ್ಚಿದವನಾದನೆಂದು ತಿಳುಕೊಳ್ಳಲಿ.
ಆದಕಾರಣ ಪ್ರಿಯರೇ, ನೀವು ಈ ಸಂಗತಿಗಳನ್ನು ಮುಂದಾಗಿ ತಿಳಿದುಕೊಂಡಿರುವದರಿಂದ ದುಷ್ಟರ ತಪ್ಪಿನಂತೆ ನಡಿಸ ಲ್ಪಟ್ಟು ನಿಮ್ಮ ಸ್ಥಿರಮನಸ್ಸನ್ನು ಬಿಟ್ಟು ಭ್ರಷ್ಠರಾಗದಂತೆ ಎಚ್ಚರಿಕೆಯಾಗಿರ್ರಿ.ಕೃಪೆಯಲ್ಲಿಯೂ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನದಲ್ಲಿಯೂ ಬೆಳೆಯಿರಿ. ಆತನಿಗೆ ಈಗಲೂ ಸದಾಕಾಲವೂ ಮಹಿಮೆ ಇರಲಿ. ಆಮೆನ್.
ಅವರು ಕಾಯಿನನ ಮಾರ್ಗ ಹಿಡಿದವರೂ ಪ್ರತೀಕಾರ ಹೊಂದುವದಕ್ಕಾಗಿ ಬಿಳಾಮನ ದೋಷವನ್ನು ಮಾಡುವದಕ್ಕೆ ದುರಾಶೆ ಯಿಂದ ಓಡುವವರೂ ಕೋರಹನಂತೆ ಎದುರು ಮಾತನಾಡಿ ನಾಶವಾಗುವವರೂ ಆಗಿರುವ ಅವರಿಗೆ ಅಯ್ಯೋ!
ತಾರತಮ್ಯ ನೋಡಿ ಕೆಲವರಿಗೆ ಕನಿಕರವನ್ನು ತೋರಿ ಸಿರಿ.