ಹೀಗಿರಲು ಕರ್ತನು ಅವರ ಯೌವನಸ್ಥರಲ್ಲಿ ಆನಂದಿಸುವದಿಲ್ಲ; ಅವರ ಅನಾಥರನ್ನೂ ವಿಧವೆಯರನ್ನೂ ಕರುಣಿಸುವದಿಲ್ಲ; ಪ್ರತಿಯೊಬ್ಬನು ಕಪಟಿಯೂ ಕೇಡು ಮಾಡುವವನೂ ಆಗಿದ್ದಾನೆ. ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ. ಆದದರಿಂದ ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.
Cross references
ಕಪಟಿಗಳ ಸಭೆಯು ಹಾಳಾಗುವದು; ಲಂಚದ ಗುಡಾರಗಳನ್ನು ಬೆಂಕಿಯು ಸುಡುವದು.ಅವರು ಕೇಡಿನಿಂದ ಬಸುರಾಗಿ ವ್ಯರ್ಥತ್ವ ವನ್ನು ಹೆರುವರು; ಅವರ ಗರ್ಭವು ಮೋಸವನ್ನು ಸಿದ್ಧಮಾಡುವದು.
ಆತನು ಕುದು ರೆಯ ಶಕ್ತಿಯಲ್ಲಿ ಸಂತೋಷಿಸುವದಿಲ್ಲ; ಮನುಷ್ಯನ ತೊಡೆಯಬಲವನ್ನು ಮೆಚ್ಚುವದಿಲ್ಲ.
ಹಾ, ಪಾಪಿಷ್ಠ ಜನಾಂಗವೇ, ದುಷ್ಟತನದ ಭಾರವನ್ನು ಹೊತ್ತಿರುವ ಪ್ರಜೆಯೇ, ದುಷ್ಟಸಂತ ತಿಯೇ, ಭ್ರಷ್ಟರಾದ ಮಕ್ಕಳೇ, ಕರ್ತನನ್ನು ಅವರು ತೊರೆದುಬಿಟ್ಟಿದ್ದಾರೆ. ಇಸ್ರಾಯೇಲಿನ ಪರಿಶುದ್ಧನಾ ದಾತನಿಗೆ ಕೋಪವನ್ನೆಬ್ಬಿಸುವಂತೆ ಅವರು ಹಿಂದಕ್ಕೆ ಹೋಗಿದ್ದಾರೆ.
ಅವರು ಸೈನ್ಯಗಳ ಕರ್ತನ ನ್ಯಾಯ ಪ್ರಮಾಣವನ್ನು ನಿರಾಕರಿಸಿದ್ದರಿಂದಲೂ ಇಸ್ರಾಯೇ ಲಿನ ಪರಿಶುದ್ಧನ ವಾಕ್ಯವನ್ನು ಅಸಡ್ಡೆಮಾಡಿದ್ದ ರಿಂದಲೂ ಬೆಂಕಿಯು ಕೊಳ್ಳಿಯನ್ನು ನುಂಗಿಬಿಡುವ ಹಾಗೂ ಜ್ವಾಲೆಯು ಹೊಟ್ಟನ್ನು ಸುಟ್ಟುಬಿಡುವಂತೆಯೂ ಅದರ ಬೇರು ಕೊಳೆಯುವಂತೆಯೂ ಚಿಗುರು ಅವರ ಧೂಳಿನಂತೆಯೂ ತೂರಿಹೋಗುವವು.
ಆದಕಾರಣ ಕರ್ತನ ಕೋಪವು ಜನರಿಗೆ ವಿರೋ ಧವಾಗಿ ಉರಿಗೊಂಡು ಅವರ ಮೇಲೆ ತನ್ನ ಕೈಚಾಚಿ ಅವರನ್ನು ಹೊಡೆದಿದ್ದಾನೆ; ಗುಡ್ಡಗಳು ಕಂಪಿಸಿದವು. ಅವರ ಹೆಣಗಳು ಹರಿದು ಬೀದಿಗಳ ಮಧ್ಯದಲ್ಲಿ ಬಿದ್ದಿ ರುವವು. ಇಷ್ಟೆಲ್ಲಾ ಆದರೂ ಆತನ ಕೋಪವು ಹಿಂತಿರುಗದೆ ಇನ್ನೂ ಕೈಚಾಚಿಯೇ ಇದೆ.
ಅವರು ಇಸ್ರಾಯೇಲನ್ನು ತೆರೆದ ಬಾಯಿಂದ ನುಂಗಿ ಬಿಡುವರು; ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.
ಹೀಗೆ ಮನಸ್ಸೆಯು ಎಫ್ರಾಯಾಮನ್ನು ಮತ್ತು ಎಫ್ರಾಯಾಮು ಮನಸ್ಸೆ ಯನ್ನು ತಿಂದುಬಿಡುವವು; ಅವರು ಒಟ್ಟಾಗಿ ಸೇರಿ ಯೆಹೂದಕ್ಕೆ ವಿರೋಧವಾಗಿರುವರು. ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇರುವದು.
ಇವರು ವಿಧವೆಯರನ್ನು ಸೂರೆಮಾಡಿ ದಿಕ್ಕಿಲ್ಲದವರಿಂದ ಸುಲುಕೊಂಡು ದೀನರಿಗೆ ನ್ಯಾಯ ವನ್ನು ತಪ್ಪಿಸಿ ನನ್ನ ಬಡ ಜನರ ನ್ಯಾಯವನ್ನು ತೆಗೆಯ ಬೇಕೆಂದಿದ್ದಾರೆ.
ನಾನಿಲ್ಲದೆ ಕೈದಿಗಳ ಕೆಳಗೆ ಮುದುರಿಕೊಂಡು, ಹತರಾಗಿರುವವರ ಕೆಳಗೆ ಬಿದ್ದಿರುವದೇ ಇವರ ಗತಿ. ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇರುವದು.
ನಾನು ಅವನನ್ನು ಭ್ರಷ್ಠಜನರಿಗೆ ವಿರುದ್ಧವಾಗಿ ಕಳುಹಿಸಿ ನನ್ನ ಕೋಪಕ್ಕೆ ಗುರಿಯಾದ (ನನ್ನ) ಪ್ರಜೆಯನ್ನು ಸೂರೆ ಮಾಡಿ ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡು ವೆನು.
ಅವರ ಬಿಲ್ಲುಗಳು ಸಹ ಯುವಕರನ್ನು ಹೊಡೆದು ತುಂಡುತುಂಡು ಮಾಡುವವು; ಇವರು ಗರ್ಭಫಲವನ್ನು ಕರುಣಿಸರು, ಇವರ ಕಣ್ಣುಗಳು ಮಕ್ಕಳನ್ನೂ ಉಳಿಸುವದಿಲ್ಲ.
ಅಲ್ಲಿನ ರೆಂಬೆಗಳು ಒಣಗಿಹೋಗಿ ಮುರಿ ಯಲ್ಪಡುವವು, ಹೆಂಗಸರು ಬಂದು ಅವುಗಳಿಂದ ಬೆಂಕಿ ಹಚ್ಚಿ ಉರಿಸುವರು; ಅದು ವಿವೇಕವುಳ್ಳ ಜನ ವಲ್ಲ. ಆದದರಿಂದ ಅವರನ್ನು ಮಾಡಿದವನು ಅವರಿಗೆ ಕನಿಕರ ತೋರಿಸುವದಿಲ್ಲ. ಅವರನ್ನು ರೂಪಿಸಿದಾತನು ಅವರನ್ನು ಕರುಣಿಸುವದಿಲ್ಲ.
ನೀಚನು ನೀಚನಾಗಿ ಮಾತನಾಡುವನು. ಅವನ ಹೃದಯವು ಕಪಟತ್ವವನ್ನು ಅಭ್ಯಾ ಸಿಸುವಂತೆಯೂ ಕರ್ತನಿಗೆ ವಿರೋಧವಾಗಿ ಸಂಪೂ ರ್ಣವಾಗಿ ತಪ್ಪಿಹೋಗುವವರಂತೆಯೂ ಹಸಿವೆ ಗೊಂಡವನ ಆಶೆಯನ್ನು ಬರಿದು ಮಾಡುವಂತೆಯೂ ಕೇಡನ್ನು ಮಾಡುವನು. ಬಾಯಾರಿದವನ ಪಾನವನ್ನು ಇಲ್ಲದಂತೆ ಮಾಡುವ ಹಾಗೆ ಕಾರಣನಾಗುವನು.
ನೀವು ಹೊಟ್ಟನ್ನು ಗರ್ಭಧರಿಸಿ ಕೂಳೆಯನ್ನು ಹೆರು ವಿರಿ. ನಿಮ್ಮ ಶ್ವಾಸವು ನಿಮ್ಮನ್ನೇ ನುಂಗುವ ಜ್ವಾಲೆಯಾಗು ವದು.
ಜನಾಂಗಗಳು ಸುಟ್ಟ ಸುಣ್ಣದ ಹಾಗಿರುವವು. ಕತ್ತರಿಸಿದ ಮುಳ್ಳು ಕೊಂಪೆಗೆ ಬೆಂಕಿಹಚ್ಚಿದಂತಾಗು ವದು.
ಯೌವನಸ್ಥನು ಕನ್ಯಾಸ್ತ್ರೀಯನ್ನು ಮದುವೆಮಾಡಿ ಕೊಳ್ಳುವ ಪ್ರಕಾರ ನಿನ್ನ ಕುಮಾರರು ನಿನ್ನನ್ನು ಮದುವೆ ಮಾಡಿಕೊಳ್ಳುವರು; ಮದಲಿಂಗನು ಮದಲಗಿತ್ತಿಯಲ್ಲಿ ಆನಂದಪಡುವ ಪ್ರಕಾರ ನಿನ್ನ ದೇವರು ನಿನ್ನಲ್ಲಿ ಆನಂದಪಡುವನು.
ಯೆರೂಸಲೇಮಿನಲ್ಲಿ ಉಲ್ಲಾಸಿಸಿ, ನನ್ನ ಜನರಲ್ಲಿ ಸಂತೋಷಪಡುವೆನು; ಅದರಲ್ಲಿ ಅಳುವ ಸ್ವರವೂ ಕೂಗುವ ಸ್ವರವೂ ಇನ್ನು ಕೇಳಲ್ಪಡುವದಿಲ್ಲ.
ಓ ಬೆನ್ಯಾವಿಾನನ ಮಕ್ಕಳೇ! ಯೆರೂಸಲೇಮಿನೊಳಗಿಂದ ಓಡಿಹೋಗುವದಕ್ಕೆ ನೀವು ಕೂಡಿಕೊಳ್ಳಿರಿ, ತೆಕೋವದಲ್ಲಿ ತುತೂರಿ ಊದಿರಿ; ಬೇತ್‌ಹಕ್ಕೆರೆಮಿನಲ್ಲಿ ಬೆಂಕಿಯ ಗುರುತನ್ನು ಹಚ್ಚಿರಿ; ಯಾಕಂದರೆ ಕೇಡೂ ದೊಡ್ಡ ನಾಶನವೂ ಉತ್ತರದ ಕಡೆಯಿಂದ ತೋರುತ್ತವೆ.
ದೇವರಾದ ಕರ್ತನು ಹೇಳುವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ಬಲವಾದ ಕೈಯಿಂ ದಲೂ ಚಾಚಿದ ತೋಳಿನಿಂದಲೂ ಸುರಿಸಿದ ರೋಷ ದಿಂದಲೂ ನಾನು ನಿಮ್ಮ ಮೇಲೆ ಅಧಿಕಾರ ನಡಿಸು ತ್ತೇನೆ.
ಒಳ್ಳೆಯವನು ಭೂಮಿಯೊಳ ಗಿಂದ ನಾಶವಾಗಿದ್ದಾನೆ; ಮನುಷ್ಯರಲ್ಲಿ ಯಥಾರ್ಥನು ಇಲ್ಲ; ಅವರೆಲ್ಲರು ರಕ್ತಕ್ಕೆ ಹೊಂಚಿ ನೋಡುತ್ತಾರೆ; ತಮ್ಮ ತಮ್ಮ ಸಹೋದರರನ್ನು ಬಲೆಹಾಕಿ ಬೇಟೆ ಆಡುತ್ತಾರೆ.
ಆತನ ಒಳ್ಳೇತನವು ಎಷ್ಟೋ ದೊಡ್ಡದು; ಆತನ ಸೌಂದರ್ಯವು ಎಷ್ಟು ಮಹತ್ತಾ ದದ್ದು! ಧಾನ್ಯವು ಯೌವನಸ್ಥರನ್ನೂ ದ್ರಾಕ್ಷಾರಸವು ಯುವತಿಯರನ್ನೂ ಹರ್ಷಗೊಳಿಸುವವು.
ಓ ಸರ್ಪಸಂತತಿಯವರೇ, ಕೆಟ್ಟವರಾಗಿ ರುವ ನೀವು ಒಳ್ಳೆಯವುಗಳನ್ನು ಹೇಗೆ ಮಾತನಾಡೀರಿ? ಯಾಕಂದರೆ ಹೃದಯದಲ್ಲಿ ಸಮೃದ್ಧಿಯಾಗಿರುವದನ್ನೇ ಬಾಯಿ ಮಾತನಾಡುತ್ತದೆ.
ಬೆಳಿಗ್ಗೆ ಆಕಾಶವು ಮೋಡಕವಿದು ಕೆಂಪಾಗಿದ್ದರೆ--ಈ ಹೊತ್ತು ಕೆಟ್ಟ ಹವಾಮಾನ ಇದೆಯೆಂದೂ ನೀವು ಅನ್ನುತ್ತೀರಿ. ಓ ಕಪಟಿಗಳೇ, ಆಕಾಶದಲ್ಲಾಗುವ ಸೂಚನೆ ಗಳನ್ನು ನೀವು ಗ್ರಹಿಸಬಲ್ಲಿರಿ; ಆದರೆ ಸಮಯಗಳ ಸೂಚನೆಗಳನ್ನು ನೀವು ಗ್ರಹಿಸಲಾರಿರಾ?