Home Bibles ಯೆಶಾಯ 66:1 · ಕನ್ನಡ ಬೈಬಲ್
ಯೆಶಾಯ 66:1 · ಕನ್ನಡ ಬೈಬಲ್

ಕರ್ತನು ಹೇಳುವದೇನಂದರೆ--ಆಕಾಶವು ನನ್ನ ಸಿಂಹಾಸನವು; ಭೂಮಿಯು ನನ್ನ ಪಾದ ಪೀಠವು: ನೀವು ನನಗೋಸ್ಕರ ಕಟ್ಟುವ ಮನೆ ಎಲ್ಲಿ? ನನ್ನ ವಿಶ್ರಾಂತಿಯ ಸ್ಥಳವು ಎಲ್ಲಿ?

Cross references

2 ಸಮುವೇಲ 7:5

ನೀನು ಹೋಗಿ ನನ್ನ ಸೇವಕನಾದ ದಾವೀದನಿಗೆ--ಕರ್ತನು ಹೇಳಬೇಕಾದ ದ್ದೇನಂದರೆ--ನಾನು ವಾಸವಾಗಿರುವದಕ್ಕೆ ನೀನು ನನಗೆ ಮನೆಯನ್ನು ಕಟ್ಟುವಿಯೋ?

2 ಸಮುವೇಲ 7:7

ನಾನು ಇಸ್ರಾಯೆಲ್ಯರಾದ ನನ್ನ ಜನರನ್ನು ಪೋಷಿಸುವಂತೆ ಆಜ್ಞಾಪಿಸಿದ ಇಸ್ರಾಯೇಲಿನ ಒಂದು ಗೋತ್ರದವ ರಿಗೂ--ನೀವು ನನಗೆ ದೇವದಾರಿನ ಮನೆಯನ್ನು ಕಟ್ಟದೆ ಇರುವದೇನೆಂದು ನಾನು ಇಸ್ರಾಯೇಲ್‌ ಮಕ್ಕಳೆಲ್ಲರ ಸಂಗಡ ನಡೆಯುತ್ತಿದ್ದ ಯಾವ ಸ್ಥಳದ ಲ್ಲಾದರೂ ಏನಾದರೂ ಹೇಳಿದೆನೋ?

1 ಅರಸುಗಳು 8:27

ಆದರೆ ದೇವರು ನಿಶ್ಚಯವಾಗಿ ಭೂಮಿಯ ಮೇಲೆ ವಾಸವಾಗಿರುವನೋ? ಇಗೋ, ಆಕಾಶಗಳೂ ಆಕಾಶಾ ಕಾಶಗಳೂ ನಿನ್ನನ್ನು ಹಿಡಿಯಲಾರವು; ಹಾಗಾದರೆ ನಾನು ಕಟ್ಟಿಸಿದ ಈ ಮಂದಿರವು ಹಿಡಿಯುವದು ಹೇಗೆ?

1 ದಿನವೃತ್ತಾಂತ 28:2

ಆಗ ಅರಸನಾದ ದಾವೀದನು ಎದ್ದು ನಿಂತು ಹೇಳಿದ್ದೇನಂದರೆ--ನನ್ನ ಸಹೋದರರೇ, ನನ್ನ ಜನರೇ, ನನ್ನ ಮಾತು ಕೇಳಿರಿ, ಕರ್ತನ ಒಡಂಬಡಿ ಕೆಯ ಮಂಜೂಷದ ನಿಮಿತ್ತವಾಗಿಯೂ ನಮ್ಮ ದೇವರ ಪಾದಪೀಠದ ನಿಮಿತ್ತವಾಗಿಯೂ ವಿಶ್ರಾಂತಿಯಾದ ಮನೆಯನ್ನು ನಾನು ಕಟ್ಟಿಸಲು ಮನಸ್ಸಾಗಿದ್ದು ಕಟ್ಟುವಿ ಕೆಯ ನಿಮಿತ್ತ ಸಿದ್ಧಮಾಡಿದೆನು.

2 ದಿನವೃತ್ತಾಂತ 2:5

ನಾನು ಕಟ್ಟಿಸುವ ಆಲಯವು ದೊಡ್ಡದು; ನಮ್ಮ ದೇವರು ಸಕಲ ದೇವರುಗಳಿಗಿಂತ ದೊಡ್ಡವನಾಗಿದ್ದಾನೆ.

2 ದಿನವೃತ್ತಾಂತ 6:18

ಆದರೆ ದೇವರು ನಿಶ್ಚಯವಾಗಿ ಭೂಮಿಯ ಮೇಲೆ ಮನುಷ್ಯರ ಸಂಗಡ ವಾಸವಾಗಿರುವನೋ? ಇಗೋ, ಆಕಾಶಗಳೂ ಆಕಾಶಾಕಾಶಗಳೂ ನಿನ್ನನ್ನು ಹಿಡಿಸಲಾರವು; ಹಾಗಾದರೆ ನಾನು ಕಟ್ಟಿಸಿದ ಈ ಆಲಯವು ನಿನ್ನನ್ನು ಹಿಡಿಸುವದು ಹೇಗೆ?

ಕೀರ್ತನೆಗಳು 11:4

ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಕರ್ತನ ಸಿಂಹಾಸನವು ಪರಲೋಕದಲ್ಲಿ ಅದೆ; ಆತನ ಕಣ್ಣುಗಳು ದೃಷ್ಟಿಸುತ್ತವೆ; ಆತನ ರೆಪ್ಪೆಗಳು ಮನು ಷ್ಯನ ಮಕ್ಕಳನ್ನು ಶೋಧಿಸುತ್ತವೆ;

ಕೀರ್ತನೆಗಳು 99:9

ನಮ್ಮ ದೇವರಾದ ಕರ್ತನನ್ನು ಉನ್ನತಪಡಿಸಿರಿ; ಆತನ ಪರಿ ಶುದ್ಧ ಪರ್ವತದಲ್ಲಿ ಆರಾಧಿಸಿರಿ; ನಮ್ಮ ದೇವರಾದ ಕರ್ತನು ಪರಿಶುದ್ಧನೇ.

ಕೀರ್ತನೆಗಳು 132:7

ನಾವು ಆತನ ಗುಡಾರಗಳಿಗೆ ಹೋಗಿ ಆತನ ಪಾದಪೀಠದಲ್ಲಿ ಆರಾಧಿಸೋಣ.

ಯೆಶಾಯ 60:13

ಲೆಬನೋ ನಿನ ವೈಭವವು ಸುರಗಿ, ದಿಂಡುಗ, ಹೊನ್ನೆ ಮರಗಳು ಕೂಡ ನನ್ನ ಪರಿಶುದ್ಧ ಸ್ಥಳವನ್ನು ಶೃಂಗರಿಸುವದಕ್ಕೆ ನಿನ್ನ ಬಳಿಗೆ ಬರುವವು; ನನ್ನ ಪಾದಗಳ ಸ್ಥಳವನ್ನು ನಾನು ಗೌರವವುಳ್ಳದ್ದಾಗಿ ಮಾಡುವೆನು.

ಯೆರೆಮಿಯ 7:4

ಇದಲ್ಲದೆ ನೀನು ಅವರಿಗೆ ಹೇಳಬೇಕಾದದ್ದೇ ನಂದರೆ ಕರ್ತನು ಹೀಗೆ ಹೇಳುತ್ತಾನೆ--ಅವರು ಬಿದ್ದು ಮತ್ತೆ ಏಳರೋ? ಹಿಂಜರಿದವನು ಮತ್ತೆ ಬರುವದಿ ಲ್ಲವೋ?

ಮಲಾಕಿ 1:11

ಸೂರ್ಯೋದಯವು ಮೊದಲುಗೊಂಡು ಅದರ ಅಸ್ತಮಾನದ ವರೆಗೂ ನನ್ನ ಹೆಸರು ಅನ್ಯಜನಾಂಗ ಗಳಲ್ಲಿ ಘನವಾಗಿರುವದು; ಸಕಲ ಸ್ಥಳಗಳಲ್ಲಿ ನನ್ನ ಹೆಸರಿಗೆ ಧೂಪವೂ ಶುದ್ಧಕಾಣಿಕೆಯೂ ಅರ್ಪಿಸ ಲ್ಪಡುವದು; ನನ್ನ ಹೆಸರು ಅನ್ಯಜನಾಂಗಗಳಲ್ಲಿ ಘನ ವಾಗಿ ರುವದೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.

ಮತ್ತಾಯ 5:34

ಆದರೆ ನಾನು ನಿಮಗೆ ಹೇಳುವದೇನಂದರೆ--ಎಷ್ಟು ಮಾತ್ರಕ್ಕೂ ಅಣೆಯನ್ನು ಇಡಬೇಡ. ಪರಲೋಕದ ಮೇಲೆ ಬೇಡ; ಯಾಕಂದರೆ ಅದು ದೇವರ ಸಿಂಹಾಸನವು.

ಮತ್ತಾಯ 23:21

ದೇವಾ ಲಯದ ಮೇಲೆ ಆಣೆಯಿಡುವವನು ಅದರ ಮೇಲೆ ಯೂ ಆದರಲ್ಲಿ ವಾಸಿಸುವಾತನ ಮೇಲೆಯೂ ಆಣೆ ಯಿಡುವವನಾಗಿದ್ದಾನೆ.

ಮತ್ತಾಯ 24:2

ಆಗ ಯೇಸು ಅವರಿಗೆ--ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ. ಎಲ್ಲಾ ಕೆಡವ ಲ್ಪಡದು ಕಲ್ಲಿನ ಮೇಲೆ ಕಲ್ಲು ಒಂದು ಇಲ್ಲಿ ಬಿಡಲ್ಪ ಡುವದಿಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳು ತ್ತೇನೆ ಅಂದನು.

ಯೋಹಾನ 4:20

ನಮ್ಮ ಪಿತೃಗಳು ಈ ಬೆಟ್ಟದಲ್ಲಿ ಆರಾಧಿಸಿದರು; ಆದರೆ ಜನರು ಆರಾಧಿಸತಕ್ಕ ಸ್ಥಳವು ಯೆರೂಸಲೇಮಿ ನಲ್ಲಿಯೇ ಎಂದು ನೀವು ಅನ್ನುತ್ತೀರಿ ಅಂದಳು.

ಅಪೋಸ್ತಲರ ಕೃತ್ಯಗಳು 7:48

ಆದರೂ ಮಹೋನ್ನತನು ಕೈಯಿಂದ ಕಟ್ಟಿದ ಆಲಯಗಳಲ್ಲಿ ವಾಸಮಾಡುವಾತನಲ್ಲ. ಯಾಕಂದರೆ--

ಅಪೋಸ್ತಲರ ಕೃತ್ಯಗಳು 17:24

ಜಗತ್ತನ್ನೂ ಅದರಲ್ಲಿರುವ ಎಲ್ಲವುಗಳನ್ನೂ ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯ ನಾಗಿರುವದರಿಂದ ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವಾತನಲ್ಲ.

Interlinear

Choose Theme