Home Bibles ☰ Books ಯೆಶಾಯ 65:10 · ಕನ್ನಡ ಬೈಬಲ್
ಯೆಶಾಯ 65:10 · ಕನ್ನಡ ಬೈಬಲ್

ನನ್ನನ್ನು ಹುಡುಕುವ ನನ್ನ ಜನರಿ ಗೋಸ್ಕರ ಶಾರೋನು ಮಂದೆಗಳ ಹಟ್ಟಿಯಾಗಿಯೂ ಆಕೋರಿನ ತಗ್ಗು, ದನಗಳು ಮಲಗುವ ಸ್ಥಳವಾ ಗಿಯೂ ಇರುವದು.

Cross references

ಯೆಹೋಶುವ 7:24

ಆಗ ಯೆಹೋಶುವನೂ ಅವ ನೊಂದಿಗೆ ಇಸ್ರಾಯೇಲ್ಯರೆಲ್ಲರೂ ಜೆರಹನ ಮಗನಾದ ಆಕಾನನನ್ನೂ ಆ ಬೆಳ್ಳಿಯನ್ನೂ ವಸ್ತ್ರವನ್ನೂ ಬಂಗಾರದ ಗಟ್ಟಿಯನ್ನೂ ಅವನ ಕುಮಾರರನ್ನೂ ಕುಮಾರ್ತೆಯ ರನ್ನೂ ಅವನ ಎತ್ತುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಅವನ ಡೇರೆಯನ್ನೂ ಅವನಿಗಿದ್ದ ಸಮಸ್ತವನ್ನೂ ತೆಗೆದುಕೊಂಡು ಆಕೋರಿನ ತಗ್ಗಿಗೆ ತಂದರು.

ಯೆಹೋಶುವ 7:26

ಅವರ ಮೇಲೆ ಕಲ್ಲು ಕುಪ್ಪೆ ಕೂಡಿಸಿದರು. ಅದು ಈ ದಿನದ ವರೆಗೂ ಇದೆ. ಆಗ ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರುಗಿದನು; ಆದದರಿಂದ ಆ ಸ್ಥಳವು ಈ ವರೆಗೂ ಆಕೋರಿನ ತಗ್ಗೆಂದು ಕರೆಯಲ್ಪಡುವದು.

1 ದಿನವೃತ್ತಾಂತ 27:29

ಶಾರೋನಿನಲ್ಲಿ ಮೇಯಿಸುವ ದನಗಳ ಮೇಲೆ ಶಾರೋನಿನವನಾದ ಶಿಟ್ರೈ ಇದ್ದನು; ತಗ್ಗುಗಳಲ್ಲಿರುವ ದನಗಳ ಮೇಲೆ ಅದ್ಲೈಯ ಮಗನಾದ ಶಾಫಾಟನು ಇದ್ದನು.

ಯೆಶಾಯ 33:9

ದೇಶವು ಪ್ರಲಾಪಿಸಿ ಕುಗ್ಗುತ್ತದೆ. ಲೆಬನೋನ್‌ ನಾಚಿಕೆಪಟ್ಟು ಕಡಿದು ಬೀಳುವದು. ಶಾರೋನ್‌ ಬೆಂಗಾ ಡಾಗಿದೆ. ಬಾಷಾನ್‌ ಮತ್ತು ಕರ್ಮೆಲ್‌ ಹಣ್ಣುಗಳನ್ನು ಉದುರಿಸಿಬಿಟ್ಟಿವೆ.

ಯೆಶಾಯ 35:2

ಅದು ಸಮೃದ್ಧಿಯಾಗಿ ಅರಳಿ ಆನಂದ ಸ್ವರವನ್ನೆತ್ತಿ ಉಲ್ಲಾಸಿಸುವದು. ಲೆಬ ನೋನಿನ ಘನತೆಯು ಕರ್ಮೆಲ್‌ ಮತ್ತು ಶಾರೋ ನಿನ ಗೌರವವು ಅದಕ್ಕೆ ಕೊಡಲ್ಪಡುವದು, ಅವರು ಕರ್ತನ ಮಹಿಮೆಯನ್ನೂ ನಮ್ಮ ದೇವರ ಘನತೆ ಯನ್ನೂ ನೋಡುವರು.

ಯೆಶಾಯ 51:1

ನೀತಿಯನ್ನು ಹಿಂಬಾಲಿಸುವವರೇ, ಕರ್ತನನ್ನು ಹುಡುಕುವವರೇ, ನನ್ನ ಕಡೆಗೆ ಕಿವಿ ಗೊಡಿರಿ; ನೀವು ಯಾವ ಬಂಡೆಯೊಳಗಿಂದ ಕಡಿಯ ಲ್ಪಟ್ಟಿರೋ ಮತ್ತು ಯಾವ ಗುಂಡಿಯೊಳಗಿಂದ ಅಗೆಯ ಲ್ಪಟ್ಟಿರೋ ಆ ಕಡೆಗೆ ನೋಡಿರಿ.

ಯೆರೆಮಿಯ 29:13

ಅದನ್ನು ನಿನಗೆ ಕಟ್ಟುವ ಹಾಗೆ ನಿನಗೋ ಸ್ಕರ ವಾದಿಸುವವರು ಯಾರೂ ಇರುವದಿಲ್ಲ. ವಾಸಿ ಮಾಡುವ ಔಷಧಗಳು ನಿನಗೆ ಇಲ್ಲ.

ಯೆರೆಮಿಯ 33:12

ಆದದರಿಂದ ಕರ್ತನ ವಾಕ್ಯವು ಯೆರೆವಿಾಯನಿಗೆ ಕರ್ತನಿಂದ ಉಂಟಾಗಿ ಹೇಳಿದ್ದೇನಂದರೆ--

ಯೆಹೆಜ್ಕೇಲ 34:13

ಜನಗಳೊಳಗಿಂದ ಅವುಗಳನ್ನು ಹೊರಗೆ ತೆಗೆದು, ದೇಶಗಳಿಂದ ಅವುಗಳನ್ನು ಕೂಡಿಸಿ, ಅವುಗಳ ಸ್ವಂತ ದೇಶಕ್ಕೆ ತರುವೆನು. ಇಸ್ರಾಯೇಲಿನ ಪರ್ವತಗಳ ಮೇಲೆ ನದಿಗಳಲ್ಲಿ ನಿವಾಸಿಸುವ ಎಲ್ಲಾ ದೇಶಗಳಲ್ಲಿ ಮೇಯಿಸುವೆನು.

ಹೊಶೇಯ 2:15

ಅವಳ ದ್ರಾಕ್ಷೇ ತೋಟಗಳನ್ನು ಅಲ್ಲಿರುವಾ ಗಲೇ ಅವಳಿಗೆ ಹಿಂದಕ್ಕೆ ಕೊಡುವೆನು. ಆಕೋರಿನ ತಗ್ಗನ್ನೇ ಅವಳ ನಿರೀಕ್ಷೆಗೆ ದ್ವಾರವನ್ನಾಗಿ ಮಾಡುವೆನು; ಅಲ್ಲಿ ಅವಳು ಯೌವನದ ದಿನಗಳಲ್ಲಿಯೂ ಐಗುಪ್ತ ದೇಶದೊಳಗಿಂದ ಹೊರಟುಬಂದ ದಿನದಲ್ಲಿಯೂ ಆದ ಹಾಗೆ ಹಾಡುವಳು.

Interlinear

Choose Theme