Home Bibles 1 ದಿನವೃತ್ತಾಂತ 27:29 · ಕನ್ನಡ ಬೈಬಲ್
1 ದಿನವೃತ್ತಾಂತ 27:29 · ಕನ್ನಡ ಬೈಬಲ್

ಶಾರೋನಿನಲ್ಲಿ ಮೇಯಿಸುವ ದನಗಳ ಮೇಲೆ ಶಾರೋನಿನವನಾದ ಶಿಟ್ರೈ ಇದ್ದನು; ತಗ್ಗುಗಳಲ್ಲಿರುವ ದನಗಳ ಮೇಲೆ ಅದ್ಲೈಯ ಮಗನಾದ ಶಾಫಾಟನು ಇದ್ದನು.

Cross references

ದ್ವಿತೀಯೋಪದೇಶಕಾಂಡ 1:7

ತಿರುಗಿಕೊಂಡು ಹೊರಟು ಅಮೋರಿಯರ ಬೆಟ್ಟಕ್ಕೂ ಅದರ ಸವಿಾಪದ ಬೈಲಿನಲ್ಲಿಯೂ ಗುಡ್ಡದಲ್ಲಿಯೂ ತಗ್ಗಿನಲ್ಲಿಯೂ ದಕ್ಷಿಣದಲ್ಲಿಯೂ ಸಮುದ್ರ ತೀರ ದಲ್ಲಿಯೂ ಇರುವ ಎಲ್ಲಾ ಸ್ಥಳಗಳಿಗೂ ಕಾನಾನ್ಯರ ದೇಶಕ್ಕೂ ಲೆಬನೋನಿಗೂ ಯೂಫ್ರೇಟೀಸ್‌ ಎಂಬ ಮಹಾನದಿಯ ಬಳಿಗೂ ಹೋಗಿರಿ.

1 ದಿನವೃತ್ತಾಂತ 5:16

ಅವರು ಗಿಲ್ಯಾದಿ ನಲ್ಲಿರುವ ಬಾಷಾನಿನಲ್ಲಿಯೂ ಅದರ ಊರುಗಳ ಲ್ಲಿಯೂ ಅದರ ಮೇರೆಯಲ್ಲಿರುವ ಶಾರೋನಿನ ಸಮಸ್ತ ಉಪನಗರಗಳಲ್ಲಿಯೂ ವಾಸವಾಗಿದ್ದರು.

2 ದಿನವೃತ್ತಾಂತ 26:10

ಅವನು ಅರಣ್ಯದಲ್ಲಿ ಬುರುಜುಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿ ದನು; ತಗ್ಗಿನ ದೇಶದಲ್ಲಿಯೂ ಬೈಲು ದೇಶದಲ್ಲಿಯೂ ಅವನಿಗೆ ಬಹು ಕುರಿದನಗಳಿದ್ದವು. ಹಾಗೆಯೇ ಪರ್ವತ ಗಳಲ್ಲಿಯೂ ಕರ್ಮೆಲಿನಲ್ಲಿಯೂ ಅವನಿಗೆ ಒಕ್ಕಲಿ ಗರೂ ದ್ರಾಕ್ಷೇ ವ್ಯವಸಾಯದವರೂ ಇದ್ದರು. ಅವನು ವ್ಯವಸಾಯದಲ್ಲಿ ಇಷ್ಟವುಳ್ಳವನಾಗಿದ್ದನು.

ಸಭಾಪ್ರಸಂಗಿ 2:7

ನನಗೆ ದಾಸದಾಸಿಯರು ಇದ್ದರು; ನನ್ನ ಮನೆಯಲ್ಲಿ ಹುಟ್ಟಿದ ದಾಸರು ನನಗೆ ಇದ್ದರು; ನನಗೆ ಮುಂಚೆ ಯೆರೂಸ ಲೇಮಿನಲ್ಲಿ ಇದ್ದವರಿಗಿಂತ ದನಕುರಿಗಳ ಸಂಪತ್ತು ಹೆಚ್ಚಾ ಗಿತ್ತು.

ಯೆಶಾಯ 35:2

ಅದು ಸಮೃದ್ಧಿಯಾಗಿ ಅರಳಿ ಆನಂದ ಸ್ವರವನ್ನೆತ್ತಿ ಉಲ್ಲಾಸಿಸುವದು. ಲೆಬ ನೋನಿನ ಘನತೆಯು ಕರ್ಮೆಲ್‌ ಮತ್ತು ಶಾರೋ ನಿನ ಗೌರವವು ಅದಕ್ಕೆ ಕೊಡಲ್ಪಡುವದು, ಅವರು ಕರ್ತನ ಮಹಿಮೆಯನ್ನೂ ನಮ್ಮ ದೇವರ ಘನತೆ ಯನ್ನೂ ನೋಡುವರು.

ಯೆಶಾಯ 65:10

ನನ್ನನ್ನು ಹುಡುಕುವ ನನ್ನ ಜನರಿ ಗೋಸ್ಕರ ಶಾರೋನು ಮಂದೆಗಳ ಹಟ್ಟಿಯಾಗಿಯೂ ಆಕೋರಿನ ತಗ್ಗು, ದನಗಳು ಮಲಗುವ ಸ್ಥಳವಾ ಗಿಯೂ ಇರುವದು.

Interlinear

Choose Theme