Home Bibles ಯೆಶಾಯ 58:7 · ಕನ್ನಡ ಬೈಬಲ್
ಯೆಶಾಯ 58:7 · ಕನ್ನಡ ಬೈಬಲ್

ನಿನ್ನ ರೊಟ್ಟಿಯನ್ನು ಹಸಿದವರಿಗೆ ಹಂಚುವದೂ ಅಲೆಯು ತ್ತಿರುವ ಬಡವರನ್ನು ನಿನ್ನ ಮನೆಗೆ ಬರಮಾಡಿ ಕೊಳ್ಳುವದೂ ಬೆತ್ತಲೆಯವರನ್ನು ಕಂಡಾಗೆಲ್ಲ ಅವರಿಗೆ ಹೊದಿಸುವದೂ ನಿನ್ನ ಸ್ವಂತ ಶರೀರದಂತಿರುವವ ನಿಗೆ ನಿನ್ನನ್ನು ಮರೆಮಾಡಿಕೊಳ್ಳದಿರುವದೂ ಇದೇ ಅಲ್ಲವೋ?

Cross references

ಆದಿಕಾಂಡ 18:2

ಆಗ ತನ್ನ ಕಣ್ಣುಗಳನ್ನೆತ್ತಿ ನೋಡಲು ಅಗೋ, ಮೂವರು ಪುರುಷರು ಅವನ ಪಕ್ಕದಲ್ಲಿ ನಿಂತಿದ್ದರು. ಅವನು ಅವರನ್ನು ನೋಡಿ ಅವರಿಗೆ ಎದುರಾಗಿ ಗುಡಾರದ ಬಾಗಲಿನಿಂದ ಓಡಿಬಂದು ನೆಲದ ವರೆಗೂ ಬೊಗ್ಗಿ--

ಆದಿಕಾಂಡ 19:2

ಇಗೋ, ಪ್ರಭುಗಳೇ, ನೀವು ನಿಮ್ಮ ದಾಸನ ಮನೆಯಲ್ಲಿ ಇಳುಕೊಂಡು ರಾತ್ರಿ ಕಳೆಯಿರಿ; ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ; ಬೆಳಿಗ್ಗೆ ಎದ್ದು ನಿಮ್ಮ ಮಾರ್ಗವನ್ನು ಹಿಡಿದು ಹೋಗಬಹುದು ಎಂದು ಬೇಡಿಕೊಂಡನು. ಅದಕ್ಕೆ ಅವರು--ಹಾಗಲ್ಲ; ನಾವು ರಾತ್ರಿಯೆಲ್ಲಾ ಬೀದಿಯಲ್ಲಿ ಇರುತ್ತೇವೆ ಅಂದರು.

ಆದಿಕಾಂಡ 19:14

ಆಗ ಲೋಟನು ಹೊರಟುಹೋಗಿ ತನ್ನ ಕುಮಾರ್ತೆಯರು ಮದುವೆಯಾದ ಅಳಿಯಂದಿರ ಸಂಗಡ ಮಾತನಾಡಿ--ಎದ್ದು ಈ ಸ್ಥಳದಿಂದ ಹೊರಡಿರಿ; ಯಾಕಂದರೆ ಕರ್ತನು ಈ ಪಟ್ಟಣವನ್ನು ನಾಶ ಮಾಡುವದಕ್ಕಿದ್ದಾನೆ ಅಂದನು. ಆದರೆ ಅವನು ತನ್ನ ಅಳಿಯಂದಿರಿಗೆ ಅಪಹಾಸ್ಯ ಮಾಡುವಂತೆ ಕಾಣಿಸಿಕೊಂಡನು.

ನ್ಯಾಯಾಧಿಪತಿಗಳು 9:2

ನೀವು ದಯಮಾಡಿ ಶೆಕೆಮಿನ ಜನರೆಲ್ಲರು ಕೇಳುವ ಹಾಗೆ ಮಾತನಾಡ ಬೇಕಾದದ್ದೇನಂದರೆ -- ಯೆರುಬ್ಬಾಳನ ಮಕ್ಕಳಾದ ಎಪ್ಪತ್ತು ಮಂದಿಯು ನಿಮ್ಮನ್ನು ಆಳುವದು ಒಳ್ಳೇದೋ? ಒಬ್ಬನು ಆಳುವದು ಒಳ್ಳೇದೋ? ನಾನು ನಿಮ್ಮ ಎಲುಬೂ ನಿಮ್ಮ ಮಾಂಸವೂ ಆಗಿದ್ದೇನೆಂದು ಜ್ಞಾಪಕ ಮಾಡಿಕೊಳ್ಳಿರಿ ಅಂದನು.

ನ್ಯಾಯಾಧಿಪತಿಗಳು 19:20

ಆಗ ಆ ಮುದುಕನು ನಿನಗೆ ಸಮಾಧಾನವಾಗಲಿ, ನಿನ್ನ ಕೊರತೆಯೆಲ್ಲಾ ನನ್ನ ಮೇಲೆ ಇರಲಿ; ಹೇಗಾ ದರೂ ಬೀದಿಯೊಳಗೆ ಇಳುಕೊಳ್ಳಬೇಡವೆಂದು ಹೇಳಿ

2 ದಿನವೃತ್ತಾಂತ 28:15

ಆಗ ಹೆಸರಿನಿಂದ ಹೇಳಲ್ಪಟ್ಟ ಆ ಮನು ಷ್ಯರು ಎದ್ದು ಸೆರೆಯವರನ್ನು ತೆಗೆದುಕೊಂಡು ಅವರಲ್ಲಿ ಬೆತ್ತಲೆಯಾದವರಿಗೆ ಕೊಳ್ಳೆಯ ವಸ್ತ್ರಗಳನ್ನು ಉಡಿಸಿ ತೊಡಿಸಿ ಅವರಿಗೆ ಕೆರಗಳನ್ನು ಕೊಟ್ಟು ಉಣ್ಣುವದಕ್ಕೂ ಕುಡಿಯುವದಕ್ಕೂ ಕೊಟ್ಟು ಅವರ ತಲೆಗಳಿಗೆ ಎಣ್ಣೆ ಯನ್ನು ಹಚ್ಚಿ ಅವರಲ್ಲಿ ಇರುವ ಬಲಹೀನರನ್ನು ಕತ್ತೆಗಳ ಮೇಲೆ ಏರಿಸಿ ಯೆರಿಕೋವೆಂಬ ಖರ್ಜೂರದ ಪಟ್ಟಣಕ್ಕೆ ಅವರ ಸಹೋದರರ ಬಳಿಗೆ ಕರಕೊಂಡು ಹೋಗಿ ಸಮಾರ್ಯಕ್ಕೆ ಹಿಂತಿರುಗಿದರು.

ನೆಹೆಮ್ಯ 5:5

ಆದರೂ ನಮ್ಮ ಶರೀರವು ನಮ್ಮ ಸಹೋದರರ ಶರೀರದ ಹಾಗೆ, ನಮ್ಮ ಮಕ್ಕಳು ಅವರ ಮಕ್ಕಳ ಹಾಗೆ ಆದರೆ ಇಗೋ, ಸೇವಕರಾಗಿರಲು ನಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ದಾಸರಾಗುವದಕ್ಕೆ ತಂದಿದ್ದೇವೆ. ನಮ್ಮ ಕುಮಾರ್ತೆ ಯರಲ್ಲಿ ಕೆಲವರು ಆಗಲೇ ದಾಸರಾದರು. ಅವರನ್ನು ಬಿಡಿಸಲು ನಮಗೆ ಶಕ್ತಿ ಇಲ್ಲ. ಯಾಕಂದರೆ ನಮ್ಮ ಹೊಲಗಳೂ ದ್ರಾಕ್ಷೇ ತೋಟಗಳೂ ಅನ್ಯರಿಗೆ ಸೇರಿ ದವು ಅಂದರು.

ಯೋಬ 22:7

ದಣಿದವನಿಗೆ ನೀರನ್ನು ಕುಡಿಯ ಕೊಡಲಿಲ್ಲ; ಹಸಿದವನಿಂದ ರೊಟ್ಟಿಯನ್ನು ಹಿಂದೆ ಗೆದಿದ್ದಿ.

ಯೋಬ 31:18

(ಯಾಕಂದರೆ ನನ್ನ ಯೌವನದಿಂದ ನನ್ನೊಂದಿಗೆ ನಾನು ಅವನನ್ನು ತಂದೆ ಯಂತೆ ಬೆಳೆಸಿದೆನಲ್ಲಾ. ನನ್ನ ತಾಯಿಯ ಗರ್ಭದಿಂದ ಅವಳನ್ನು ನಡಿಸಿದೆನಲ್ಲಾ).

ಯೋಬ 31:19

ಬಟ್ಟೆ ಇಲ್ಲದೆ ನಾಶ ವಾಗುವವನನ್ನೂ ದರಿದ್ರನಿಗೆ ಹೊದಿಕೆ ಇಲ್ಲದಿರುವ ದನ್ನೂ ನಾನು ನೋಡಿದ್ದರೆ

ಕೀರ್ತನೆಗಳು 112:9

ಅವನು ಬಡವರಿಗೆ ಧಾರಾಳವಾಗಿ ಕೊಡುತ್ತಾನೆ; ಅವನ ನೀತಿ ಎಂದೆಂದಿಗೂ ನಿಲ್ಲು ತ್ತದೆ; ಅವನ ಕೊಂಬು ಘನದಿಂದ ಎತ್ತಲ್ಪಡುವದು.ದುಷ್ಟನು ನೋಡಿ ದುಃಖಪಡುವನು; ತನ್ನ ಹಲ್ಲು ಗಳನ್ನು ಕಡಿದು ಕರಗಿಹೋಗುವನು; ದುಷ್ಟರ ಆಶೆಯು ನಾಶವಾಗುವದು.

ಸಾಮೇತಿಗಳು 11:17

ಕರುಣೆಯುಳ್ಳವನು ತನ್ನ ಪ್ರಾಣಕ್ಕೆ ಒಳ್ಳೇದನ್ನು ಮಾಡಿಕೊಳ್ಳುತ್ತಾನೆ; ಕಠೋರಿಯು ತನ್ನ ಶರೀರವನ್ನು ಬಾಧಿಸಿಕೊಳ್ಳುತ್ತಾನೆ.

ಸಾಮೇತಿಗಳು 22:9

ದಯಾದೃಷ್ಟಿಯುಳ್ಳವನು ಆಶೀ ರ್ವಾದವನ್ನು ಹೊಂದುವನು; ತನಗಿದ್ದ ಆಹಾರದಲ್ಲಿ ಬಡವರಿಗೆ ಕೊಡುತ್ತಾನೆ.

ಸಾಮೇತಿಗಳು 25:21

ನಿನ್ನ ಶತ್ರು ಹಸಿದಿದ್ದರೆ ತಿನ್ನುವ ದಕ್ಕೆ ಅವನಿಗೆ ರೊಟ್ಟಿ ಕೊಡು; ಅವನು ಬಾಯಾರಿದ್ದರೆ ಕುಡಿಯುವದಕ್ಕೆ ನೀರು ಕೊಡು.

ಸಾಮೇತಿಗಳು 28:27

ಬಡವರಿಗೆ ದಾನಮಾಡು ವವರು ಕೊರತೆಪಡುವದಿಲ್ಲ; ತನ್ನ ಕಣ್ಣುಗಳನ್ನು ಮುಚ್ಚಿ ಕೊಳ್ಳುವವನಿಗೆ ಅನೇಕ ಶಾಪಗಳು.ದುಷ್ಟರು ಎದ್ದರೆ ಜನರು ಅಡಗಿಕೊಳ್ಳುತ್ತಾರೆ. ಅವರು ನಾಶ ವಾದರೆ ನೀತಿವಂತರು ವೃದ್ಧಿಯಾಗುತ್ತಾರೆ.

ಸಭಾಪ್ರಸಂಗಿ 11:1

ನಿನ್ನ ರೊಟ್ಟಿಯನ್ನು ನೀರಿನ ಮೇಲೆ ಹಾಕು, ಬಹಳ ದಿನಗಳ ಮೇಲೆ ಅದು ನಿನಗೆ ಸಿಗುವದು.

ಯೆಶಾಯ 16:3

ಆಲೋಚಿಸಿ ತೀರ್ಮಾನಿಸು; ಮಟ್ಟ ಮಧ್ಯಾಹ್ನದಲ್ಲಿ ನಿನ್ನ ನೆರಳನ್ನು ರಾತ್ರಿಯಂತೆ ಮಾಡು; ತಳ್ಳಿಬಿಟ್ಟವ ರನ್ನು ಅಡಗಿಸು; ಅಲೆಯುವವನನ್ನು ಬೈಲಿಗೆ ತರಬೇಡ.

ಯೆಶಾಯ 58:10

ಹಸಿದವನ ಕಡೆಗೆ ನಿನ್ನ ಮನಸ್ಸು ಹೋಗುವಂತೆ ಮಾಡಿ, ಕುಂದಿ ಹೋದವನ ಪ್ರಾಣವನ್ನು ತೃಪ್ತಿಪಡಿಸಿದರೆ ಆಗ ನಿನ್ನ ಬೆಳಕು ಕತ್ತಲೆಯಲ್ಲಿ ಉದಯಿಸುವದು. ನಿನ್ನ ಅಂಧ ಕಾರವು ಮಧ್ಯಾಹ್ನದ ಹಾಗೆ ಇರುವದು.

ಯೆಹೆಜ್ಕೇಲ 18:7

ಯಾರನ್ನೂ ಉಪದ್ರಪಡಿಸದೆ, ಸಾಲ ಮಾಡಿದವನ ಒತ್ತೆಯನ್ನು ಹಿಂದಕ್ಕೆ ಕೊಟ್ಟು, ಹಿಂಸಿಸಿ, ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಮತ್ತು ಬೆತ್ತಲೆ ಯಿರುವವನಿಗೆ ಬಟ್ಟೆಯನ್ನು ಹೊದಿಸಿ,

ಯೆಹೆಜ್ಕೇಲ 18:16

ಇಲ್ಲವೆ ಯಾರಿಗೂ ತೊಂದರೆಪಡಿಸದೆ, ಒತ್ತೆಯನ್ನು ಹಿಡಿಯದೆ, ಇಲ್ಲವೆ ಹಿಂಸೆಯಿಂದ ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಬೆತ್ತಲೆಯಾದವನಿಗೆ ವಸ್ತ್ರ ವನ್ನು ಹೊದಿಸಿ,

ದಾನಿಯೇಲ 4:27

ಆದದರಿಂದ ಓ ಅರಸನೇ, ನನ್ನ ಆಲೋಚನೆಯು ನಿನಗೆ ಸಮ್ಮತಿ ಯಾಗಿ ನಿನ್ನ ಪಾಪಗಳನ್ನು ನೀತಿಯಿಂದ ಅಳಿಸಿ ನಿನ್ನ ಅನ್ಯಾಯಗಳನ್ನು ಬಡವರಿಗೆ ದಯೆ ತೋರಿಸುವದ ರಿಂದ ಬಿಟ್ಟುಬಿಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯು ಹೆಚ್ಚಾಗಬಹುದು.

ಮತ್ತಾಯ 25:35

ಯಾಕಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವದಕ್ಕೆ ಕೊಟ್ಟಿರಿ; ನಾನು ಪರದೇಶಿಯಾಗಿ ದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಂಡಿರಿ;

ಲೂಕ 3:11

ಅವನು ಪ್ರತ್ಯುತ್ತರವಾಗಿ ಅವರಿಗೆ--ಎರಡು ಅಂಗಿಗಳುಳ್ಳವನು ಏನೂ ಇಲ್ಲದವ ನಿಗೆ ಕೊಡಲಿ; ಆಹಾರವುಳ್ಳವನು ಹಾಗೆಯೇ ಮಾಡಲಿ ಎಂದು ಹೇಳಿದನು.

ಲೂಕ 10:26

ಆತನು ಅವನಿಗೆ-- ನ್ಯಾಯಪ್ರಮಾಣದಲ್ಲಿ ಏನು ಬರೆದದೆ? ನೀನು ಹೇಗೆ ಓದುತ್ತೀ ಎಂದು ಕೇಳಿದನು.

ಲೂಕ 11:41

ಆದರೆ ನಿಮಗೆ ಇರುವವುಗಳಲ್ಲಿ ನೀವು ದಾನಾಕೊಡಿರಿ; ಆಗ ಇಗೋ, ನಿಮಗೆ ಎಲ್ಲವು ಗಳು ಶುದ್ಧವಾಗಿರುವವು.

ಲೂಕ 19:8

ಆಗ ಜಕ್ಕಾಯನು ನಿಂತುಕೊಂಡು ಕರ್ತನಿಗೆ--ಕರ್ತನೇ, ಇಗೋ, ನನ್ನ ಸೊತ್ತಿನಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ; ನಾನು ಯಾರಿಂದಲಾದರೂ ಸುಳ್ಳಾಗಿ ದೂರು ಹೇಳಿ ಏನಾದರೂ ತಕ್ಕೊಂಡಿದ್ದರೆ ಅವನಿಗೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ ಅಂದನು.

ಅಪೋಸ್ತಲರ ಕೃತ್ಯಗಳು 16:15

ಆಕೆಯೂ ಆಕೆಯ ಮನೆಯವರೂ ಬಾಪ್ತಿಸ್ಮ ಮಾಡಿಸಿಕೊಂಡ ಮೇಲೆ--ನಾನು ಕರ್ತನಿಗೆ ನಂಬಿಗಸ್ತಳಾದವಳೆಂದು ನೀವು ತೀರ್ಮಾನಿಸಿದರೆ ನನ್ನ ಮನೆಗೆ ಬಂದು ಇರಬೇಕು ಎಂದು ಆಕೆಯು ನಮ್ಮನ್ನು ಬೇಡಿಕೊಂಡು ಬಲವಂತಮಾಡಿದಳು.

ಅಪೋಸ್ತಲರ ಕೃತ್ಯಗಳು 16:34

ತರುವಾಯ ಅವರನ್ನು ತನ್ನ ಮನೆಗೆ ಕರಕೊಂಡು ಹೋಗಿ ಊಟಮಾಡಿಸಿ ತನ್ನ ಮನೆಯವರೆಲ್ಲರ ಸಂಗಡ ದೇವರಲ್ಲಿ ನಂಬಿಕೆಯಿಟ್ಟು ಉಲ್ಲಾಸಗೊಂಡನು.

ರೋಮಾಪುರದವರಿಗೆ 12:13

ಪರಿಶುದ್ಧರ ಕೊರತೆಯ ಪ್ರಕಾರ ಹಂಚಿರಿ; ಅತಿಥಿಸತ್ಕಾರವನ್ನು ಮಾಡಿರಿ.

ರೋಮಾಪುರದವರಿಗೆ 12:20

ಹಾಗಾದರೆ ನಿನ್ನ ವೈರಿಯು ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು. ಹೀಗೆ ಮಾಡುವದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು.ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.

2 ಕೊರಿಂಥದವರಿಗೆ 9:6

ಆದರೆ--ಸ್ವಲ್ಪವಾಗಿ ಬಿತ್ತುವವನು (ಪೈರನ್ನು) ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿಯೇ ಕೊಯ್ಯುವನು ಎಂದು ನಾನು ಹೇಳು ತ್ತೇನೆ.

1 ತಿಮೋಥೆಯ 5:10

ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡ ವಳೂ ಆಗಿರಬೇಕು; ಆಕೆಯು ಮಕ್ಕಳನ್ನು ಸಾಕಿದವಳಾ ಗಲಿ ಅತಿಥಿಸತ್ಕಾರವನ್ನು ಮಾಡಿದವಳಾಗಲಿ ಪರಿಶುದ್ಧರ ಪಾದಗಳನ್ನು ತೊಳೆದವಳಾಗಲಿ ಸಂಕಟದಲ್ಲಿ ಬಿದ್ದವರಿಗೆ ಸಹಾಯ ಮಾಡಿದವಳಾಗಲಿ ಎಲ್ಲಾ ಸತ್ಕಾರ್ಯಗಳಲಿ ಆಸಕ್ತಿಯುಳ್ಳವಳಾಗಲಿ ಆಗಿರ

ಫಿಲೇಮೋನ 1:7

ಸಹೋದರನೇ, ನಿನ್ನ ಮೂಲಕ ಪರಿಶುದ್ಧರ ಹೃದಯಗಳಿಗೆ ಉತ್ತೇಜನವಾದದರಿಂದ ನಿನ್ನ ಪ್ರೀತಿಯ ನಿಮಿತ್ತ ನನಗೆ ಬಹಳ ಸಂತೋಷವೂ ಆದರಣೆಯೂ ಉಂಟಾದವು.

ಹೆಬ್ರಿಯರಿಗೆ 13:2

ಪರರಿಗೆ ಸತ್ಕಾರ ಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೂತರನ್ನು ಸತ್ಕರಿಸಿದ್ದಾರೆ.

ಯಾಕೋಬ 2:15

ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದಿರುವಾಗ

1 ಯೋಹಾನ 3:17

ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದು ಹೇಗೆ?

Interlinear

Choose Theme