Home Bibles ನ್ಯಾಯಾಧಿಪತಿಗಳು 9:2 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 9:2 · ಕನ್ನಡ ಬೈಬಲ್

ನೀವು ದಯಮಾಡಿ ಶೆಕೆಮಿನ ಜನರೆಲ್ಲರು ಕೇಳುವ ಹಾಗೆ ಮಾತನಾಡ ಬೇಕಾದದ್ದೇನಂದರೆ -- ಯೆರುಬ್ಬಾಳನ ಮಕ್ಕಳಾದ ಎಪ್ಪತ್ತು ಮಂದಿಯು ನಿಮ್ಮನ್ನು ಆಳುವದು ಒಳ್ಳೇದೋ? ಒಬ್ಬನು ಆಳುವದು ಒಳ್ಳೇದೋ? ನಾನು ನಿಮ್ಮ ಎಲುಬೂ ನಿಮ್ಮ ಮಾಂಸವೂ ಆಗಿದ್ದೇನೆಂದು ಜ್ಞಾಪಕ ಮಾಡಿಕೊಳ್ಳಿರಿ ಅಂದನು.

Cross references

ಆದಿಕಾಂಡ 29:14

ಆಗ ಲಾಬಾನನು ಅವನಿಗೆ--ನಿಶ್ಚಯವಾಗಿ ನೀನು ನನ್ನ ಎಲುಬೂ ಮಾಂಸವೂ ಆಗಿದ್ದೀ ಅಂದನು. ಇದಲ್ಲದೆ ಯಾಕೋಬನು ಅವನ ಸಂಗಡ ಒಂದು ತಿಂಗಳು ವಾಸವಾಗಿದ್ದನು.

ನ್ಯಾಯಾಧಿಪತಿಗಳು 8:30

ಗಿದ್ಯೋನ ನಿಗೆ ಅನೇಕ ಮಂದಿ ಹೆಂಡತಿಯರು ಇದ್ದದರಿಂದ ಅವನಿಗೆ ಎಪ್ಪತ್ತು ಮಂದಿ ಮಕ್ಕಳು ಹುಟ್ಟಿದರು.

2 ಸಮುವೇಲ 19:13

ಇದಲ್ಲದೆ ನೀವು ಅಮಾಸನಿಗೆ--ನೀನು ನನ್ನ ಎಲುಬೂ ನನ್ನ ಮಾಂಸವೂ ಅಲ್ಲವೋ? ನೀನು ಯೋವಾಬನಿಗೆ ಬದಲಾಗಿ ಯಾವಾಗಲೂ ನನ್ನ ಮುಂದೆ ಸೈನ್ಯದ ಪ್ರಧಾನನಾಗಿರದೆ ಹೋದರೆ ದೇವರು ನನಗೆ ಹಾಗೆಯೇ ಮಾಡಲಿ ಎಂದು ಹೇಳಿರಿ ಅಂದನು.

1 ದಿನವೃತ್ತಾಂತ 11:1

ಇಸ್ರಾಯೇಲ್ಯರೆಲ್ಲರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಕೂಡಿಬಂದು ಹೇಳಿ ದ್ದೇನಂದರೆ--ಇಗೋ, ನಾವು ನಿನ್ನ ಎಲುಬೂ ನಿನ್ನ ಮಾಂಸವೂ ಆಗಿದ್ದೇವೆ.

ಎಫೆಸದವರಿಗೆ 5:30

ನಾವು ಆತನ ದೇಹದ ಅಂಗಗಳೂ ಮಾಂಸವೂ ಎಲುಬುಗಳೂ ಆಗಿದ್ದೇವೆ.

ಹೆಬ್ರಿಯರಿಗೆ 2:14

ಇದಲ್ಲದೆ ಮಕ್ಕಳು ರಕ್ತಮಾಂಸಗಳಲ್ಲಿ ಪಾಲುಗಾರರಾದದರಿಂದ ಆತನು ಸಹ ಅವರಂತೆಯೇ ಆದನು; ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶ ಮಾಡುವದಕ್ಕೂ

Interlinear

Choose Theme