Home Bibles ಯೆಶಾಯ 52:12 · ಕನ್ನಡ ಬೈಬಲ್
ಯೆಶಾಯ 52:12 · ಕನ್ನಡ ಬೈಬಲ್

ನೀವು ತ್ವರೆಯಾಗಿ ಹೋಗುವದಿಲ್ಲ; ಇಲ್ಲವೆ ಹಾರುವದ ರಿಂದಲೂ ಹೋಗುವದಿಲ್ಲ; ಯಾಕಂದರೆ ಕರ್ತನೇ ನಿಮ್ಮ ಮುಂದೆ ಹೋಗುವನು; ಇಸ್ರಾಯೇಲಿನ ದೇವರು ನಿಮ್ಮ ಬಹುಮಾನವಾಗಿರುವನು.

Cross references

ನಿರ್ಗಮಕಾಂಡ 12:11

ನೀವು ಅದನ್ನು ತಿನ್ನತಕ್ಕ ರೀತಿ ಇದೇ: ನೀವು ನಿಮ್ಮ ನಡುಕಟ್ಟಿಕೊಂಡು, ಕೆರ ಮೆಟ್ಟಿಕೊಂಡು, ಕೋಲನ್ನು ಹಿಡಿದುಕೊಂಡು, ತ್ವರೆಯಾಗಿ ಅದನ್ನು ತಿನ್ನಬೇಕು. ಅದು ಕರ್ತನ ಪಸ್ಕವಾಗಿದೆ.

ನಿರ್ಗಮಕಾಂಡ 12:33

ಇದಲ್ಲದೆ ಐಗುಪ್ತ್ಯರು--ನಾವೆಲ್ಲರೂ ಸಾಯುತ್ತೇವೆಂದು ಹೇಳಿ ಅವರನ್ನು ತ್ವರೆಯಾಗಿ ದೇಶದೊಳಗಿಂದ ಕಳುಹಿಸಿ ಬಿಡುವ ಹಾಗೆ ಜನರನ್ನು ಒತ್ತಾಯ ಮಾಡಿದರು.

ನಿರ್ಗಮಕಾಂಡ 12:39

ಆಗ ಅವರು ಐಗುಪ್ತದಿಂದ ತಂದಿದ್ದ ನಾದಿದ ಹಿಟ್ಟು ಇನ್ನೂ ಹುಳಿ ಯಾಗದ ಕಾರಣ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿ ಗಳನ್ನು ಮಾಡಿದರು; ಯಾಕಂದರೆ ಅವರನ್ನು ಅಲ್ಲಿ ನಿಲ್ಲಗೊಡದೆ ಐಗುಪ್ತದಿಂದ ಓಡಿಸಿಬಿಟ್ಟಿದ್ದರು. ಅವರು ತಮಗಾಗಿ ಯಾವ ಆಹಾರವನ್ನು ಸಿದ್ಧಪಡಿಸಿಕೊಂಡಿ ರಲಿಲ್ಲ.

ನಿರ್ಗಮಕಾಂಡ 13:21

ಇದಲ್ಲದೆ ಅವರು ಹಗಲಿರುಳು ಪ್ರಯಾಣ ಮಾಡುವ ಹಾಗೆ ಕರ್ತನು ಹಗಲಲ್ಲಿ ಅವರಿಗೆ ದಾರಿ ತೋರಿಸುವದಕ್ಕೆ ಮೇಘಸ್ತಂಭದಲ್ಲಿಯೂ ರಾತ್ರಿಯಲ್ಲಿ ಅವರಿಗೆ ಬೆಳಕು ಕೊಡುವದಕ್ಕೆ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ಹೋದನು.ಆತನು ಹಗಲಲ್ಲಿ ಮೇಘಸ್ತಂಭವನ್ನೂ ರಾತ್ರಿಯಲ್ಲಿ ಅಗ್ನಿಸ್ತಂಭವನ್ನೂ ಜನರ ಎದುರಿನಿಂದ ತೆಗೆದು ಬಿಡಲಿಲ್ಲ.

ನಿರ್ಗಮಕಾಂಡ 14:8

ಐಗುಪ್ತದ ಅರಸನಾದ ಫರೋಹನ ಹೃದಯವನ್ನು ಕರ್ತನು ಕಠಿಣ ಮಾಡಿದ್ದರಿಂದ ಅವನು ಇಸ್ರಾಯೇಲ್‌ ಮಕ್ಕಳನ್ನು ಹಿಂದಟ್ಟಿದನು. ಆದರೆ ಇಸ್ರಾಯೇಲ್‌ ಮಕ್ಕಳು ಧೈರ್ಯ ದಿಂದ ಹೊರಗೆ ಹೋದರು.

ನಿರ್ಗಮಕಾಂಡ 14:19

ಆಗ ಇಸ್ರಾಯೇಲ್‌ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದೆ ಬಂದನು. ಅವರ ಮುಂದೆ ಇದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು.

ಅಂಕೆಗಳ ಪುಸ್ತಕ 10:25

ದಾನನ ಮಕ್ಕಳ ಪಾಳೆಯದ ಧ್ವಜವು ಸಮಸ್ತ ಪಾಳೆಯಗಳ ಹಿಂದೆ ಅವರ ಸೈನ್ಯಗಳ ಪ್ರಕಾರ ಹೊರಟಿತು. ಅವನ ಸೈನ್ಯದ ಮೇಲೆ ಅವ್ಮೆಾಷದ್ದೈಯನ ಮಗನಾದ ಅಹೀಗೆಜರನು ಇದ್ದನು.

ದ್ವಿತೀಯೋಪದೇಶಕಾಂಡ 20:4

ಯಾಕಂದರೆ ನಿಮ್ಮ ಶತ್ರುಗಳ ವಿರೋಧವಾಗಿ ನಿಮಗೋಸ್ಕರ ಯುದ್ಧಮಾಡಿ ನಿಮ್ಮನ್ನು ರಕ್ಷಿಸುವದಕ್ಕೆ ನಿಮ್ಮ ದೇವರಾದ ಕರ್ತನೇ ನಿಮ್ಮ ಸಂಗಡ ಹೋಗುತ್ತಾನೆ ಎಂದು ಹೇಳಬೇಕು.

ಯೆಹೋಶುವ 4:11

ಜನರೆಲ್ಲರೂ ದಾಟಿದ ಮೇಲೆ ಕರ್ತನ ಮಂಜೂಷವೂ ಯಾಜಕರೂ ಜನರ ಎದುರಿನಲ್ಲಿ ದಾಟಿದರು.

ನ್ಯಾಯಾಧಿಪತಿಗಳು 4:14

ದೆಬೋರಳು ಬಾರಾಕನಿಗೆ--ನೀನು ಏಳು; ಕರ್ತನು ಸೀಸೆರನನ್ನು ನಿನ್ನ ಕೈಗೆ ಒಪ್ಪಿಸಿಕೊಡುವ ದಿನವು ಇದೇ; ಕರ್ತನು ನಿನ್ನ ಮುಂದೆ ಹೊರಡಲಿಲ್ಲವೋ ಅಂದಳು. ಹೀಗೆ ಬಾರಾಕನು ತನ್ನ ಹಿಂದೆ ಹತ್ತು ಸಾವಿರ ಜನರನ್ನು ತೆಗೆದುಕೊಂಡು ತಾಬೋರ್‌ ಬೆಟ್ಟ ದಿಂದ ಇಳಿದನು.

1 ದಿನವೃತ್ತಾಂತ 14:15

ಹಿಪ್ಪಲಿ ಮರಗಳ ತುದಿಗಳಲ್ಲಿ ನಡೆದು ಬರುವ ಶಬ್ದವನ್ನು ನೀನು ಕೇಳಿದಾಗಲೇ ಯುದ್ಧಕ್ಕೆ ಹೊರಟುಹೋಗು; ಯಾಕಂದರೆ ಫಿಲಿಷ್ಟಿಯರ ದಂಡನ್ನು ಹೊಡೆಯಲು ದೇವರು ನಿನ್ನ ಮುಂದಾಗಿ ಹೊರಟಿದ್ದಾನೆ ಅಂದನು.

ಯೆಶಾಯ 28:16

ಆದದರಿಂದ ಕರ್ತನಾದ ದೇವರು ಹೀಗೆ ಹೇಳುತ್ತಾನೆ--ಇಗೋ, ಪರೀಕ್ಷಿತವಾಗಿಯೂ ಅಮೂಲ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಆಸ್ತಿವಾರವನ್ನಾಗಿ ಇಡು ತ್ತೇನೆ; ವಿಶ್ವಾಸವಿಡುವವನು ಆತುರಪಡನು (ಆಶಾ ಭಂಗ ಪಡುವದಿಲ್ಲ).

ಯೆಶಾಯ 45:2

ನಾನು ನಿನ್ನ ಮುಂದೆ ಹೋಗಿ ಡೊಂಕಾದ ಸ್ಥಳಗಳನ್ನು ಸಮಮಾಡಿ, ಹಿತ್ತಾ ಳೆಯ ಕದಗಳನ್ನು ಒಡೆದು ಕಬ್ಬಿಣದ ಅಗುಳಿಗಳನ್ನು ಮುರಿದು ಬಿಡುವೆನು.

ಯೆಶಾಯ 51:14

ಸೆರೆಯವನು ತಾನು ಕುಣಿಯಲ್ಲಿ ಸಾಯದಂತೆಯೂ ಇಲ್ಲವೆ ತನಗೆ ಆಹಾರದ ಕೊರತೆ ಇರದಂತೆಯೂ ತಾನು ಬಿಡುಗಡೆ ಹೊಂದುವಂತೆಯೂ ಆತುರಪಡುತ್ತಾನೆ.

ಯೆಶಾಯ 58:8

ಹೀಗಾದರೆ ನಿನ್ನ ಬೆಳಕು ಉದಯದಂತೆ ಪ್ರತ್ಯಕ್ಷವಾಗುವದು. ನಿನ್ನ ಕ್ಷೇಮವು ಬೇಗನೆ ಚಿಗುರು ವದು. ನಿನ್ನ ನೀತಿಯು ನಿನಗೆ ಮುಂಬಲವಾಗಿ ಮುಂದ ರಿಯುವದು. ಕರ್ತನ ಮಹಿಮೆಯು ನಿನಗೆ ಹಿಂಬಲ ವಾಗಿರುವದು.

ಮೀಕ 2:13

ಒಡೆಯುವವನು ಅವರ ಮುಂದೆ ಬಂದಿದ್ದಾನೆ; ಅವರು ಬಾಗಲನ್ನು ಒಡೆದು ಅದರಿಂದ ಹಾದುಹೋಗಿದ್ದಾರೆ; ಅವರ ಅರಸನು ಅವರ ಮುಂದೆ ಹಾದುಹೋಗುತ್ತಾನೆ; ಕರ್ತನು ಅವರಿಗೆ ಮುಂದಾಗಿರುವನು.

Interlinear

Choose Theme