ನಿರ್ಗಮಕಾಂಡ 12:39 · ಕನ್ನಡ ಬೈಬಲ್
ಆಗ ಅವರು ಐಗುಪ್ತದಿಂದ ತಂದಿದ್ದ ನಾದಿದ ಹಿಟ್ಟು ಇನ್ನೂ ಹುಳಿ ಯಾಗದ ಕಾರಣ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿ ಗಳನ್ನು ಮಾಡಿದರು; ಯಾಕಂದರೆ ಅವರನ್ನು ಅಲ್ಲಿ ನಿಲ್ಲಗೊಡದೆ ಐಗುಪ್ತದಿಂದ ಓಡಿಸಿಬಿಟ್ಟಿದ್ದರು. ಅವರು ತಮಗಾಗಿ ಯಾವ ಆಹಾರವನ್ನು ಸಿದ್ಧಪಡಿಸಿಕೊಂಡಿ ರಲಿಲ್ಲ.
Cross references
ನಿರ್ಗಮಕಾಂಡ 6:1
ಕರ್ತನು ಮೋಶೆಗೆ--ನಾನು ಫರೋಹ ನಿಗೆ ಮಾಡುವದನ್ನು ಈಗ ನೀನು ನೋಡುವಿ. ಅವನು ಬಲವಾದ ಹಸ್ತದಿಂದ ಅವರನ್ನು ಹೋಗಗೊಡಿಸಿ ಬಲವಾದ ಹಸ್ತದಿಂದ ಅವನು ಅವ ರನ್ನು ತನ್ನ ದೇಶದೊಳಗಿಂದ ಓಡಿಸುವನು ಅಂದನು.
ನಿರ್ಗಮಕಾಂಡ 11:1
ಆದರೆ ಕರ್ತನು ಮೋಶೆಗೆ--ಇನ್ನೊಂದು ಬಾಧೆಯನ್ನು ಫರೋಹನ ಮೇಲೆಯೂ ಐಗುಪ್ತದ ಮೇಲೆಯೂ ಬರಮಾಡುವೆನು. ಅದಾದ ಮೇಲೆ ಅವನು ನಿಮ್ಮನ್ನು ಕಳುಹಿಸುವನು; ಇಲ್ಲಿಂದ ನಿಮ್ಮನ್ನು ನಿಶ್ಚಯವಾಗಿ ಬಲವಂತದಿಂದ ಎಲ್ಲವನ್ನೂ ಕಳುಹಿಸಿಬಿಡುವನು.
ನಿರ್ಗಮಕಾಂಡ 12:31
ಫರೋಹನು ರಾತ್ರಿಯಲ್ಲಿ ಮೋಶೆ ಆರೋನರನ್ನು ಕರೆಯಿಸಿ ಅವರಿಗೆ--ನೀವು ಎದ್ದು ನನ್ನ ಜನರೊ ಳಗಿಂದ ಹೊರಟು ಹೋಗಿರಿ; ನೀವು ಹೇಳಿದ ಹಾಗೆಯೇ ಕರ್ತನನ್ನು ಸೇವಿಸುವದಕ್ಕೆ ನೀವೂ ಇಸ್ರಾಯೇಲ್ ಮಕ್ಕಳೂ ಹೋಗಿಬಿಡಿರಿ.