Home Bibles ☰ Books ಯೆಶಾಯ 30:24 · ಕನ್ನಡ ಬೈಬಲ್
ಯೆಶಾಯ 30:24 · ಕನ್ನಡ ಬೈಬಲ್

ಹೊಲ ಉಳುವ ಎತ್ತುಗಳು, ಪ್ರಾಯದ ಕತ್ತೆಗಳು, ಮರದಿಂದಲೂ ಕವೇ ಕೋಲಿನಿಂದಲೂ ತೂರಿದ ಮೇವನ್ನು ತಿನ್ನುವವು.

Cross references

ಆದಿಕಾಂಡ 45:6

ಈ ಎರಡು ವರುಷಗಳ ವರೆಗೆ ಭೂಮಿಯಲ್ಲಿ ಕ್ಷಾಮವಿತ್ತು. ಇದಲ್ಲದೆ ಇನ್ನೂ ಐದು ವರುಷಗಳ ವರೆಗೆ ಬಿತ್ತುವದೂ ಕೊಯ್ಯುವದೂ ಇರುವದಿಲ್ಲ.

ನಿರ್ಗಮಕಾಂಡ 34:21

ಆರು ದಿನಗಳು ಕೆಲಸಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಬೇಕು. ಬಿತ್ತುವ ಕಾಲದಲ್ಲಿಯೂ ಕೊಯ್ಯುವ ಕಾಲದಲ್ಲಿಯೂ (ಏಳನೆಯ ದಿನದಲ್ಲಿ) ವಿಶ್ರಮಿಸಿಕೊಳ್ಳಬೇಕು.

ದ್ವಿತೀಯೋಪದೇಶಕಾಂಡ 21:4

ಆ ಮೇಲೆ ಆ ಊರಿನ ಹಿರಿಯರು ಆ ಮಣಕವನ್ನು ನಿತ್ಯ ಹರಿಯುವ ಹಳ್ಳದ ಬಳಿಗೆ ಬೇಸಾಯವಾಗದಂಥ, ಬೀಜಹಾಕದಂಥ, ಸ್ಥಳಕ್ಕೆ ತಕ್ಕೊಂಡು ಹೋಗಿ ಅಲ್ಲಿ ಹಳ್ಳದಲ್ಲಿ ಮಣಕದ ಕುತ್ತಿಗೆಯನ್ನು ಕೊಯ್ಯಬೇಕು.

ದ್ವಿತೀಯೋಪದೇಶಕಾಂಡ 25:4

ಕಣತುಳಿಯುವಾಗ ಎತ್ತಿನ ಬಾಯಿ ಕಟ್ಟಬಾರದು.

1 ಸಮುವೇಲ 8:12

ಕೆಲ ವರು ಅವನ ರಥಗಳ ಮುಂದೆ ಓಡುವರು. ಸಾವಿರ ಜನಕ್ಕೆ ಅಧಿಪತಿಗಳಾಗಿಯೂ ಐವತ್ತು ಜನಕ್ಕೆ ಅಧಿಪತಿ ಗಳಾಗಿಯೂ ತನ್ನ ಭೂಮಿಯನ್ನು ಉಳುವವರಾ ಗಿಯೂ ತನ್ನ ಪೈರನ್ನು ಕೊಯ್ಯುವವರಾಗಿಯೂ ತನ್ನ ಯುದ್ಧದ ಆಯುಧಗಳನ್ನು ತನ್ನ ರಥದ ಸಾಮಾನು ಗಳನ್ನು ಮಾಡುವವರಾಗಿಯೂ ನೇಮಿಸುವನು.

ಮತ್ತಾಯ 3:12

ಒನೆಯುವ ಮೊರವನ್ನು ಆತನು ತನ್ನ ಕೈಯಲ್ಲಿ ಹಿಡಿದಿದ್ದಾನೆ; ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ತನ್ನ ಗೋಧಿಯನ್ನು ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಟ್ಟುಬಿಡುವನು ಎಂದು ಹೇಳಿದನು.

ಲೂಕ 3:17

ಆತನ ಮೊರವು ಆತನ ಕೈಯಲ್ಲಿದೆ. ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ಗೋದಿಯನ್ನು ತನ್ನ ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಡುವನು ಎಂದು ಹೇಳಿದನು.

1 ಕೊರಿಂಥದವರಿಗೆ 9:9

ಕಣತುಳಿಯುವ ಎತ್ತಿನ ಬಾಯನ್ನು ನೀನು ಕಟ್ಟಬಾರದು ಎಂದು ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದದೆ. ದೇವರು ಚಿಂತಿಸು ವದು ಎತ್ತುಗಳಿಗಾಗಿಯೋ?

Interlinear

Choose Theme