Cross references
ಸಾಮೇತಿಗಳು 12:10
ನೀತಿವಂತನು ತನ್ನ ಪಶುವಿನ ಪ್ರಾಣವನ್ನು ರಕ್ಷಿಸುತ್ತಾನೆ. ಆದರೆ ದುಷ್ಟರ ಅಂತಃಕರುಣೆಯು ಕ್ರೂರತನವೇ.
ಯೆಶಾಯ 28:27
ಅಗಸೆಯನ್ನು ತುಳಿಯುವ ಯಂತ್ರದಿಂದ ತುಳಿಯುವದಿಲ್ಲ. ಇಲ್ಲವೆ ಜೀರಿಗೆಯ ಮೇಲೆ ಗಾಡಿಯ ಚಕ್ರದಿಂದ (ಕಣದ ಗುಂಡಿನಿಂದ) ತಿರುಗಿಸುವದಿಲ್ಲ. ಆದರೆ ಅಗಸೆಯು ಕೋಲಿನಿಂದಲೂ ಜೀರಿಗೆಯು ದೊಣ್ಣೆಯಿಂದಲೂ ಒಡೆಯಲ್ಪಡುವದು.
ಹೊಶೇಯ 10:11
ಎಫ್ರಾ ಯಾಮು ಹತೋಟಿಗೆ ಬಂದು ತೆನೆಹುಲ್ಲನ್ನು ತುಳಿ ಯುವ ಕಡಸಾಗಿದೆ; ತುಳಿಯುವದನ್ನು ಪ್ರೀತಿಮಾಡು ತ್ತದೆ; ಆದರೆ ನಾನು ಅದರ ಸೌಂದರ್ಯದ ಕುತ್ತಿಗೆಯ ಮೇಲೆ ದಾಟಿಹೋದೆನು. ಎಫ್ರಾಯಾಮು ಸವಾರಿಮಾಡುವ ಹಾಗೆ ನಾನು ಮಾಡುವೆನು; ಯೆಹೂದ ಉಳುವನು, ಯಾಕೋಬನು ಅವನ ಹೆಂಟೆಗಳನ್ನು ಒಡೆಯುವನು.
1 ಕೊರಿಂಥದವರಿಗೆ 9:9
ಕಣತುಳಿಯುವ ಎತ್ತಿನ ಬಾಯನ್ನು ನೀನು ಕಟ್ಟಬಾರದು ಎಂದು ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದದೆ. ದೇವರು ಚಿಂತಿಸು ವದು ಎತ್ತುಗಳಿಗಾಗಿಯೋ?
1 ತಿಮೋಥೆಯ 5:17
ಚೆನ್ನಾಗಿ ಅಧಿಕಾರ ನಡಿಸುವ ಹಿರಿಯರನ್ನು, ಅವ ರೊಳಗೆ ವಿಶೇಷವಾಗಿ ವಾಕ್ಯದಲ್ಲಿಯೂ ಬೋಧನೆ ಯಲ್ಲಿಯೂ ಕಷ್ಟಪಡುವವರನ್ನು ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು.