Home Bibles ☰ Books ಹೊಶೇಯ 4:10 · ಕನ್ನಡ ಬೈಬಲ್
ಹೊಶೇಯ 4:10 · ಕನ್ನಡ ಬೈಬಲ್

ಅವರು ತಿಂದರೂ ಸಾಕಾಗುವದಿಲ್ಲ; ಅವರು ವ್ಯಭಿಚಾರ ಮಾಡಿದರೂ ಅಭಿವೃದ್ಧಿಯಾಗುವದಿಲ್ಲ; ಯಾಕಂದರೆ ಅವರು ಕರ್ತನ ಕಡೆಗೆ ಗಮನಿಸುವದನ್ನು ಬಿಟ್ಟುಬಿಟ್ಟಿದ್ದಾರೆ.

Cross references

ಲೇವ್ಯಕಾಂಡ 26:26

ನಾನು ನಿಮ್ಮ ಅನ್ನಾಧಾರವನ್ನು ಮುರಿದುಹಾಕಿ ದಾಗ ಹತ್ತು ಸ್ತ್ರೀಯರು ನಿಮ್ಮ ರೊಟ್ಟಿಯನ್ನು ಒಂದೇ ಒಲೆಯಲ್ಲಿ ಸುಟ್ಟು ತೂಕದ ಪ್ರಕಾರ ನಿಮಗೆ ರೊಟ್ಟಿಯನ್ನು ಕೊಡುವರು. ನೀವು ಅದನ್ನು ತಿನ್ನುವಿರಿ; ನಿಮಗೆ ತೃಪ್ತಿಯಾಗುವದಿಲ್ಲ.

2 ದಿನವೃತ್ತಾಂತ 24:17

ಆದರೆ ಯೆಹೋಯಾದನು ಸತ್ತತರುವಾಯ ಯೆಹೂದದ ಪ್ರಧಾನರು ಬಂದು ಅರಸನಿಗೆ ಅಡ್ಡ ಬಿದ್ದರು. ಆಗ ಅರಸನು ಅವರ ಮಾತನ್ನು ಕೇಳಿದನು.

ಕೀರ್ತನೆಗಳು 36:3

ಅವನ ಬಾಯಿಯ ಮಾತುಗಳು ಅಕ್ರಮವೂ ಮೋಸವೂ ಆಗಿವೆ; ಬುದ್ಧಿ ಯಿಂದ ನಡೆಯುವದನ್ನೂ ಒಳ್ಳೇದು ಮಾಡುವದನ್ನೂ ಬಿಟ್ಟಿದ್ದಾನೆ.

ಕೀರ್ತನೆಗಳು 125:5

ಆದರೆ ತಮ್ಮ ಡೊಂಕು ಮಾರ್ಗಗಳಲ್ಲಿ ತಿರುಗುವವರನ್ನು ದುಷ್ಟತನ ಮಾಡುವವರ ಸಂಗಡ ಕರ್ತನು ಹೋಗ ಮಾಡುವನು. ಇಸ್ರಾಯೇಲಿನ ಮೇಲೆ ಸಮಾಧಾನ ವಿರುವದು.

ಸಾಮೇತಿಗಳು 13:25

ತನಗೆ ತೃಪ್ತಿಯಾಗುವ ವರೆಗೆ ನೀತಿವಂತನು ತಿನ್ನುತ್ತಾನೆ; ದುಷ್ಟರ ಹೊಟ್ಟೆಗೆ ಕೊರತೆಯಾಗುವದು.

ಯೆಶಾಯ 65:13

ಹೀಗಿರುವದರಿಂದ ದೇವರಾದ ಕರ್ತನು ಹೇಳು ವದೇನಂದರೆ--ಇಗೋ, ನನ್ನ ಸೇವಕರು ತಿನ್ನುವರು ಆದರೆ ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿರುವಿರಿ; ಇಗೋ, ನನ್ನ ಸೇವಕರು ಸಂತೋಷಪಡುವರು; ಆದರೆ ನೀವು ನಾಚಿಕೆಪಡುವಿರಿ;

ಯೆರೆಮಿಯ 9:12

ಆತನು ಭೂಮಿಯನ್ನು ತನ್ನ ಶಕ್ತಿಯಿಂದ ಉಂಟು ಮಾಡಿದನು, ಭೂಲೋಕವನ್ನು ತನ್ನ ಜ್ಞಾನದಿಂದ ಸ್ಥಾಪಿಸಿದನು, ಆಕಾಶಗಳನ್ನು ತನ್ನ ವಿವೇಕದಿಂದ ಹಾಸಿ ದನು;

ಯೆರೆಮಿಯ 34:15

ಬೆಳಿಗ್ಗೆ ಎದ್ದು ನನ್ನ ಸಕಲ ಸೇವಕರಾದ ಪ್ರವಾದಿಗಳನ್ನು ಸಹ ನಿಮ್ಮ ಬಳಿಗೆ ಕಳುಹಿಸಿ--ಒಬ್ಬೊಬ್ಬನು ತನ್ನ ತನ್ನ ಕೆಟ್ಟ ಮಾರ್ಗವನ್ನು ಬಿಟ್ಟು ತಿರುಗಿ ನಿಮ್ಮ ಕ್ರಿಯೆಗಳನ್ನು ಸರಿಮಾಡಿ ಬೇರೆ ದೇವರುಗಳನ್ನು ಸೇವಿಸದೆ ಅವುಗಳನ್ನು ಹಿಂಬಾಲಿಸದೆ ಇರ್ರಿ; ಆಗ ನಾನು ನಿಮಗೂ ನಿಮ್ಮ ತಂದೆಗಳಿಗೂ ಕೊಟ್ಟ ದೇಶದಲ್ಲಿ ವಾಸವಾಗಿರುವಿರಿ ಎಂದು ನಿಮಗೆ ಹೇಳಿಸಿದರೂ ನೀವು ಕಿವಿಗೊಡಲಿಲ್ಲ ನನ್ನ ಮಾತನ್ನೂ ಕೇಳಲಿಲ್ಲ.

ಯೆಹೆಜ್ಕೇಲ 18:24

ಆದರೆ ನೀತಿ ವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡಿ ದುಷ್ಟನು ಮಾಡುವ ಎಲ್ಲಾ ಅಸಹ್ಯವಾದವುಗಳ ಹಾಗೆ ಮಾಡಿದರೆ ಅವನು ಬದುಕುವನೇ? ಅವನು ಮಾಡಿ ರುವ ಎಲ್ಲಾ ನೀತಿಯು ಜ್ಞಾಪಕಮಾಡಲ್ಪಡುವದಿಲ್ಲ; ಅವನು ಮಾಡಿರುವ ಅಪರಾಧದಿಂದಲೂ ಪಾಪ ದಿಂದಲೂ ಅವುಗಳಲ್ಲಿ ಸಾಯುವನು.

ಹೊಶೇಯ 4:14

ನಿಮ್ಮ ಕುಮಾರ್ತೆಯರು ವ್ಯಭಿಚಾರ ಮಾಡುವಾಗಲೂ ನಿಮ್ಮ ಹೆಂಡತಿಯರು ವ್ಯಭಿಚಾರ ಮಾಡುವಾಗಲೂ ನಾನು ಶಿಕ್ಷಿಸುವದಿಲ್ಲ. ಯಾಕಂದರೆ ಸೂಳೆಯರ ಸಂಗಡ ತಮ್ಮನ್ನು ಬೇರ್ಪಡಿಸಿಕೊಂಡಿ ದ್ದಾರೆ; ಸೂಳೆಯರ ಸಂಗಡ ಬಲಿಅರ್ಪಿಸುತ್ತಾರೆ; ಆದದರಿಂದ ವಿವೇಕವಿಲ್ಲದ ಜನರು ಬಿದ್ದು ಹೋಗು ವರು.

ಹೊಶೇಯ 9:11

ಎಫ್ರಾಯಾಮ್ಯರ ಘನತೆಯು ಹಾರಿಹೋಗುವ ಪಕ್ಷಿಯ ಹಾಗೆ ಇದೆ. ಜನ್ಮವಾಗಲಿ, ಗರ್ಭಧರಿಸುವದಾಗಲಿ ಉತ್ಪತ್ತಿಯಾಗಲಿ ಅವರಿಗೆ ಇರು ವದಿಲ್ಲ.

ಮೀಕ 6:14

ನೀನು ಉಂಡು ತೃಪ್ತಿಯಾಗದೆ ಇರುವಿ; ನಿನ್ನೊಳಗೆ ನಿನ್ನ ಬೀಳ್ವಿಕೆಯು ಇರುವದು; ನೀನು ಹಿಡಿದು ತಪ್ಪಿಸದೆ ಇರುವಿ; ನೀನು ತಪ್ಪಿಸುವಂಥದ್ದನ್ನು ನಾನು ಕತ್ತಿಗೆ ಒಪ್ಪಿಸುವೆನು.

Interlinear

Choose Theme