Home Bibles ಯೆರೆಮಿಯ 34:15 · ಕನ್ನಡ ಬೈಬಲ್
ಯೆರೆಮಿಯ 34:15 · ಕನ್ನಡ ಬೈಬಲ್

ಬೆಳಿಗ್ಗೆ ಎದ್ದು ನನ್ನ ಸಕಲ ಸೇವಕರಾದ ಪ್ರವಾದಿಗಳನ್ನು ಸಹ ನಿಮ್ಮ ಬಳಿಗೆ ಕಳುಹಿಸಿ--ಒಬ್ಬೊಬ್ಬನು ತನ್ನ ತನ್ನ ಕೆಟ್ಟ ಮಾರ್ಗವನ್ನು ಬಿಟ್ಟು ತಿರುಗಿ ನಿಮ್ಮ ಕ್ರಿಯೆಗಳನ್ನು ಸರಿಮಾಡಿ ಬೇರೆ ದೇವರುಗಳನ್ನು ಸೇವಿಸದೆ ಅವುಗಳನ್ನು ಹಿಂಬಾಲಿಸದೆ ಇರ್ರಿ; ಆಗ ನಾನು ನಿಮಗೂ ನಿಮ್ಮ ತಂದೆಗಳಿಗೂ ಕೊಟ್ಟ ದೇಶದಲ್ಲಿ ವಾಸವಾಗಿರುವಿರಿ ಎಂದು ನಿಮಗೆ ಹೇಳಿಸಿದರೂ ನೀವು ಕಿವಿಗೊಡಲಿಲ್ಲ ನನ್ನ ಮಾತನ್ನೂ ಕೇಳಲಿಲ್ಲ.

Cross references

1 ಅರಸುಗಳು 21:27

ಆದರೆ ಅಹಾಬನು ಆ ಮಾತುಗಳನ್ನು ಕೇಳಿದಾಗ ಏನಾಯಿತಂದರೆ, ಅವನು ತನ್ನ ವಸ್ತ್ರಗಳನ್ನು ಹರಿದು ತನ್ನ ಶರೀರದ ಮೇಲೆ ಗೋಣಿಯನ್ನು ಹಾಕಿಕೊಂಡು ಉಪವಾಸಮಾಡಿ ಗೋಣಿಯಲ್ಲಿ ಮಲಗಿಕೊಂಡು ಮೆಲ್ಲಗೆ ನಡೆದನು.

2 ಅರಸುಗಳು 10:30

ಕರ್ತನು ಯೇಹು ವಿಗೆ--ನೀನು ನನ್ನ ದೃಷ್ಟಿಗೆ ಸರಿಯಾದದ್ದನ್ನು ನಡಿಸಿ ನನ್ನ ಹೃದಯದಲ್ಲಿದ್ದ ಎಲ್ಲಾದರ ಪ್ರಕಾರ ಅಹಾಬನ ಮನೆಗೆ ಮಾಡಿ ಯುಕ್ತವಾದದ್ದನ್ನು ಮಾಡಿದ್ದರಿಂದ ನಿನ್ನ ಮಕ್ಕಳು ನಾಲ್ಕು ವಂಶಗಳ ವರೆಗೂ ಇಸ್ರಾಯೇ ಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು ಅಂದನು.

2 ಅರಸುಗಳು 12:2

ಅವನ ತಾಯಿಯು ಬೇರ್ಷೆಬ ಊರಿನವಳಾದ ಚಿಬ್ಯಳು. ಆದರೆ ಯಾಜಕನಾದ ಯೆಹೋಯಾ ದಾವನು ಯೆಹೋವಾಷನಿಗೆ ಬೋಧಿಸಿದ ಎಲ್ಲಾ ದಿವಸಗಳಲ್ಲಿ ಅವನು ಕರ್ತನ ದೃಷ್ಟಿಯಲ್ಲಿ ಸರಿಯಾದ ದ್ದನ್ನು ಮಾಡಿದನು.

2 ಅರಸುಗಳು 14:3

ಅವನು ಕರ್ತನ ದೃಷ್ಟಿಗೆ ಒಳ್ಳೇದನ್ನು ಮಾಡಿ ದನು; ಆದರೆ ತನ್ನ ಪಿತೃವಾದ ದಾವೀದನ ಹಾಗಲ್ಲ; ತನ್ನ ತಂದೆಯಾದ ಯೆಹೋವಾಷನು ಮಾಡಿದ ಹಾಗೆ ಎಲ್ಲವನ್ನು ಮಾಡಿದನು.

2 ಅರಸುಗಳು 23:3

ಅರಸನು ಸ್ತಂಭದ ಬಳಿಯಲ್ಲಿ ನಿಂತು ಕರ್ತನನ್ನು ಹಿಂಬಾಲಿಸು ವದಕ್ಕೂ ಆತನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆ ಗಳನ್ನೂ ಪೂರ್ಣಹೃದಯದಿಂದಲೂ ಪೂರ್ಣಪ್ರಾಣ ದಿಂದಲೂ ಕೈಕೊಳ್ಳುವದಕ್ಕೂ ಈ ಪುಸ್ತಕದಲ್ಲಿ ಬರೆದಿ ರುವ ಒಡಂಬಡಿಕೆಯ ವಾಕ್ಯಗಳನ್ನು ಸ್ಥಿರಪಡಿಸುವ ದಕ್ಕೂ ಕರ್ತನ ಮುಂದೆ ಒಡಂಬಡಿಕೆಯನ್ನು ಮಾಡಿ ದನು; ಜನರೆಲ್ಲರೂ ಒಡಂಬಡಿಕೆಗೆ ಒಪ್ಪಿದರು.

ನೆಹೆಮ್ಯ 10:29

ಇವರು ತಮ್ಮ ಸಹೋದರರಾದ ತಮ್ಮ ಮುಖ್ಯಸ್ಥರ ಸಂಗಡ ಕೂಡಿಕೊಂಡು--ದೇವರ ಸೇವಕನಾದ ಮೋಶೆಯ ಕೈಯಿಂದ ಕೊಟ್ಟ ದೇವರ ನ್ಯಾಯಪ್ರಮಾಣದಲ್ಲಿ ನಡೆಯುತ್ತೇವೆಂದೂ ಕರ್ತ ನಾದ ನಮ್ಮ ದೇವರ ಆಜ್ಞೆಗಳನ್ನೂ ಆತನ ನ್ಯಾಯ ಗಳನ್ನೂ ಆತನ ಕಟ್ಟಳೆಗಳನ್ನೂ ಎಲ್ಲವನ್ನೂ ಕೈಕೊಂಡು ಮಾಡುತ್ತೇವೆಂದೂ;

ಕೀರ್ತನೆಗಳು 76:11

ನಿಮ್ಮ ದೇವರಾದ ಕರ್ತನಿಗೆ ಪ್ರಮಾಣಮಾಡಿ ಸಲ್ಲಿಸಿರಿ; ಆತನ ಸುತ್ತಲಿರುವವ ರೆಲ್ಲರು ಭಯಪಡಿಸುವಾತನಿಗೆ ಕಾಣಿಕೆಗಳನ್ನು ತರಲಿ.ಆತನು ಪ್ರಧಾನರ ಪ್ರಾಣವನ್ನು ತೆಗೆದು ಹಾಕು ತ್ತಾನೆ; ಭೂಮಿಯ ಅರಸುಗಳಿಗೆ ಭಯಂಕರ ನಾಗಿದ್ದಾನೆ.

ಕೀರ್ತನೆಗಳು 119:106

ನಿನ್ನ ನೀತಿ ವಿಧಿಗಳನ್ನು ಅನುಸರಿಸುವೆನೆಂದು ಪ್ರಮಾಣ ಮಾಡಿದ್ದೇನೆ; ಅದನ್ನು ಈಡೇರಿಸುವೆನು.

ಯೆಶಾಯ 58:2

ಆದಾಗ್ಯೂ ಅವರು ನನ್ನನ್ನು ಪ್ರತಿನಿತ್ಯವೂ ಹುಡುಕು ತ್ತಾರೆ. ನನ್ನ ಮಾರ್ಗಗಳನ್ನು ತಿಳಿದುಕೊಳ್ಳುವದರಲ್ಲಿ ಸಂತೋಷಪಡುತ್ತಾರೆ. ತನ್ನ ದೇವರ ನ್ಯಾಯವನ್ನು ಬಿಡದೆ ನೀತಿಯನ್ನಾಚರಿಸುವ ಜನಾಂಗದ ಹಾಗೆಯೇ ನೀತಿಯುಳ್ಳ ನ್ಯಾಯಗಳನ್ನು ನನ್ನಿಂದ ಕೇಳುತ್ತಾರೆ. ದೇವರನ್ನು ಸವಿಾಪಿಸುವದರಲ್ಲಿ ಸಂತೋಷಿಸುತ್ತಾರೆ.

ಯೆರೆಮಿಯ 7:10

ಆದದರಿಂದ ಅವರ ಹೆಂಡತಿಯರನ್ನು ಬೇರೊಬ್ಬರಿಗೂ ಅವರ ಹೊಲಗಳನ್ನು ಸ್ವಾಧೀನಮಾಡಿಕೊಳ್ಳುವವರಿಗೂ ನಾನು ಕೊಡುವೆನು; ಚಿಕ್ಕವನು ಮೊದಲುಗೊಂಡು ದೊಡ್ಡವನ ತನಕ ಅವರೆಲ್ಲರು ಲೋಭಕ್ಕೆ ಒಪ್ಪಿಸಿಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕನ ವರೆಗೂ ಪ್ರತಿ ಯೊಬ್ಬನು ಮೋಸದಿಂದ ವರ್ತಿಸುತ್ತಾನೆ.

ಯೆರೆಮಿಯ 34:8

ಈ ಪ್ರಕಾರ ನಾವು ನಮ್ಮ ತಂದೆಯಾದ ರೇಕಾಬನ ಮಗನಾದ ಯೋನಾದಾಬನ ಮಾತನ್ನು ಅವನು ನಮಗೆ ಆಜ್ಞಾಪಿಸಿದ್ದೆಲ್ಲಾದರಲ್ಲಿ ನಾವೂ ನಮ್ಮ ಹೆಂಡತಿಯರೂ ಕುಮಾರ ಕುಮಾರ್ತೆಯರೂ ನಮ್ಮ ದಿನಗಳಲ್ಲೆಲ್ಲಾ ದ್ರಾಕ್ಷಾರಸ ಕುಡಿಯದ ಹಾಗೆಯೂ

ಯೆರೆಮಿಯ 34:10

ಗುಡಾರಗಳಲ್ಲಿ ವಾಸಮಾಡುತ್ತೇವೆ; ನಮ್ಮ ತಂದೆಯಾದ ಯೋನಾದಾಬನು ನಮಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಕೇಳಿ ಮಾಡಿದ್ದೇವೆ.

ಮತ್ತಾಯ 15:8

ಆದೇ ನಂದರೆ-- ಈ ಜನರು ತಮ್ಮ ಬಾಯಿಂದ ನನ್ನನ್ನು ಸಮಾಪಿಸಿ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ; ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.

Interlinear

Choose Theme