ಎಫ್ರಾ ಯಾಮು ಹತೋಟಿಗೆ ಬಂದು ತೆನೆಹುಲ್ಲನ್ನು ತುಳಿ ಯುವ ಕಡಸಾಗಿದೆ; ತುಳಿಯುವದನ್ನು ಪ್ರೀತಿಮಾಡು ತ್ತದೆ; ಆದರೆ ನಾನು ಅದರ ಸೌಂದರ್ಯದ ಕುತ್ತಿಗೆಯ ಮೇಲೆ ದಾಟಿಹೋದೆನು. ಎಫ್ರಾಯಾಮು ಸವಾರಿಮಾಡುವ ಹಾಗೆ ನಾನು ಮಾಡುವೆನು; ಯೆಹೂದ ಉಳುವನು, ಯಾಕೋಬನು ಅವನ ಹೆಂಟೆಗಳನ್ನು ಒಡೆಯುವನು.
Cross references
ಕಣತುಳಿಯುವಾಗ ಎತ್ತಿನ ಬಾಯಿ ಕಟ್ಟಬಾರದು.
ಆದದರಿಂದ ಅವನ ದೇವರಾದ ಕರ್ತನು ಅರಾಮಿನ ಅರಸನ ಕೈಯಲ್ಲಿ ಅವನನ್ನು ಒಪ್ಪಿಸಿದನು. ಅರಾಮ್ಯರು ಅವನನ್ನು ಹೊಡೆದು ಅವರಲ್ಲಿ ಅನೇಕರನ್ನು ಸೆರೆ ಯಾಗಿ ಹಿಡಿದು ದಮಸ್ಕಕ್ಕೆ ಒಯ್ದರು. ಇದಲ್ಲದೆ ಇವನು ಇಸ್ರಾಯೇಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪ ಟ್ಟದ್ದರಿಂದ ಅವನು ಇವನನ್ನು ಹೊಡೆದು ದೊಡ್ಡ ಸಂಹಾರ ಮಾಡಿದನು.
ಬಿತ್ತನೆಗಾಗಿ ಉಳುವವನು ಹಗಲೆಲ್ಲಾ ಉಳುತ್ತಿರುವನೋ? ತನ್ನ ಭೂಮಿಯ ಮಣ್ಣು ಹೆಂಟೆಯನ್ನು ತೆಗೆದು (ದಿನವೆಲ್ಲಾ) ಹೊಡೆ ಯುವನೋ?
ಬಾಣಗಳನ್ನು ಮೆರಗು ಮಾಡಿರಿ, ಡಾಲುಗಳನ್ನು ಕೂಡಿಸಿರಿ; ಕರ್ತನು ಮೇದ್ಯರ ಅರಸರ ಆತ್ಮವನ್ನು ಎಬ್ಬಿಸಿದ್ದಾನೆ; ಆತನ ಆಲೋಚನೆ ಬಾಬೆಲಿಗೆ ವಿರೋಧವಾಗಿ ಅದನ್ನು ನಾಶಮಾಡುವದಕ್ಕೆ ಇದೆ. ಇದು ಕರ್ತನ ಪ್ರತಿದಂಡ ನೆಯೂ ಆತನ ದೇವಾಲಯದ ಪ್ರತಿದಂಡನೆಯೂ ಆಗಿದೆ.
ಅವರ ತಾಯಿ ಸೂಳೆ ತನ ಮಾಡಿದ್ದಾಳೆ; ಅವರನ್ನು ಹೆತ್ತವಳು ನಾಚಿಕೆಯಿ ಲ್ಲದೆ ನಡೆದಿದ್ದಾಳೆ; ಯಾಕಂದರೆ ಅವಳು--ನನ್ನ ರೊಟ್ಟಿ ಯನ್ನೂ ನನ್ನ ನೀರನ್ನೂ ನನ್ನ ಉಣ್ಣೆನಾರು ಗಳನ್ನೂ ನನ್ನ ತೈಲವನ್ನೂ ಪಾನವನ್ನೂ ನನಗೆ ಕೊಡುವ ನನ್ನ ಪ್ರಿಯರ ಹಿಂದೆ ಹೋಗುತ್ತೇನೆಂದು ಅಂದುಕೊಂಡಿದ್ದಾಳೆ.
ತರುವಾಯ ಕರ್ತನು ನನಗೆ--ಬೇರೆ ದೇವತೆಗಳ ಕಡೆಗೆ ತಿರುಗಿಕೊಂಡು ದ್ರಾಕ್ಷೆಯ ಮದ್ಯ ಪಾತ್ರೆಗಳನ್ನು ಪ್ರೀತಿಸುವ ಇಸ್ರಾ ಯೇಲಿನ ಮಕ್ಕಳನ್ನು ಕರ್ತನು ಪ್ರೀತಿಸುವ ಪ್ರಕಾರ ಅವಳು ವ್ಯಭಿಚಾರಿಣಿಯಾಗಿದ್ದರೂ ನೀನು ಸ್ನೇಹಿತ ನಿಂದ ಪ್ರೀತಿಮಾಡಲ್ಪಟ್ಟ ಸ್ತ್ರೀಯನ್ನು ಪ್ರೀತಿಮಾಡು ಎಂದು ಹೇಳಲು
ಹಿಂಜರಿಯುವ ಕಡಸಿನ ಹಾಗೆ ಇಸ್ರಾಯೇಲು ಹಿಂಜ ರಿಯುತ್ತದೆ; ಈಗ ಕರ್ತನು ವಿಸ್ತಾರ ಸ್ಥಳದಲ್ಲಿರುವ ಕುರಿಮರಿಯ ಹಾಗೆ ಅವರನ್ನು ಮೇಯಿಸುವನು.
ಓ ಇಸ್ರಾಯೇಲೇ, ಬೇರೆ ಜನರು ಉಲ್ಲಾ ಸಿಸುವ ಪ್ರಕಾರ ಸಂತೋಷಪಡಬೇಡ; ನಿನ್ನ ದೇವರನ್ನು ನೀನು ಬಿಟ್ಟು ವ್ಯಭಿಚಾರ ಮಾಡಿದ್ದೀ, ಎಲ್ಲಾ ಧಾನ್ಯದ ಕಣಗಳಲ್ಲಿ ಕೂಲಿಯನ್ನು ಪ್ರೀತಿ ಮಾಡಿದ್ದೀ.
ನಾನು ಅವರನ್ನು ಮನುಷ್ಯನ ಸ್ನೇಹಬಂದನವೆಂಬ ಹಗ್ಗಗಳಿಂದಲೂ ಪ್ರೀತಿಯ ಬಂಧನಗಳಿಂದಲೂ ಎಳೆ ದೆನು. ಅವರ ದವಡೆಯ ಮೇಲಿನಿಂದ ನೊಗ ಎತ್ತು ವವರ ಹಾಗೆ ನಾನು ಅವರಿಗೆ ಇದ್ದೆನು. ನಾನು ಅವರಿಗೆ ತಿನ್ನುವದಕ್ಕೆ ಕೊಟ್ಟೆನು.
ಅಂಥವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿ ಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪ ಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.