Home Bibles ಹೆಬ್ರಿಯರಿಗೆ 9:1 · ಕನ್ನಡ ಬೈಬಲ್
ಹೆಬ್ರಿಯರಿಗೆ 9:1 · ಕನ್ನಡ ಬೈಬಲ್

ಹೀಗಿದ್ದರೂ ಮೊದಲನೆಯ ಒಡಂಬಡಿಕೆ ಯಲ್ಲಿ ನಿಜವಾಗಿಯೂ ದೈವಸೇವೆಯ ನಿಯಮಗಳಿದ್ದವು; ಇಹಲೋಕ ಸಂಬಂಧವಾದ ಪವಿತ್ರಸ್ಥಳವಿತ್ತು.

Cross references

ನಿರ್ಗಮಕಾಂಡ 25:8

ನಾನು ಅವರ ಮಧ್ಯದಲ್ಲಿ ವಾಸಿಸುವ ಹಾಗೆ ಅವರು ನನಗೆ ಒಂದು ಪರಿಶುದ್ಧ ಆಲಯವನ್ನು ಕಟ್ಟಬೇಕು.

ಲೇವ್ಯಕಾಂಡ 18:3

ನೀವು ವಾಸವಾಗಿದ್ದ ಐಗುಪ್ತದೇಶದ ಕೃತ್ಯಗಳಂತೆ ಮಾಡಬಾರದು; ನಾನು ನಿಮ್ಮನ್ನು ತರುವದಕ್ಕಿರುವ ಕಾನಾನ್‌ದೇಶದ ಕೃತ್ಯಗಳಂತೆ ನೀವು ಮಾಡಬಾರದು ಇಲ್ಲವೆ ನೀವು ಅವರ ನಿಯಮಗಳಿಗನುಸಾರವೂ ನಡೆ ಯಬಾರದು.

ಲೇವ್ಯಕಾಂಡ 18:30

ಆದದರಿಂದ ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆ ಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಹೊಲೆಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.

ಲೇವ್ಯಕಾಂಡ 22:9

ಆದದರಿಂದ ಅವರು ಅದನ್ನು ಅಪವಿತ್ರಪಡಿಸಿದರೆ ಅದರ ನಿಮಿತ್ತವಾಗಿ ಪಾಪವನ್ನು ಹೊತ್ತು ಸಾಯದಂತೆ ನನ್ನ ವಿಧಿಗಳನ್ನು ಕೈಕೊಳ್ಳಬೇಕು. ಅವರನ್ನು ಶುದ್ಧೀಕರಿಸುವ ಕರ್ತನು ನಾನೇ.

ಅಂಕೆಗಳ ಪುಸ್ತಕ 9:12

ಅವರು ಅದರಿಂದ ಮರು ದಿವಸಕ್ಕೆ ಏನೂ ಉಳಿಸಬಾರದು; ಅದರಲ್ಲಿ ಒಂದು ಎಲುಬನ್ನಾದರೂ ಮುರಿಯಬಾರದು; ಪಸ್ಕದ ಸಮಸ್ತ ಕಟ್ಟಳೆ ಪ್ರಕಾರವಾಗಿ ಅದನ್ನು ಆಚರಿಸಬೇಕು.

ಯೆಹೆಜ್ಕೇಲ 43:11

ಅವರು ಮಾಡಿದ್ದಕ್ಕಾಗಿ ನಾಚಿಕೆಪಟ್ಟರೆ ಮನೆಯ ರೂಪವನ್ನೂ ಆಕಾರವನ್ನೂ ಹೊರಡೋಣ ಬರೋಣಗಳನ್ನು ಅದರ ಎಲ್ಲಾ ನಿಯಮಗಳನ್ನೂ ಅದರ ಎಲ್ಲಾ ನ್ಯಾಯಪ್ರಮಾಣ ಗಳನ್ನ್ನೂ ಅವರಿಗೆ ತೋರಿಸು; ಅದರ ಎಲ್ಲಾ ನಿಯಮ ಗಳನ್ನೂ ಕೈಗೊಂಡು ಅವರು ಅವುಗಳನ್ನು ಮಾಡುವ ಹಾಗೆ ಅವರ ದೃಷ್ಟಿಯಲ್ಲಿಯೇ ಅವುಗಳನ್ನು ಬರೆ,

ಲೂಕ 1:6

ಅವರಿಬ್ಬರೂ ಕರ್ತನ ಎಲ್ಲಾ ಆಜ್ಞೆಗಳನ್ನೂ ನ್ಯಾಯವಿಧಿಗಳನ್ನು ತಪ್ಪಿಲ್ಲದೆ ಕೈಕೊಂಡು ದೇವರ ಮುಂದೆ ನೀತಿವಂತರಾಗಿದ್ದರು.

ಕೊಲೊಸ್ಸೆಯವರಿಗೆ 2:8

ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕ ಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನ ಬೋಧನೆ ಯಿಂದ ನಿಮ್ಮನ್ನು ಕೆಡಿಸಿಬಿಟ್ಟಾರು, ಎಚ್ಚರಿಕೆಯಾಗಿರ್ರಿ.

ಹೆಬ್ರಿಯರಿಗೆ 8:2

ಈತನು ಪವಿತ್ರ ಸ್ಥಾನದಲ್ಲಿ ಅಂದರೆ ಮನುಷ್ಯನಿಂದಲ್ಲ, ಕರ್ತನೇ ಹಾಕಿದ ನಿಜವಾದ ಗುಡಾರದಲ್ಲಿ ಸೇವೆ ನಡಿಸುವಾತನಾಗಿದ್ದಾನೆ.

ಹೆಬ್ರಿಯರಿಗೆ 8:7

ಆ ಮೊದಲನೆಯ ಒಡಂಬಡಿಕೆಯು ದೋಷವಿಲ್ಲ ದ್ದಾಗಿದ್ದರೆ ಎರಡನೆಯದಕ್ಕೆ ಅವಕಾಶವು ಇರುತ್ತಿರಲಿಲ್ಲ.

ಹೆಬ್ರಿಯರಿಗೆ 8:13

ಇಲ್ಲಿ ಆತನು--ಹೊಸಒಡಂಬಡಿಕೆಯೆಂದು ಹೇಳಿದ್ದರಲ್ಲಿ ಮೊದಲಿದ್ದದ್ದನ್ನು ಹಳೆಯದಾಗಿ ಮಾಡಿ ದ್ದಾನೆ. ಅದು ಹಳೇದಾಗುತ್ತಾ ಕ್ಷೀಣವಾಗಿ ಇಲ್ಲದಂತಾ ಗುವದಕ್ಕೆ ಸಿದ್ಧವಾಗಿದೆ ಎಂದು ಹೇಳುತ್ತಾನೆ.

ಹೆಬ್ರಿಯರಿಗೆ 9:10

ಅವು ಅನ್ನಪಾನಾದಿಗಳಲ್ಲಿಯೂ ವಿವಿಧ ಸ್ನಾನಗಳ ಲ್ಲಿಯೂ ಶಾರೀರಕ ನಿಯಮಗಳಲ್ಲಿಯೂ ತಿದ್ದುಪಾಟಿನ ಕಾಲದವರೆಗೆ ಮಾತ್ರ ನೇಮಕವಾಗಿದ್ದವು.

Interlinear

Choose Theme