ಅಂಕೆಗಳ ಪುಸ್ತಕ 9:12 · ಕನ್ನಡ ಬೈಬಲ್
ಅವರು ಅದರಿಂದ ಮರು ದಿವಸಕ್ಕೆ ಏನೂ ಉಳಿಸಬಾರದು; ಅದರಲ್ಲಿ ಒಂದು ಎಲುಬನ್ನಾದರೂ ಮುರಿಯಬಾರದು; ಪಸ್ಕದ ಸಮಸ್ತ ಕಟ್ಟಳೆ ಪ್ರಕಾರವಾಗಿ ಅದನ್ನು ಆಚರಿಸಬೇಕು.
Cross references
ನಿರ್ಗಮಕಾಂಡ 12:10
ಅದರಲ್ಲಿ ಬೆಳಗಿನ ವರೆಗೆ ಏನನ್ನೂ ಉಳಿಸಬಾರದು. ಬೆಳಗಿನ ವರೆಗೆ ಅದರಲ್ಲಿ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
ನಿರ್ಗಮಕಾಂಡ 12:43
ಕರ್ತನು ಮೋಶೆ ಆರೋನರಿಗೆ--ಪಸ್ಕದ ಶಾಸನವು ಇದೇ: ಅನ್ಯರಲ್ಲಿ ಯಾರೂ ಅದನ್ನು ತಿನ್ನ ಬಾರದು.
ನಿರ್ಗಮಕಾಂಡ 12:46
ಒಂದೇ ಮನೆಯಲ್ಲಿ ಅದನ್ನು ತಿನ್ನಬೇಕು. ಆ ಮಾಂಸ ದಲ್ಲಿ ಸ್ವಲ್ಪ ಅಂಶವನ್ನಾದರೂ ಮನೆಯ ಹೊರಗೆ ತೆಗೆದುಕೊಂಡು ಹೋಗಬಾರದು. ಪಶುವಿನ ಒಂದು ಎಲುಬಾದರೂ ಮುರಿಯಬಾರದು.
ಅಂಕೆಗಳ ಪುಸ್ತಕ 9:3
ಈ ತಿಂಗಳಿನ ಹದಿನಾಲ್ಕನೇ ದಿವಸದ ಸಾಯಂಕಾಲದಲ್ಲಿ ಅದನ್ನು ಅದರ ಸಮಯ ದಲ್ಲಿ ಆಚರಿಸಬೇಕು. ಅದರ ಆಜ್ಞಾವಿಧಿಗಳ ಪ್ರಕಾರ ವಾಗಿಯೂ ಎಲ್ಲಾ ನಿಯಮಗಳ ಪ್ರಕಾರವಾಗಿಯೂ ಅದನ್ನು ಆಚರಿಸಬೇಕು.
ಯೋಹಾನ 19:36
ಯಾಕಂದರೆ--ಆತನ ಒಂದು ಎಲುಬಾದರೂ ಮುರಿಯಲ್ಪಡಬಾರದು ಎಂಬ ಬರಹವು ನೆರವೇರುವಂತೆ ಇವುಗಳು ಸಂಭವಿಸಿದವು.