ಅವನು ಆಕೆಯನ್ನು ಕೈಕೊಟ್ಟು ಎಬ್ಬಿಸಿ ಪರಿಶುದ್ಧರನ್ನೂ ವಿಧವೆಯರನ್ನೂ ಕರೆದು ಜೀವಿತಳಾದ ಆಕೆಯನ್ನು ಅವರಿಗೆ ಒಪ್ಪಿಸಿದನು.
Cross references
ಯೋಸೇಫನು ಇನ್ನೂ ಜೀವದಿಂದ ಇದ್ದಾನೆ; ಅವನೇ ಐಗುಪ್ತದೇಶವನ್ನೆಲ್ಲಾ ಆಳುತಿದ್ದಾ ನೆಂದು ಅವನಿಗೆ ತಿಳಿಸಿದಾಗ ಅವನು ನಂಬದೆ ಇದ್ದದ್ದರಿಂದ ಹೃದಯವು ಕುಂದಿಹೋಯಿತು.
ಆಗ ಎಲೀಯನು ಹುಡುಗನನ್ನು ಎತ್ತಿಕೊಂಡು ಉಪ್ಪರಿಗೆ ಯಿಂದ ಕೆಳಗಿರುವ ಮನೆಗೆ ತೆಗೆದುಕೊಂಡು ಬಂದು ಅವನನ್ನು ಅವನ ತಾಯಿಗೆ ಕೊಟ್ಟನು. ಅವನುನೋಡು, ನಿನ್ನ ಮಗನು ಜೀವದಿಂದಿದ್ದಾನೆಂದು ಎಲೀ ಯನು ಹೇಳಿದನು.ಆಗ ಸ್ತ್ರೀಯು ಎಲೀಯನಿಗೆನೀನು ದೇವರ ಮನುಷ್ಯನೆಂದೂ ನಿನ್ನ ಬಾಯಿಯ ಲ್ಲಿರುವ ಕರ್ತನ ವಾಕ್ಯವು ನಿಜವೆಂದೂ ಇದರಿಂದ ಈಗ ತಿಳಿದಿದ್ದೇನೆ ಅಂದಳು.
ಪ್ರವಾದಿಯು ಅವ ನಿಗೆ--ಅದನ್ನು ತೆಗೆದುಕೋ ಅಂದನು. ಹಾಗೆಯೇ ಅವನು ತನ್ನ ಕೈಯನ್ನು ಚಾಚಿ ಅದನ್ನು ತೆಗೆದುಕೊಂಡನು.
ನಾಶವಾಗುವದಕ್ಕೆ ಸಿದ್ಧವಾದವನ ಆಶೀರ್ವಾದವು ನನ್ನ ಮೇಲೆ ಬರು ತ್ತಿತ್ತು; ವಿಧವೆಯ ಹೃದಯವು ಸಂತೋಷದಿಂದ ಹಾಡುವಂತೆ ನಾನು ಮಾಡಿದೆನು.
ಕರ್ತನು ಪರದೇಶಸ್ಥರನ್ನು ಕಾಪಾಡುತ್ತಾನೆ; ದಿಕ್ಕಿಲ್ಲದ ವರನ್ನೂ ವಿಧವೆಯರನ್ನೂ ಪರಾಮರಿಸುತ್ತಾನೆ; ಆದರೆ ದುಷ್ಟರ ಮಾರ್ಗವನ್ನು ಡೊಂಕುಮಾಡುತ್ತಾನೆ.ಓ ಚೀಯೋನೇ, ನಿನ್ನ ದೇವರಾದ ಕರ್ತನು ತಾನೇ ತಲತಲಾಂತರಕ್ಕೂ ಆಳುತ್ತಾನೆ. ಕರ್ತನನ್ನು ಸ್ತುತಿಸಿರಿ.
ಆತನು ಬಂದು ಆಕೆಯ ಕೈಯನ್ನು ಹಿಡಿದು ಅವಳನ್ನು ಮೇಲಕ್ಕೆ ಎತ್ತಿದನು; ಕೂಡಲೆ ಜ್ವರವು ಆಕೆಯನ್ನು ಬಿಟ್ಟು ಹೋಯಿತು; ಆಕೆಯು ಅವರಿಗೆ ಉಪಚಾರ ಮಾಡಿದಳು.
ಆತನು ಪಟ್ಟಣ ದ್ವಾರದ ಸವಿಾಪಕ್ಕೆ ಬಂದಾಗ ಇಗೋ, ಸತ್ತುಹೋಗಿದ್ದ ಒಬ್ಬ ಮನುಷ್ಯನನ್ನು ಹೊತ್ತುಕೊಂಡು ಹೋಗುತ್ತಿದ್ದರು. ಅವನು ತನ್ನ ತಾಯಿಗೆ ಒಬ್ಬನೇ ಮಗನು; ಆಕೆಯು ವಿಧವೆಯಾಗಿ ದ್ದಳು. ಪಟ್ಟಣದ ಬಹಳ ಜನರು ಆಕೆಯೊಂದಿಗೆ ಇದ್ದರು.
ಆಗ ಸತ್ತವನು ಕೂತುಕೊಂಡು ಮಾತನಾಡಲಾರಂಭಿಸಿದನು. ಆತನು ಅವನನ್ನು ಅವನ ತಾಯಿಗೆ ಒಪ್ಪಿಸಿದನು.
ಪೇತ್ರನು ಅವನ ಬಲಗೈಯನ್ನು ಹಿಡಿದು ಎತ್ತಿದನು; ಕೂಡಲೆ ಅವನ ಪಾದಗಳೂ ಹರಡಿನ ಎಲುಬುಗಳೂ ಬಲವನ್ನು ಹೊಂದಿದವು.
ಆ ದಿವಸಗಳಲ್ಲಿ ಶಿಷ್ಯರ ಸಂಖ್ಯೆ ಹೆಚ್ಚಾದಾಗ ಪ್ರತಿ ದಿನದ ಉಪಚಾರದಲ್ಲಿ ಗ್ರೀಕರ ವಿಧವೆಯರು ಅಲಕ್ಷ್ಯಮಾಡಲ್ಪಟ್ಟದ್ದರಿಂದ ಇಬ್ರಿಯ ರಿಗೆ ವಿರುದ್ಧವಾಗಿ ಅವರು ಗುಣುಗುಟ್ಟಿದರು.
ಅವರು ಜೀವಿತನಾದ ಆ ಯೌವನಸ್ಥನನ್ನು ಕರೆದು ಕೊಂಡು ಬರಲು ಅವರಿಗೆ ಬಹಳ ಆದರಣೆ ಉಂಟಾಯಿತು.