ಇನ್ನು ಏಳು ದಿವಸಗಳಲ್ಲಿ ಭೂಮಿಯ ಮೇಲೆ ನಾಲ್ವತ್ತು ಹಗಲು ನಾಲ್ವತು ರಾತ್ರಿ ಮಳೆಯು ಬರುವಂತೆ ನಾನು ಮಾಡುವೆನು. ನಾನು ಉಂಟುಮಾಡಿದ ಜೀವರಾಶಿಯನ್ನೆಲ್ಲಾ ಭೂಮುಖದಿಂದ ನಾಶಮಾಡು ತ್ತೇನೆ ಅಂದನು.
Cross references
ಕರ್ತನಾದ ದೇವರು ಭೂಮಿಯನ್ನೂ ಆಕಾಶಗಳನ್ನೂ ಉಂಟು ಮಾಡಿದ ದಿನದಲ್ಲಿ ಹೊಲದ ಯಾವ ಗಿಡವಾದರೂ ಭೂಮಿಯಲ್ಲಿ ಇನ್ನೂ ಬೆಳೆದಿರಲಿಲ್ಲ; ಹೊಲದ ಯಾವ ಪಲ್ಯವಾದರೂ ಇನ್ನೂ ಮೊಳೆತಿರಲಿಲ್ಲ; ಯಾಕಂದರೆ ಕರ್ತನಾದ ದೇವರು ಭೂಮಿಯ ಮೇಲೆ ಮಳೆ ಸುರಿಸಿರಲಿಲ್ಲ; ಭೂಮಿಯನ್ನು ವ್ಯವಸಾಯ ಮಾಡು ವದಕ್ಕೆ ಮನುಷ್ಯನು ಇರಲಿಲ್ಲ.
ಆಗ ಕರ್ತನು--ನನ್ನ ಆತ್ಮನು ಮನುಷ್ಯನ ಸಂಗಡ ಯಾವಾಗಲೂ ವಿವಾದಮಾಡುವದಿಲ್ಲ; ಅವನು ಮನುಷ್ಯನಷ್ಟೆ. ಆದರೂ ಅವನ ದಿನಗಳು ಇನ್ನು ನೂರ ಇಪ್ಪತ್ತು ವರುಷಗಳಾಗಿರುವವು ಅಂದನು.
ಇದಲ್ಲದೆ ಕರ್ತನು--ನಾನು ಸೃಷ್ಟಿಸಿದ ಮನುಷ್ಯ ನನ್ನೂ ಮನುಷ್ಯನ ಸಂಗಡ ಸಕಲ ಮೃಗ, ಕ್ರಿಮಿ, ಆಕಾಶದ ಪಕ್ಷಿಗಳನ್ನೂ ಭೂಮುಖದಿಂದ ನಾಶಮಾಡು ವೆನು; ನಾನು ಅವರನ್ನು ಉಂಟುಮಾಡಿದ್ದಕ್ಕೆ ಅದು ಪಶ್ಚಾತ್ತಾಪಪಡುವಂತೆ ಆಯಿತು ಅಂದನು.
ಆಗ ದೇವರು ನೋಹನಿಗೆ--ಮನುಷ್ಯರೆಲ್ಲರ ಅಂತ್ಯವು ನನ್ನ ಮುಂದೆ ಬಂತು; ಅವರಿಂದ ಭೂಮಿಯು ಬಲಾತ್ಕಾರದಿಂದ ತುಂಬಿದೆ; ಇಗೋ, ನಾನು ಭೂಮಿಯೊಂದಿಗೆ ಅವರನ್ನು ನಾಶಮಾಡು ವೆನು.
ಇಗೋ, ನಾನು ನಾನಾಗಿಯೇ ಆಕಾಶದ ಕೆಳಗೆ ಜೀವಶ್ವಾಸವಿರುವವುಗಳನ್ನೆಲ್ಲಾ ನಾಶ ಮಾಡುವದಕ್ಕೆ ಜಲಪ್ರಳಯವನ್ನು ಭೂಮಿಯ ಮೇಲೆ ಬರಮಾಡುತ್ತೇನೆ; ಆಗ ಭೂಮಿಯಲ್ಲಿರುವದೆಲ್ಲಾ ಸತ್ತುಹೋಗುವದು.
ಏಳು ದಿವಸಗಳಾದ ಮೇಲೆ ಪ್ರಳಯದ ನೀರು ಭೂಮಿಯ ಮೇಲೆ ಇತ್ತು.
ನಾಲ್ವತ್ತು ಹಗಲು ನಾಲ್ವತು ರಾತ್ರಿ ಭೂಮಿಯ ಮೇಲೆ ಮಳೆ ಸುರಿಯಿತು.
ನಾಲ್ವತ್ತು ದಿನ ಭೂಮಿಯ ಮೇಲೆ ಪ್ರಳಯವು ಇತ್ತು; ಆಗ ನೀರುಗಳು ಹೆಚ್ಚಿ ನಾವೆಯನ್ನು ಎತ್ತಲು ಅದು ಭೂಮಿಯಿಂದ ಎತ್ತಲ್ಪಟ್ಟಿತು.
ಆಗ ಪಶು ಪಕ್ಷಿ ಮೃಗ ಭೂಮಿಯಲ್ಲಿ ಹರಿದಾಡುವ ಕ್ರಿಮಿ ಎಲ್ಲಾ ಮನುಷ್ಯರು ಸಹಿತವಾಗಿ ಅಂತೂ ಭೂಮಿಯ ಮೇಲೆ ಚಲಿಸುವ ಎಲ್ಲಾ ಶರೀರಗಳು ಸತ್ತುಹೋದವು.
ಅವನು ಇನ್ನು ಏಳು ದಿನಗಳಾದ ಮೇಲೆ ತಿರಿಗಿ ನಾವೆಯೊಳಗಿಂದ ಪಾರಿವಾಳವನ್ನು ಬಿಟ್ಟನು.
ಇನ್ನೂ ಏಳು ದಿನಗಳು ತಡೆದು ಪಾರಿವಾಳವನ್ನು ಬಿಟ್ಟಾಗ ಅದು ತಿರಿಗಿ ಅವನ ಬಳಿಗೆ ಬರಲೇ ಇಲ್ಲ.
ಈಕೆಯ ವಾರವನ್ನು ಪೂರೈಸು. ತರುವಾಯ ನೀನು ನನ್ನಲ್ಲಿ ಬೇರೆ ಏಳು ವರುಷಗಳ ವರೆಗೆ ಸೇವೆಮಾಡಿದರೆ ನಾವು ಆಕೆಯನ್ನೂ ನಿನಗೆ ಕೊಡು ತ್ತೇವೆ ಅಂದನು.
ಆದಾಗ್ಯೂ ಈಗ ನೀನು ಅವರ ಪಾಪವನ್ನು ಕ್ಷಮಿಸಬೇಕು. ಇಲ್ಲ ವಾದರೆ ನೀನು ಬರೆದ ನಿನ್ನ ಪುಸ್ತಕದಿಂದ ನನ್ನ ಹೆಸರನ್ನು ಅಳಿಸಿಬಿಡು ಎಂದು ಬೇಡಿಕೊಂಡನು.
ಅವರು ಆ ಕಾಲ ದಲ್ಲಿ ಕಡಿಯಲ್ಪಟ್ಟರು; ಅವರ ಅಸ್ತಿವಾರವು ಪ್ರವಾಹ ದಲ್ಲಿ ಕೊರೆದು ಹೋಯಿತು.
ನೀರನ್ನು ಅಳತೆಯಿಂದ ಪರಿಮಾಣ ನೋಡಿದ್ದಾನೆ.
ಆತನು ನೀರಿನ ಹನಿಗಳನ್ನು ಕೂಡಿಸಿದಾಗ, ಅದರ ಮಂಜಿನ ಪ್ರಕಾರ ಮಳೆಯನ್ನು ಸುರಿಸುತ್ತವೆ.
ನೀರು ಹೊಯ್ಯುವಿಕೆಯಿಂದ ಮೋಡವನ್ನು ಭಾರಮಾಡುತ್ತಾನೆ; ಆತನು ತನ್ನ ಬೆಳಕಿನ ಮೇಘವನ್ನು ಚದರಿಸುತ್ತಾನೆ.
ಜೀವದ ಪುಸ್ತಕದೊಳಗಿಂದ ಅವರು ಅಳಿಸಲ್ಪಡಲಿ; ನೀತಿವಂತರ ಸಂಗಡ ಅವರ ಹೆಸರು ಬರೆಯಲ್ಪಡದೆ ಇರಲಿ.
ಸುಗ್ಗಿಯು ಇನ್ನು ಮೂರು ತಿಂಗಳು ಇರುವಾಗ ಮಳೆಯನ್ನು ನಿಮ್ಮಿಂದ ನಾನು ಹಿಂತೆಗೆದಿದ್ದೇನೆ; ಒಂದು ಪಟ್ಟಣದ ಮೇಲೆ ಮಳೆ ಸುರಿಸಿ ಮತ್ತೊಂದು ಪಟ್ಟಣದ ಮೇಲೆ ಮಳೆ ಸುರಿಸದ ಹಾಗೆ ಮಾಡಿದೆನು; ಮಳೆ ಸುರಿಯದ ಭಾಗವು ಒಣಗಿ ಹೋಯಿತು.
ಜಯಹೊಂದುವ ಇವನೇ ಬಿಳೀ ವಸ್ತ್ರದಿಂದ ಹೊದಿಸಲ್ಪಡುವನು; ಜೀವದ ಪುಸ್ತಕದಿಂದ ನಾನು ಅವನ ಹೆಸರನ್ನು ಅಳಿಸಿ ಬಿಡುವದೇ ಇಲ್ಲ, ಆದರೆ ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಅವನ ಹೆಸರನ್ನು ಒಪ್ಪಿಕೊಳ್ಳುವೆನು.