Home Bibles 1 ಸಮುವೇಲ 31:13 · ಕನ್ನಡ ಬೈಬಲ್
1 ಸಮುವೇಲ 31:13 · ಕನ್ನಡ ಬೈಬಲ್

ಅವರ ಎಲುಬುಗಳನ್ನು ತಕ್ಕೊಂಡು ಅವುಗಳನ್ನು ಯಾಬೇಷಿ ನಲ್ಲಿರುವ ಒಂದು ಮರದ ಕೆಳಗೆ ಹೂಣಿಟ್ಟು ಏಳು ದಿವಸ ಉಪವಾಸಮಾಡಿದರು.

Cross references

ಆದಿಕಾಂಡ 35:8

ಆಗ ರೆಬೆಕ್ಕಳ ದಾದಿಯಾಗಿದ್ದ ದೆಬೋರಳು ಸತ್ತಳು. ಬೇತೇಲಿನ ಕೆಳಗಿದ್ದ ಅಲ್ಲೋನ್‌ ಮರದ ಬುಡದಲ್ಲಿ ಆಕೆಯನ್ನು ಹೂಣಿಟ್ಟರು. ಆ ಸ್ಥಳಕ್ಕೆ ಅಲ್ಲೋನ್‌ ಬಾಕೂತ್‌ ಎಂದು ಹೆಸರಾಯಿತು.

ಆದಿಕಾಂಡ 50:10

ಅವರು ಯೊರ್ದನಿನ ಆಚೆ ಇರುವ ಆಟಾದ್‌ ಕಣಕ್ಕೆ ಬಂದು ಅಲ್ಲಿ ಅಧಿಕವಾದ ಮಹಾಗೋಳಾಟದಿಂದ ದುಃಖ ಪಟ್ಟರು. ಅವನು ತನ್ನ ತಂದೆಗಾಗಿ ಏಳು ದಿವಸಗಳ ವರೆಗೆ ದುಃಖಪಟ್ಟನು.

1 ಸಮುವೇಲ 22:6

ದಾವೀದನನ್ನು ಅವನ ಸಂಗಡವಿರುವ ಮನುಷ್ಯ ರನ್ನು ನೋಡಿದರೆಂಬ ವರ್ತಮಾನವನ್ನು ಸೌಲನು ಕೇಳಿದನು. (ಸೌಲನು ಗಿಬೆಯಲ್ಲಿರುವ ರಾಮದಲ್ಲಿ ಒಂದು ಮರದ ಕೆಳಗೆ ತನ್ನ ಈಟಿಯನ್ನು ಕೈಯಲ್ಲಿ ಹಿಡಿದು ಕುಳಿತುಕೊಂಡನು; ಅವನ ಸೇವಕರೆಲ್ಲರೂ ಸುತ್ತಲೂ ನಿಂತಿದ್ದರು.)

2 ಸಮುವೇಲ 1:12

ಸೌಲನೂ ಅವನ ಮಗನಾದ ಯೋನಾತಾನನೂ ಇಸ್ರಾಯೇಲಿನ ಮನೆಯವರೂ ಕರ್ತನ ಜನರೂ ಕತ್ತಿಯಿಂದ ಬಿದ್ದ ಕಾರಣ ಅವರಿ ಗೋಸ್ಕರ ಗೋಳಾಡಿ ಅತ್ತು ಸಾಯಂಕಾಲದ ವರೆಗೂ ಉಪವಾಸವಾಗಿದ್ದರು.

2 ಸಮುವೇಲ 2:4

ಆಗ ಯೆಹೂದ ಜನರು ಬಂದು ಅಲ್ಲಿ ದಾವೀದನನ್ನು ಯೆಹೂದನ ಮನೆಯವರ ಮೇಲೆ ಅರಸನನ್ನಾಗಿ ಅಭಿಷೇಕಿಸಿದರು.

2 ಸಮುವೇಲ 21:12

ಆಗ ದಾವೀದನು ಹೋಗಿ ಫಿಲಿಷ್ಟಿಯರು ಗಿಲ್ಬೋ ವದಲ್ಲಿ ಸೌಲನನ್ನು ಹೊಡೆದಾಗ ಬೆತ್ಸಾನಿನ ಬೀದಿ ಯಲ್ಲಿ ತೂಗು ಹಾಕಿದ ಗಿಲ್ಯಾದಿನ ಯಾಬೇಷ್‌ ಪಟ್ಟಣದವರು ಅಲ್ಲಿ ಹೋಗಿ ಕದ್ದು ಒಯ್ದ

Interlinear

Choose Theme