Home Bibles ಆದಿಕಾಂಡ 47:30 · ಕನ್ನಡ ಬೈಬಲ್
ಆದಿಕಾಂಡ 47:30 · ಕನ್ನಡ ಬೈಬಲ್

ನನ್ನ ತಂದೆಗಳ ಸಂಗಡ ನಾನು ಮಲಗಬೇಕು. ಐಗುಪ್ತದಿಂದ ನನ್ನನ್ನು ತಕ್ಕೊಂಡುಹೋಗಿ ಅವರ ಸಮಾಧಿಯ ಸ್ಥಳದಲ್ಲಿ ನನ್ನನ್ನು ಹೂಣಿಡು ಅಂದನು. ಅದಕ್ಕವನು ನಿನ್ನ ಮಾತಿನ ಪ್ರಕಾರ ನಾನು ಮಾಡುತ್ತೇನೆ ಅಂದನು.ಯಾಕೋಬನು--ನನಗೆ ಪ್ರಮಾಣ ಮಾಡು ಅಂದಾಗ ಅವನು ಅವನಿಗೆ ಪ್ರಮಾಣ ಮಾಡಿದನು. ಆಗ ಇಸ್ರಾಯೇಲನು ಮಂಚದ ತಲೆದೆಸೆಯಲ್ಲಿ ಬಾಗಿಕೊಂಡನು.

Cross references

ಆದಿಕಾಂಡ 23:19

ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿ ಯಾದ ಸಾರಳನ್ನು ಕಾನಾನ್‌ ದೇಶದಲ್ಲಿ ಹೆಬ್ರೋನ್‌ ಎಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಹೊಲದ ಗವಿಯಲ್ಲಿ ಹೂಣಿಟ್ಟನು.ಆ ಹೊಲವೂ ಅದರ ಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಅಬ್ರಹಾಮನಿಗೆ ಸ್ವಂತ ಸಮಾಧಿಯ ಸ್ವಾಸ್ಥ್ಯವಾಗಿ ಸ್ಥಿರಮಾಡಲ್ಪಟ್ಟಿತು.

ಆದಿಕಾಂಡ 25:9

ಅವನ ಕುಮಾರರಾದ ಇಸಾಕನೂ ಇಷ್ಮಾಯೇಲನೂ ಮಮ್ರೆಗೆ ಎದುರಾಗಿರುವ ಹಿತ್ತಿಯ ನಾದ ಚೋಹರನ ಮಗನಾದ ಎಫ್ರೋನನ ಹೊಲ ದಲ್ಲಿರುವ ಮಕ್ಪೇಲ ಎಂಬ ಗವಿಯಲ್ಲಿ ಅವನನ್ನು ಹೂಣಿಟ್ಟರು.

ಆದಿಕಾಂಡ 49:29

ಅವನು ಅವರಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ--ನಾನು ನನ್ನ ಜನರೊಂದಿಗೆ ಕೂಡಿಸಲ್ಪ ಡುತ್ತೇನೆ. ನನ್ನ ತಂದೆಗಳ ಸಂಗಡ ಹಿತ್ತಿಯನಾದ ಎಫ್ರೋನಿನ ಹೊಲದಲ್ಲಿರುವ ಗವಿಯಲ್ಲಿ

ಆದಿಕಾಂಡ 50:5

ನನ್ನ ತಂದೆ ನನಗೆ ಇಗೋ, ನಾನು ಸಾಯುತ್ತೇನೆ. ನಾನು ಕಾನಾನ್‌ದೇಶದಲ್ಲಿ ನನಗೋಸ್ಕರ ಅಗೆದ ನನ್ನ ಸಮಾಧಿಯಲ್ಲಿಯೇ ನನ್ನನ್ನು ಹೂಣಿಡಬೇಕು ಎಂದು ನನ್ನಿಂದ ಪ್ರಮಾಣಮಾಡಿಸಿದ್ದಾನೆ. ಹೀಗಿ ರುವದರಿಂದ ನಾನು ಹೋಗಿ ನನ್ನ ತಂದೆಯನ್ನು ಹೂಣಿಟ್ಟು ತಿರಿಗಿ ಬರುವ ಹಾಗೆ ಅಪ್ಪಣೆಯಾಗಬೇಕು ಅಂದನು.

ಆದಿಕಾಂಡ 50:25

ಯೋಸೇಫನು ಇಸ್ರಾಯೇಲನ ಮಕ್ಕಳಿಗೆ--ದೇವರು ನಿಮ್ಮನ್ನು ನಿಶ್ಚಯವಾಗಿ ದರ್ಶಿಸುವನು. ಆಗ ನನ್ನ ಎಲುಬುಗಳನ್ನು ಇಲ್ಲಿಂದ ತಕ್ಕೊಂಡು ಹೋಗಬೇಕೆಂದು ಪ್ರಮಾಣ ಮಾಡಿಸಿದನು.ಯೋಸೇಫನು ನೂರ ಹತ್ತು ವರುಷದವನಾಗಿ ಸತ್ತನು. ಅವರು ಅವನಿಗೆ ಸುಗಂಧದ್ರವ್ಯವನ್ನು ಹಾಕಿ ಐಗುಪ್ತದಲ್ಲಿ ಪೆಟ್ಟಿಗೆ ಯೊಳೆಗೆ ಇಟ್ಟರು.

2 ಸಮುವೇಲ 19:37

ಅಪ್ಪಣೆ ಆದರೆ ನಿನ್ನ ಸೇವಕನಾದ ನಾನು ತಿರಿಗಿ ಹೋಗಿ ನನ್ನ ಪಟ್ಟಣದಲ್ಲಿ ನನ್ನ ತಂದೆ ತಾಯಿಗಳ ಸಮಾಧಿಯ ಬಳಿಯಲ್ಲಿ ಸಾಯುತ್ತೇನೆ. ಆದರೆ ಅರಸನಾದ ನನ್ನ ಒಡೆಯನ ಸಂಗಡ ಇಗೋ, ನಿನ್ನ ಸೇವಕನಾದ ಕಿಮ್ಹಾಮನು ಬರುವನು; ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಅವನಿಗೆ ಮಾಡು ಅಂದನು.

1 ಅರಸುಗಳು 13:22

ನೀನು ರೊಟ್ಟಿ ತಿಂದು ನೀರು ಕುಡಿದದ್ದರಿಂದ ನಿನ್ನ ಹೆಣ ನಿನ್ನ ಪಿತೃಗಳ ಸಮಾಧಿಗೆ ಬರುವದಿಲ್ಲವೆಂದು ಕರ್ತನು ಹೇಳುತ್ತಾನೆ ಎಂದು ಹೇಳಿದನು.

ನೆಹೆಮ್ಯ 2:3

ಆಗ ನಾನು ಬಹು ಭಯಪಟ್ಟು ಅರಸನಿಗೆ--ಅರಸನು ಎಂದೆಂದಿಗೂ ಬಾಳಲಿ. ನನ್ನ ತಂದೆಗಳ ಸಮಾಧಿ ಗಳಿರುವ ಸ್ಥಳವಾದ ಆ ಪಟ್ಟಣವು ಹಾಳಾಗಿದ್ದು ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿರುವಾಗ ನನ್ನ ಮುಖವು ದುಃಖವಿಲ್ಲದೆ ಇರುವದು ಹೇಗೆ ಅಂದೆನು.

ನೆಹೆಮ್ಯ 2:5

ಆಗ ನಾನು ಪರಲೋಕದ ದೇವರಿಗೆ ಪ್ರಾರ್ಥನೆಮಾಡಿ ಅರಸನಿಗೆ--ಅರಸನು ಮೆಚ್ಚಿದರೆ ಮತ್ತು ನಿನ್ನ ಸೇವಕನಿಗೆ ನಿನ್ನ ಮುಂದೆ ದಯೆ ದೊರಕಿದರೆ ನೀನು ನನ್ನನ್ನು ನನ್ನ ತಂದೆಗಳ ಸಮಾಧಿಗಳಿರುವ ಪಟ್ಟಣವನ್ನು ಕಟ್ಟಿಸುವದಕ್ಕಾಗಿ ಯೆಹೂದಕ್ಕೆ ನನ್ನನ್ನು ಕಳುಹಿಸಬೇಕು ಅಂದೆನು.

ಅಪೋಸ್ತಲರ ಕೃತ್ಯಗಳು 7:15

ಹೀಗೆ ಯಾಕೋಬನು ಐಗುಪ್ತ ದೇಶಕ್ಕೆ ಇಳಿದು ಹೋದನು. ಅಲ್ಲಿ ಅವನೂ ನಮ್ಮ ಪಿತೃಗಳೂ ಮೃತಿಹೊಂದಿದರು.

Interlinear

Choose Theme