Home Bibles ನೆಹೆಮ್ಯ 2:5 · ಕನ್ನಡ ಬೈಬಲ್
ನೆಹೆಮ್ಯ 2:5 · ಕನ್ನಡ ಬೈಬಲ್

ಆಗ ನಾನು ಪರಲೋಕದ ದೇವರಿಗೆ ಪ್ರಾರ್ಥನೆಮಾಡಿ ಅರಸನಿಗೆ--ಅರಸನು ಮೆಚ್ಚಿದರೆ ಮತ್ತು ನಿನ್ನ ಸೇವಕನಿಗೆ ನಿನ್ನ ಮುಂದೆ ದಯೆ ದೊರಕಿದರೆ ನೀನು ನನ್ನನ್ನು ನನ್ನ ತಂದೆಗಳ ಸಮಾಧಿಗಳಿರುವ ಪಟ್ಟಣವನ್ನು ಕಟ್ಟಿಸುವದಕ್ಕಾಗಿ ಯೆಹೂದಕ್ಕೆ ನನ್ನನ್ನು ಕಳುಹಿಸಬೇಕು ಅಂದೆನು.

Cross references

ರೂತ 2:13

ಅದಕ್ಕೆ ಅವಳು ನನ್ನ ಒಡೆಯನೇ, ನನಗೆ ನಿನ್ನ ದೃಷ್ಟಿಯಲ್ಲಿ ದಯೆದೊರಕಲಿ. ಯಾಕಂದರೆ ನನ್ನನ್ನು ನೀನು ಆದರಿಸಿದಿ; ನಾನು ನಿನ್ನ ದಾಸಿಗಳಲ್ಲಿ ಒಬ್ಬಳಲ್ಲ ದಿದ್ದರೂ ನನ್ನ ಕೂಡ ಸ್ನೇಹದಿಂದ ಮಾತನಾಡಿದಿಅಂದಳು.

2 ಸಮುವೇಲ 14:22

ಆಗ ಯೋವಾಬನು ನೆಲಕ್ಕೆ ಬಿದ್ದು ಬೊಗ್ಗಿಕೊಂಡು ಅರಸ ನಿಗೆ ವಂದಿಸಿದನು. ಯೋವಾಬನು--ಅರಸನು ತನ್ನ ಸೇವಕನ ಮಾತಿನ ಪ್ರಕಾರ ಮಾಡಿದ್ದರಿಂದ ನನ್ನ ಒಡೆಯನಾದ ಅರಸನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರಕಿತೆಂಬದು ಈ ಹೊತ್ತು ನಿನ್ನ ಸೇವಕನಿಗೆ ತಿಳಿಯಿತು ಅಂದನು.

ಎಜ್ರಾ 5:17

ಆದದರಿಂದ ಅರಸನಿಗೆ ಚೆನ್ನಾಗಿ ಕಾಣಿಸಿದರೆ ಯೆರೂಸಲೇಮಿನಲ್ಲಿರುವ ದೇವರ ಆಲಯವನ್ನು ಕಟ್ಟಲು ಅರಸನಾದ ಕೋರೆಷನು ಅಪ್ಪಣೆ ಮಾಡಿದ್ದು ಉಂಟೋ ಇಲ್ಲವೋ ಹುಡುಕು; ಬಾಬೆಲಿನಲ್ಲಿರುವ ಅರಸನ ಬೊಕ್ಕಸದ ಮನೆಯಲ್ಲಿ ವಿಚಾರಿಸಲ್ಪಡಲಿ. ತರುವಾಯ ಅರಸನು ಈ ಕಾರ್ಯಕ್ಕೋಸ್ಕರ ತನ್ನ ಚಿತ್ತವೇನೆಂದು ನಮಗೆ ತಿಳಿಸಲಿ.

ಎಸ್ತೇರ್ 1:19

ಅರಸನಿಗೆ ಸಮ್ಮತಿಯಾದರೆ ವಷ್ಟಿಯು ಅರಸನಾದ ಅಹಷ್ವೇರೋಷನ ಮುಂದೆ ಇನ್ನು ಮೇಲೆ ಬರ ಬಾರದೆಂದೂ ಅರಸನು ಅವಳ ರಾಜಸ್ಥಿತಿಯನ್ನು ಅವಳಿಗಿಂತ ಉತ್ತಮಳಾದ ಮತ್ತೊಬ್ಬಳಿಗೆ ಕೊಡಲಿ ಎಂದೂ ರಾಜಾಜ್ಞೆಯು ಹೊರಟು ಅದು ರದ್ದಾಗದ ಹಾಗೆ ಪಾರಸಿಯ ಮೇದ್ಯರ ಕಾನೂನುಗಳಲ್ಲಿ ಬರೆ ಯಲ್ಪಡಲಿ.

ಎಸ್ತೇರ್ 5:8

ನನ್ನ ಬೇಡುವಿಕೆಯ ಪ್ರಕಾರ ಕೊಡಲೂ ನನ್ನ ವಿಜ್ಞಾಪನೆಯ ಪ್ರಕಾರ ಮಾಡಲೂ ಅರಸನಿಗೆ ಸಮ್ಮತಿ ಯಾದರೆ ಅರಸನಿಗೂ ಹಾಮಾನನಿಗೂ ನಾನು ಇನ್ನೂ ಮಾಡುವ ಔತಣಕ್ಕೆ ಬರಬೇಕು. ನಾಳೆ ಅರಸನು ಹೇಳಿದ ಪ್ರಕಾರ ಮಾಡುವೆನು ಅಂದಳು.

ಎಸ್ತೇರ್ 7:3

ಆಗ ರಾಣಿಯಾದ ಎಸ್ತೇರಳು ಪ್ರತ್ಯುತ್ತರ ಕೊಟ್ಟು--ಓ ಅರಸನೇ, ನಾನು ನಿನ್ನ ಮುಂದೆ ದಯ ಹೊಂದಿದ ವಳಾಗಿದ್ದರೆ ಅದು ಅರಸನಿಗೆ ಮೆಚ್ಚಿಕೆಯಾಗಿದ್ದರೆ ನನ್ನ ಬೇಡುವಿಕೆಗೆ ನನ್ನ ಪ್ರಾಣವೂ ನನ್ನ ವಿಜ್ಞಾಪನೆಗೆ ನನ್ನ ಜನವೂ ಕೊಡಲ್ಪಡಲಿ.

ಎಸ್ತೇರ್ 8:5

ಅರಸನಿಗೆ ಒಳ್ಳೇದಾಗಿದ್ದರೆ, ಅವನ ಸಮ್ಮುಖದಲ್ಲಿ ನಾನು ದಯೆಹೊಂದಿದ ವಳಾದರೆ, ಕಾರ್ಯವು ಅರಸನಿಗೆ ಯುಕ್ತವಾಗಿ ಕಾಣಿಸಲ್ಪಟ್ಟರೆ, ನಾನು ಅವನ ಸಮ್ಮುಖದಲ್ಲಿ ಒಳ್ಳೆಯ ವಳೆಂದು ಕಾಣಿಸಲ್ಪಟ್ಟರೆ, ಅರಸನ ಸಮಸ್ತ ಪ್ರಾಂತ್ಯ ಗಳಲ್ಲಿರುವ ಯೆಹೂದ್ಯರನ್ನು ನಾಶಮಾಡುವದಕ್ಕೆ ಅಗಾಗನಾದ ಹಮ್ಮೆದಾತನ ಮಗನಾದ ಹಾಮಾನನು ಯೋಚಿಸಿ ಬರೆದ ಪತ್ರಗಳು ರದ್ದುಮಾಡಲ್ಪಡುವಂತೆ ಬರೆಯಲ್ಪಡಲಿ.

ಸಾಮೇತಿಗಳು 3:4

ಹೀಗೆ ನೀನು ದೇವರ ಮುಂದೆಯೂ ಮನುಷ್ಯನ ಮುಂದೆಯೂ ದಯೆಯನ್ನೂ ಒಳ್ಳೆಯ ವಿವೇಕವನ್ನೂ ಪಡೆದುಕೊಳ್ಳುವಿ.

ದಾನಿಯೇಲ 9:25

ಆದದರಿಂದ ನೀನು ತಿಳಿಯಬೇಕಾದದ್ದು ಏನಂದರೆ --ಯೆರೂಸಲೇಮನ್ನು ತಿರಿಗಿ ಸ್ಥಾಪಿಸಿ ಕಟ್ಟಲು ಆಜ್ಞೆ ಹೊರಡುವದು ಮೊದಲುಗೊಂಡು ಅಭಿಷಿಕ್ತನಾದ (ಮೆಸ್ಸೀಯನ) ಪ್ರಭುವಿನ ವರೆಗೂ ಏಳು ವಾರಗಳು ಕಳೆಯಬೇಕು. ಅದು ಪುನಃ ಸ್ಥಾಪಿಸಲ್ಪಟ್ಟು ಅರವತ್ತೆರಡು ವಾರಗಳು ಇರುವದು. ಅದಕ್ಕೆ ಬೀದಿಯೂ ಗೋಡೆ ಗಳೂ ಕಷ್ಟಕಾಲದಲ್ಲಿ ಕಟ್ಟಲ್ಪಡುವದು.

Interlinear

Choose Theme