ಆದರೆ ಯೋಸೇಫನು ತಮಗೆ ಹೇಳಿದ ಎಲ್ಲಾ ಮಾತುಗಳನ್ನು ಅವರು ಯಾಕೋಬನಿಗೆ ಹೇಳಿದ್ದಲ್ಲದೆ ಅವನನ್ನು ಕರಕೊಂಡು ಹೋಗುವದಕ್ಕೆ ಯೋಸೇಫನು ಕಳುಹಿಸಿದ ಬಂಡಿಗಳನ್ನು ಅವನು ನೋಡಿದಾಗ ಅವರ ತಂದೆಯಾದ ಯಾಕೋಬನ ಆತ್ಮವು ಉಜ್ಜೀ ವಿಸಿತು.ಆಗ ಇಸ್ರಾಯೇಲನು--ನನ್ನ ಮಗನಾದ ಯೋಸೇಫನು ಇನ್ನೂ ಜೀವದಿಂದಿದ್ದಾನೆ, ಅದು ಸಾಕು; ನಾನು ಸಾಯುವದಕ್ಕಿಂತ ಮುಂಚೆ ಹೋಗಿ ಅವನನ್ನು ನೋಡುವೆನು ಅಂದನು.
Cross references
ಇದನ್ನು ಮಾಡುವಂತೆ ನಿಮಗೆ ಅಪ್ಪಣೆಯಾಯಿತು; ಐಗುಪ್ತದೇಶದೊಳಗಿಂದ ನಿಮ್ಮ ಚಿಕ್ಕವರಿಗಾಗಿಯೂ ಹೆಂಡತಿಯರಿಗಾಗಿಯೂ ಬಂಡಿ ಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ತಂದೆಯನ್ನು ಕರಕೊಂಡು ಬನ್ನಿರಿ.
ಆಗ ದೇವರು ದವಡೆ ಟೊಳ್ಳಾದ ಒಂದು ಸ್ಥಳವನ್ನು ಸೀಳಿಬಿಟ್ಟಾಗ ಅದರೊಳಗಿಂದ ನೀರು ಹೊರಟುಬಂತು. ಸಂಸೋನನು ಆ ನೀರನ್ನು ಕುಡಿದ ದ್ದರಿಂದ ಅವನ ಆತ್ಮ ತಿರಿಗಿ ಬಂತು; ಅವನು ಜೀವಿಸಿ ದನು. ಆದದರಿಂದ ಏನ್‌ಹಕ್ಕೋರೇ ಎಂದು ಅದಕ್ಕೆ ಹೆಸರಿಟ್ಟನು. ಈ ದಿನದ ವರೆಗೂ ಲೆಹೀಯಲ್ಲಿ ಅದು ಇದೆ.ಅವನು ಫಿಲಿಷ್ಟಿಯರ ದಿವಸಗಳಲ್ಲಿ ಇಪ್ಪತ್ತು ವರುಷ ಇಸ್ರಾಯೇಲ್ಯರಿಗೆ ನ್ಯಾಯತೀರಿಸಿದನು.
ಅವನಿಗೆ ನೀರನ್ನು ಕುಡಿಸಿ ಅಂಜೂರದ ಫಲದ ಅಡೆಯಲ್ಲಿ ಒಂದು ತುಂಡನ್ನೂ ಒಣಗಿದ ಎರಡು ದ್ರಾಕ್ಷೇ ಗೊಂಚಲುಗಳನ್ನೂ ಅವನಿಗೆ ಕೊಟ್ಟರು. ಅವನು ಅವುಗಳನ್ನು ತಿಂದು ಪ್ರಾಣದಲ್ಲಿ ಚೇತರಿಸಿ ಕೊಂಡನು. ಯಾಕಂದರೆ ಅವನು ರಾತ್ರಿ ಹಗಲು ಮೂರು ದಿವಸದಿಂದ ರೊಟ್ಟಿ ತಿಂದಿರಲಿಲ್ಲ, ನೀರನ್ನೂ ಕುಡಿದಿರಲಿಲ್ಲ.
ನಿನ್ನ ಜನರು ನಿನ್ನಲ್ಲಿ ಸಂತೋಷ ಪಡುವ ಹಾಗೆ ನೀನು ತಿರುಗಿ ನಮ್ಮನ್ನು ಉಜ್ಜೀವಿ ಸುವದಿಲ್ಲವೋ?
ಬಾಯಾರಿದವನಿಗೆ ತಣ್ಣೀರು ಹೇಗೋ ದೂರ ದೇಶ ದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ.
ಉನ್ನತನೂ ಎತ್ತರವಾದವನೂ ನಿತ್ಯವಾಗಿ ವಾಸಿ ಸುವವನೂ ಪರಿಶುದ್ಧನೆಂದು ಹೆಸರುಳ್ಳಾತನೂ ಹೀಗೆ ಹೇಳುತ್ತಾನೆ--ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿ ಸುವ ನಾನು ಪಶ್ಚಾತ್ತಾಪದೊಂದಿಗೆ ಮತ್ತು ದೀನನ ಆತ್ಮದೊಂದಿಗೆ ಇದ್ದುಕೊಂಡು ಅವರನ್ನು ಉಜ್ಜೀ ವಿಸುವವನಾಗಿದ್ದೇನೆ.
ಆತನು ಎರಡು ದಿನಗಳಾದ ಮೇಲೆ ನಮ್ಮನ್ನು ಪುನರ್ಜೀವಿಸ ಮಾಡುವನು; ಮೂರನೆಯ ದಿನದಲ್ಲಿ ಆತನೇ ನಮ್ಮನ್ನು ಎಬ್ಬಿಸುವನು; ನಾವು ಆತನ ದೃಷ್ಟಿಯಲ್ಲಿ ಜೀವಿಸುವೆವು.