ಅವನಿಗೆ ನೀರನ್ನು ಕುಡಿಸಿ ಅಂಜೂರದ ಫಲದ ಅಡೆಯಲ್ಲಿ ಒಂದು ತುಂಡನ್ನೂ ಒಣಗಿದ ಎರಡು ದ್ರಾಕ್ಷೇ ಗೊಂಚಲುಗಳನ್ನೂ ಅವನಿಗೆ ಕೊಟ್ಟರು. ಅವನು ಅವುಗಳನ್ನು ತಿಂದು ಪ್ರಾಣದಲ್ಲಿ ಚೇತರಿಸಿ ಕೊಂಡನು. ಯಾಕಂದರೆ ಅವನು ರಾತ್ರಿ ಹಗಲು ಮೂರು ದಿವಸದಿಂದ ರೊಟ್ಟಿ ತಿಂದಿರಲಿಲ್ಲ, ನೀರನ್ನೂ ಕುಡಿದಿರಲಿಲ್ಲ.
Cross references
ಆಗ ದೇವರು ದವಡೆ ಟೊಳ್ಳಾದ ಒಂದು ಸ್ಥಳವನ್ನು ಸೀಳಿಬಿಟ್ಟಾಗ ಅದರೊಳಗಿಂದ ನೀರು ಹೊರಟುಬಂತು. ಸಂಸೋನನು ಆ ನೀರನ್ನು ಕುಡಿದ ದ್ದರಿಂದ ಅವನ ಆತ್ಮ ತಿರಿಗಿ ಬಂತು; ಅವನು ಜೀವಿಸಿ ದನು. ಆದದರಿಂದ ಏನ್‌ಹಕ್ಕೋರೇ ಎಂದು ಅದಕ್ಕೆ ಹೆಸರಿಟ್ಟನು. ಈ ದಿನದ ವರೆಗೂ ಲೆಹೀಯಲ್ಲಿ ಅದು ಇದೆ.ಅವನು ಫಿಲಿಷ್ಟಿಯರ ದಿವಸಗಳಲ್ಲಿ ಇಪ್ಪತ್ತು ವರುಷ ಇಸ್ರಾಯೇಲ್ಯರಿಗೆ ನ್ಯಾಯತೀರಿಸಿದನು.
ಆದರೆ ತನ್ನ ತಂದೆಯು ಜನರಿಗೆ ಆಣೆ ಇಟ್ಟದ್ದನ್ನು ಯೋನಾತಾನನು ಕೇಳದೆ ಇದ್ದ ಕಾರಣ ತನ್ನ ಕೈಯಲ್ಲಿದ್ದ ಕೋಲನ್ನು ಚಾಚಿ ಅದನ್ನು ಜೇನು ತೊಟ್ಟಿ ಯಲ್ಲಿ ಅದ್ದಿ ತನ್ನ ಬಾಯಿಗೆ ಹಾಕಿಕೊಂಡನು. ಅವನ ಕಣ್ಣುಗಳು ಕಳೆಯನ್ನು ಹೊಂದಿದವು.
ದಾವೀದನು ಅವನನ್ನು--ನೀನು ಯಾರವನು? ನೀನು ಎಲ್ಲಿಯವನು ಎಂದು ಕೇಳಿದಾಗ ಅವನು--ನಾನು ಒಬ್ಬ ಅಮಾಲೇಕ್ಯನ ಸೇವಕನಾದ ಐಗುಪ್ತದೇಶದ ಯೌವನಸ್ಥನು. ಈ ಮೂರು ದಿವಸ ನಾನು ರೋಗದಲ್ಲಿ ಬಿದ್ದದರಿಂದ ನನ್ನ ಯಜಮಾನನು ನನ್ನನ್ನು ಬಿಟ್ಟುಹೋದನು.
ನಾನೂ ನನ್ನ ದಾಸಿಯರೂ ಹಾಗೆಯೇ ಉಪವಾಸ ಮಾಡುವೆವು. ಅನಂತರ ನಾನು ಆಜ್ಞೆ ವಿಾರಿ ಅರಸನ ಬಳಿಗೆ ಪ್ರವೇಶಿಸುವೆನು. ನಾನು ನಾಶವಾದರೆ ನಾಶವಾಗುವೆನು ಅಂದಳು.ಆಗ ಮೊರ್ದೆಕೈ ಹೊರಟು ಹೋಗಿ ಎಸ್ತೇರಳು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದನು.
ಆತನು ದಣಿದವನಿಗೆ ಶಕ್ತಿಯನ್ನೂ ಬಲಹೀನನಿಗೆ ಬಹುಬಲವನ್ನೂ ಕೊಡುತ್ತಾನೆ.
ಆದರೆ ಕರ್ತನು ಯೋನನನ್ನು ನುಂಗುವ ಹಾಗೆ ದೊಡ್ಡ ವಿಾನನ್ನು ಸಿದ್ಧಮಾಡಿದ್ದನು; ಯೋನನು ಆ ವಿಾನಿನ ಹೊಟ್ಟೆಯಲ್ಲಿ ಮೂರು ಹಗಲು ಮೂರು ರಾತ್ರಿಯು ಇದ್ದನು.
ಅಯ್ಯಾ, ಆ ಮೋಸಗಾರನು ಇನ್ನೂ ಜೀವದಿಂದಿದ್ದಾಗ-- ಮೂರು ದಿನಗಳಾದ ಮೇಲೆ ನಾನು ತಿರಿಗಿ ಏಳುತ್ತೇನೆ ಎಂದು ಹೇಳಿದ್ದು ನಮ್ಮ ನೆನಪಿಗೆ ಬರುತ್ತದೆ.