Home Bibles ಆದಿಕಾಂಡ 44:33 · ಕನ್ನಡ ಬೈಬಲ್
ಆದಿಕಾಂಡ 44:33 · ಕನ್ನಡ ಬೈಬಲ್

ಹಾಗಿದ್ದಲ್ಲಿ ಆ ಹುಡು ಗನ ಬದಲಾಗಿ ನಿನ್ನ ದಾಸನಾದ ನಾನು ನನ್ನ ಒಡೆಯನಿಗೆ ದಾಸನಾಗಿರುವೆನು; ಹುಡುಗನು ನನ್ನ ಸಹೋದರರ ಸಂಗಡ ಹೋಗಿಬಿಡಲಿ.ಹುಡುಗನು ನನ್ನ ಬಳಿಯಲ್ಲಿರದೆ ನಾನು ಹೇಗೆ ನನ್ನ ತಂದೆಯ ಬಳಿಗೆ ಹೋಗಲಿ? ಹೋದರೆ ನನ್ನ ತಂದೆಗೆ ಬರುವ ಕೇಡನ್ನು ನಾನು ನೋಡ ಬೇಕಾದೀತು ಅಂದನು.

Cross references

ಆದಿಕಾಂಡ 44:10

ಆಗ ಅವನು--ಈಗ ನಿಮ್ಮ ಮಾತಿನಂತೆಯೇ ಆಗಲಿ. ಯಾರ ಬಳಿಯಲ್ಲಿ ಅದು ಸಿಕ್ಕುತ್ತದೋ ಅವನು ನನಗೆ ದಾಸನಾಗಿರಲಿ; ಆದರೆ ನೀವು ನಿರಪರಾಧಿಗಳಾಗಿರುವಿರಿ ಅಂದನು.

ನಿರ್ಗಮಕಾಂಡ 32:32

ಆದಾಗ್ಯೂ ಈಗ ನೀನು ಅವರ ಪಾಪವನ್ನು ಕ್ಷಮಿಸಬೇಕು. ಇಲ್ಲ ವಾದರೆ ನೀನು ಬರೆದ ನಿನ್ನ ಪುಸ್ತಕದಿಂದ ನನ್ನ ಹೆಸರನ್ನು ಅಳಿಸಿಬಿಡು ಎಂದು ಬೇಡಿಕೊಂಡನು.

2 ಸಮುವೇಲ 24:17

ಆಗ ಕರ್ತನ ದೂತನು ಯೆಬೂಸಿ ಯನಾದ ಅರೌನನು ತುಳಿಸುವ ಕಣದ ಬಳಿಯಲ್ಲಿ ಇದ್ದನು. ದಾವೀದನು ಜನಸಂಹಾರ ದೂತನನ್ನು ನೋಡಿದಾಗ ಅವನು ಕರ್ತನಿಗೆ--ಇಗೋ, ನಾನೇ ಪಾಪಮಾಡಿದೆನು; ದುಷ್ಟತ್ವದಿಂದ ಮಾಡಿದವನು ನಾನೇ; ಆದರೆ ಈ ಕುರಿಗಳಂತಿರುವ ಜನರು ಮಾಡಿ ದ್ದೇನು? ನಿನ್ನ ಕೈ ನನಗೆ ವಿರೋಧವಾಗಿಯೂ ನನ್ನ ತಂದೆಯ ಮನೆಗೆ ವಿರೋಧವಾಗಿಯೂ ಇರಲಿ ಎಂದು ನಾನು ಬೇಡುತ್ತೇನೆ ಅಂದನು.

ರೋಮಾಪುರದವರಿಗೆ 5:7

ನೀತಿ ವಂತನಿಗೋಸ್ಕರ ಯಾರಾದರೂ ಪ್ರಾಣ ಕೊಡುವದು ಅಪರೂಪ, ಒಳ್ಳೆಯವರಿಗೋಸ್ಕರ ಪ್ರಾಣಕೊಡು ವದಕ್ಕೆ ಯಾವನಾದರೂ ಧೈರ್ಯಮಾಡಿದರೂ ಮಾಡಾನು.

ರೋಮಾಪುರದವರಿಗೆ 9:3

ಶರೀರ ಸಂಬಂಧ ವಾಗಿ ನನ್ನ ಸ್ವಜನರಾಗಿರುವ ನನ್ನ ಸಹೋದರರಿಗೊಸ್ಕರ ನಾನೇ ಕ್ರಿಸ್ತನಿಂದ ಅಗಲಿ ಶಾಪಗ್ರಸ್ತನಾಗುವದಕ್ಕೆ ಒಪ್ಪಿಕೊಂಡೇನು.

ಹೆಬ್ರಿಯರಿಗೆ 7:22

ಇದರಿಂದಲೇ ಯೇಸು ಎಷ್ಟೋ ಶ್ರೇಷ್ಠವಾದ ಒಡಂಬಡಿಕೆಗೆ ಹೊಣೆಗಾರನಾದನು.

1 ಯೋಹಾನ 3:16

ಆತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದ್ದರಲ್ಲಿಯೇ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ.

Interlinear

Choose Theme